Bengaluru 25°C

ಕ್ಷೌರ ಮಾಡುವ ವಿಚಾರಕ್ಕೆ ಜಗಳ ನಡೆದು ಕೊಲೆಯಲ್ಲಿ ಅಂತ್ಯ: ಆರೋಪಿಯ ಬಂಧನ

ಕ್ಷೌರ ಮಾಡುವ ವಿಚಾರದಲ್ಲಿ ನಡೆದ ಗಲಾಟೆಯಲ್ಲಿ ದಲಿತರೊಬ್ಬರನ್ನು ಕೊಲೆ ಮಾಡಿರುವ ಘಟನೆ ಯಲಬುರ್ಗಾದ ಸಂಗನಾಳದಲ್ಲಿ ನಡೆದಿದೆ.

ಕೊಪ್ಪಳ: ಕ್ಷೌರ ಮಾಡುವ ವಿಚಾರದಲ್ಲಿ ನಡೆದ ಗಲಾಟೆಯಲ್ಲಿ ದಲಿತರೊಬ್ಬರನ್ನು ಕೊಲೆ ಮಾಡಿರುವ ಘಟನೆ ಯಲಬುರ್ಗಾದ ಸಂಗನಾಳದಲ್ಲಿ ನಡೆದಿದೆ.


ಕ್ಷೌರಿಕ ಮುದುಕಪ್ಪ ಹಡಪದ ಕೊಲೆ ಆರೋಪಿಯಾಗಿದ್ದು, ಯಮನೂರಸ್ವಾಮಿ ಬಂಡಿಹಾಳ ಕೊಲೆಯಾದ ವ್ಯಕ್ತಿಯಾಗಿದ್ದಾರೆ. ತನ್ನ ಕ್ಷೌರ ಮಾಡಲು ಹೇಳಿದ ವ್ಯಕ್ತಿಯನ್ನು ಕೊಲೆ ಮಾಡಿರುವ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಯಲಬುರ್ಗಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


ಕೊಲೆಯಾದ ಯಮನೂರಸ್ವಾಮಿ ತಮ್ಮ ಕ್ಷೌರ ಮಾಡಲು ಮುದುಕಪ್ಪ ಅವರಿಗೆ ಹೇಳಿದ್ದ. ಆದರೆ ಜಾತಿ ಕಾರಣಕ್ಕೆ ಆ ಕೆಲಸ ಮಾಡಲು ನಿರಾಕರಿಸಿದ್ದ. ಈ ವಿಚಾರದಲ್ಲಿ ಪರಸ್ಪರ ವಾಗ್ವಾದ ನಡೆದಿತ್ತು. ಜಗಳ ತಾರಕಕ್ಕೇರಿ ಮುದುಕಪ್ಪ ಕೊಲೆ ಮಾಡಿದ್ದಾನೆ.


ಯಮನೂರ ಕ್ಷೌರ ಮಾಡಿಸಿಕೊಳ್ಳುವುದಕ್ಕೆ ಹೋಗಿದ್ದಾಗ ಮುದುಕಪ್ಪ ಮೊದಲು ಹಣ ಕೊಡುವಂತೆ ಕೇಳಿದ್ದಾನೆ. ಆದರೆ ಯಮನೂರ ಸ್ವಲ್ಪ ಹೊತ್ತು ಬಿಟ್ಟು ದುಡ್ಡು ಕೊಡುವುದಾಗಿ ಹೇಳಿದ್ದರು. ಮಾದಿಗರಿಗೆ ಕ್ಷೌರ ಮಾಡುವುದು ಕಷ್ಟ. ಅಂಥದ್ದರಲ್ಲಿ ಹಣ ಕೊಡದೇ ಕ್ಷೌರ ಮಾಡುವುದು ಹೇಗೆ ಎಂದು ಮುದುಕಪ್ಪ ಪ್ರಶ್ನಿಸಿದ್ದಾರೆ.


ಈ ಮಾತಿಗೆ ಯಮನೂರ ಆಕ್ಷೇಪ ವ್ಯಕ್ತಪಡಿಸಿದ್ದು ಜಾತಿ ನಿಂದನೆ ಮಾಡಬಾರದಾಗಿ ಎಚ್ಚರಿಕೆ ಕೊಟ್ಟಿದ್ದರು. ಇದರಿಂದ ಸಿಟ್ಟಿಗೆದ್ದ ಮುದುಕಪ್ಪ ಯಮನೂರ ಅವರ ಶರ್ಟ್​ ಹಿಡಿದು ಎಳೆದಾಡಿದ್ದ. ಈ ವೇಳೆ ಗಲಾಟೆ ನಡೆದಿದ್ದು ಆರೋಪಿ ತನ್ನ ಕೆಲಸ ಮಾಡುವ ಕತ್ತರಿಯಿಂದಲೇ ಹೊಕ್ಕಳ ಕೆಳಗೆ ಚುಚ್ಚಿ ಕೊಲೆ ಮಾಡಿದ್ದಾನೆ ಎಂದು ಎಫ್​ಐಆರ್​ನಲ್ಲಿ ದಾಖಲಾಗಿದೆ.


Nk Channel Final 21 09 2023