Ad

ಬ್ಲಾಸ್ಟ್ ವೇಳೆ ಟ್ರಾಕ್ಟರ್, ಹಿಟಾಚಿ ಮೇಲೆ ಉರುಳಿ ಬಿದ್ದ ಬಂಡೆ: ಮೂವರು ಕಾರ್ಮಿಕರು ನಾಪತ್ತೆ

ಬಂಡೆಕಲ್ಲು ಬ್ಲಾಸ್ಟ್ ಮಾಡುವಾಗ ಬೃಹತ್ ಗಾತ್ರದ ಬಂಡೆ ಟ್ರಾಕ್ಟರ್, ಹಿಟಾಚಿ ಮೇಲೆ ಉರುಳಿ ಬಿದಿದ್ದು, ಮೂವರು ಕಾರ್ಮಿಕರು ಕಣ್ಮರೆಯಾಗಿರುವ  ಘಟನೆ ಕೋಲಾರದ ಮಾಲೂರು ತಾಲೂಕಿನ ಟೇಕಲ್ ಹೋಬಳಿಯ ಹಳೇಪಾಳ್ಯ ಗ್ರಾಮದ ಬಳಿ ನಡೆದಿದೆ.

ಕೋಲಾರ: ಬಂಡೆಕಲ್ಲು ಬ್ಲಾಸ್ಟ್ ಮಾಡುವಾಗ ಬೃಹತ್ ಗಾತ್ರದ ಬಂಡೆ ಟ್ರಾಕ್ಟರ್, ಹಿಟಾಚಿ ಮೇಲೆ ಉರುಳಿ ಬಿದಿದ್ದು, ಮೂವರು ಕಾರ್ಮಿಕರು ಕಣ್ಮರೆಯಾಗಿರುವ  ಘಟನೆ ಕೋಲಾರದ ಮಾಲೂರು ತಾಲೂಕಿನ ಟೇಕಲ್ ಹೋಬಳಿಯ ಹಳೇಪಾಳ್ಯ ಗ್ರಾಮದ ಬಳಿ ನಡೆದಿದೆ.

Ad
300x250 2

ಬ್ಲಾಸ್ಟ್ ವೇಳೆ ಬೃಹತ್ ಗಾತ್ರದ ಬಂಡೆಗಳು ಉರುಳಿ ಬಿದ್ದ ಪರಿಣಾಮ ಟ್ರಾಕ್ಟರ್, ಹಿಟಾಚಿ ಜಖಂಗೊಂಡಿದೆ. ಮೂವರು ಕಾರ್ಮಿಕರು ಕಣ್ಮರೆಯಾಗಿದ್ದು,  ಬಂಡೆ ಕಲ್ಲಿನಡಿ ಏನಾದರೂ ಸಿಲುಕಿದ್ದರಾ ಎಂಬ ಆತಂಕ ಹೆಚ್ಚಾಗಿದೆ. ಸುಮಾರು 10ಕ್ಕೂ ಹೆಚ್ಚು ಕೂಲಿ ಕಾರ್ಮಿಕರು ಕೆಲಸ ಮಾಡುತ್ತಿದ್ದರು ಎನ್ನಲಾಗಿದೆ.

ಮಂಜುನಾಥ್ ಎಂಬುವರಿಗೆ ಸೇರಿದ ಸ್ಥಳದಲ್ಲಿ ಗಣಿಗಾರಿಕೆ ನಡೆಯುತ್ತಿತ್ತು. ಸ್ಥಳಕ್ಕೆ ಟೇಕಲ್ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಘಟನೆ ನಡೆದು ಗಂಟೆಗಳೇ ಕಳೆದರೂ ಗಣಿ ಅಧಿಕಾರಿಗಳು ಸ್ಥಳಕ್ಕೆ ಬಂದಿಲ್ಲ. ಹೀಗಾಗಿ ಗಣಿ ಅಧಿಕಾರಿಗಳ ವಿರುದ್ಧ ಗ್ರಾಮಸ್ಥರು ಆಕ್ರೋಶ ಹೊರಹಾಕಿದ್ದಾರೆ. ಸದ್ಯ ಕಣ್ಮರೆಯಾಗಿರುವ ಕಾರ್ಮಿಕರಿಗಾಗಿ ಹುಡುಕಾಟ ನಡೆದಿದೆ ಎಂಬ ಮಾಹಿತಿ ತಿಳಿದು ಬಂದಿದೆ.

Ad
Ad
Nk Channel Final 21 09 2023
Ad