Bengaluru 22°C
Ad

ಜಿಲ್ಲಾಧಿಕಾರಿ ಕಚೇರಿಗೆ ಲೋಕಾಯುಕ್ತ ದಾಳಿ: ಲಂಚ ಪಡೆಯುತ್ತಿದ್ದ ಸಿಬ್ಬಂದಿ ಪೊಲೀಸರ ವಶಕ್ಕೆ

ಜಿಲ್ಲೆಯ ಜಿಲ್ಲಾಧಿಕಾರಿ ಕಚೇರಿಯಲ್ಲಿ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಇಲ್ಲಿನ ಸಿಬ್ಬಂದಿ 8.5 ಲಕ್ಷ ಲಂಚ ಪಡೆಯುವಾಗ ರೆಡ್ ಹೆಂಡ್ ಆಗಿ ಲೋಕಾಯುಕ್ತ ಅಧಿಕಾರಿಗಳ ಬಲೆಗೆ ಸಿಕ್ಕಿಬಿದ್ದಿದ್ದಾರೆ.

ಕೋಲಾರ : ಜಿಲ್ಲೆಯ ಜಿಲ್ಲಾಧಿಕಾರಿ ಕಚೇರಿಯಲ್ಲಿ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಇಲ್ಲಿನ ಸಿಬ್ಬಂದಿ 8.5 ಲಕ್ಷ ಲಂಚ ಪಡೆಯುವಾಗ ರೆಡ್ ಹೆಂಡ್ ಆಗಿ ಲೋಕಾಯುಕ್ತ ಅಧಿಕಾರಿಗಳ ಬಲೆಗೆ ಸಿಕ್ಕಿಬಿದ್ದಿದ್ದಾರೆ. ಕೋಲಾರ ಲೋಕಾಯುಕ್ತ ಎಸ್ಪಿ ಧನಂಜಯ್ಯ ನೇತೃತ್ವದಲ್ಲಿ ಕಾರ್ಯಾಚರಣೆ, ಆರೋಪಿಗಳನ್ನ ಲೋಕಾಯುಕ್ತ ಪೊಲೀಸರ ವಶಕ್ಕೆ ಪಡೆದಿದ್ದಾರೆ.

ಡಿಸಿ ಕಚೇರಿಯ ಭೂ ಪರಿವರ್ತನಾ ಶಾಖೆಯ ಸಿಬ್ಬಂದಿಗಾಳದ ಆರ್.ಐ. ಗೋಪಾಲಕೃಷ್ಣ ಹಾಗೂ ಕೇಸ್ ವರ್ಕರ್ ನಾಗೇಂದ್ರ ಆರೋಪಿಗಳು. ಭೂ ಪರಿವರ್ತನೆ ಮಾಡಿಕೊಡಲು 8.5 ಲಕ್ಷ ಲಂಚ ಪಡೆಯುವ ವೇಳೆ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.

ಹೊಸಕೋಟೆ ಮೂಲದ‌ ಮಹೇಶ್ ಎಂಬುವರಿಂದ ಭೂ ಪರಿವರ್ತನೆ ಮಾಡಿಕೊಡಲು ಲಂಚ ಸ್ವೀಕಾರ ಮಾಡುವ ವೇಳೆ ಈ ದಾಳಿಯಾಗಿದ್ದು, ಕೋಲಾರ ಜಿಲ್ಲೆ‌ ಮಾಲೂರು ತಾಲ್ಲೂಕು ಆಲಂಬಾಡಿ ಗ್ರಾಮದ 5 ಎಕರೆ ಭೂಮಿ ಪರಿವರ್ತನೆಗೆ ಮಾಡಿಕೊಡಲು ಸಿಬ್ಬಂದಿ ಹಣದ ಬೇಡಿಕೆಯಿಟ್ಟಿದ್ದರು.

Ad
Ad
Nk Channel Final 21 09 2023