Ad

ರೈತರಿಗೆ ಕೋಚಿಮುಲ್ ಬಿಗ್​ ಶಾಕ್; ಪ್ರತಿ ಲೀಟರ್​ಗೆ 2 ರೂ. ಕಡಿತ

Kochimul

ಕೋಲಾರ: ಕೋಚಿಮುಲ್ ಹಾಲಿನ ದರ ಕಡಿಮೆ ಮಾಡಿ ಕೋಲಾರ ಭಾಗದ ರೈತರಿಗೆ ಬಿಗ್​ ಶಾಕ್​ ನೀಡಿದೆ. ಹಾಲು ಉತ್ಪಾದಕರಿಗೆ ದಿಢೀರ್​​​ 2 ರೂ. ಕಡಿತ ಮಾಡಿ ಕೋಚಿಮುಲ್ ಆಡಳಿತ ಮಂಡಳಿ ಆದೇಶಿಸಿದೆ.

Ad
300x250 2

ಇನ್ನು, ಪ್ರತಿ ಲೀಟರ್ ಹಾಲಿನ ಮೇಲೆ 2 ರೂ. ಕಡಿತ ಮಾಡಲಾಗುವುದು. ಈ ಆದೇಶ ನಾಳೆ ಬೆಳಗ್ಗೆಯಿಂದಲೇ ಜಾರಿಗೆ ಬರುವಂತೆ ಕೋಚಿಮುಲ್ ಸೂಚಿಸಿದೆ. ಈ ಮೊದಲು ಲೀಟರ್ ಹಾಲಿಗೆ 33.40 ರೂ. ​ನೀಡಲಾಗುತ್ತಿತ್ತು. ಈ ಆದೇಶದ ಕಾರಣದಿಂದ ನಾಳೆಯಿಂದ ಹಾಲು ಉತ್ಪಾದಕರಿಗೆ ಪರಿಷ್ಕೃತ ದರ ಲೀಟರ್​ಗೆ 31.40 ರೂ ನೀಡಲಾಗುತ್ತದೆ.

ಜನವರಿಯಲ್ಲಿ ಪ್ರತಿ ದಿನ ಕೋಚಿಮುಲ್​ಗೆ 9.65 ಲಕ್ಷ ಲೀಟರ್ ಹಾಲು ಸಂಗ್ರಹವಾಗಿತ್ತು. ಕಳೆದ ತಿಂಗಳು ಜೂನ್​​ನಲ್ಲಿ ಪ್ರತಿ ದಿನ ಕೋಚಿಮುಲ್​ಗೆ 12.37 ಲಕ್ಷ ಲೀಟರ್ ಹಾಲು ಸಂಗ್ರಹವಾಗಿದೆ. ಕೋಲಾರ ಮತ್ತು ಚಿಕ್ಕಬಳ್ಳಾಪುರದಿಂದ ಮಾತ್ರವೇ 2.50 ಲಕ್ಷ ಲೀಟರ್​ ಹಾಲು ಹೆಚ್ಚಳವಾಗಿದೆ. ಹಾಗಾಗಿ ಕೋಚಿಮುಲ್ ಈ ನಿರ್ಧಾರ ಕೈಗೊಂಡಿದೆ.

Ad
Ad
Nk Channel Final 21 09 2023
Ad