Bengaluru 19°C

ಕಾಡಿನಿಂದ ನಾಡಿಗೆ ಬಂದ ಕಾಡಾನೆ ಸೆರೆ

ಕಾಡಿನಿಂದ ನಾಡಿಗೆ ಬಂದ ಕಾಡಾನೆ ಸೆರೆಯಾಗಿರುವ ಘಟನೆ ಸೋಮವಾರಪೇಟೆ ತಾಲ್ಲೂಕಿನ ಕಾಜೂರು ಗ್ರಾಮ ವ್ಯಾಪ್ತಿಯಲ್ಲಿ ನಡೆದಿದೆ.

ಕೊಡಗು : ಕಾಡಿನಿಂದ ನಾಡಿಗೆ ಬಂದ ಕಾಡಾನೆ ಸೆರೆಯಾಗಿರುವ ಘಟನೆ ಸೋಮವಾರಪೇಟೆ ತಾಲ್ಲೂಕಿನ ಕಾಜೂರು ಗ್ರಾಮ ವ್ಯಾಪ್ತಿಯಲ್ಲಿ ನಡೆದಿದೆ.


ನಾಡಿನಲ್ಲಿ ದಾಂದಲೆ ಮಾಡುತ್ತಿದ್ದ ಕಾಡನೆಯನ್ನು ಅರಣ್ಯ ಇಲಾಖೆ ಯಡೆಮುರಿ ಕಟ್ಟಿದ್ದಾರೆ. ಗ್ರಾಮದ ಜನರಲ್ಲಿ ಆತಂಕ‌ ಉಂಟು ಮಾಡಿದ ರೌಡಿ ರಂಗ ಕಜೂರು ಕರ್ಣ ಎಂದ್ದೆ ಹೆಸರು ಮಾಡಿದ್ದ ಆನೆ ಸೆರೆಯಾಗಿದೆ.


ದುಬಾರೆ ಸಾಕಾನೆಗಳ ಸಹಾಯದಿಂದ ಕಾಡಾನೆ ಸೆರೆ‌ಯಾಗಿದೆ. ದಸರಾ ಆನೆ ಪ್ರಶಾಂತ ನೇತ್ರತ್ವದ 4 ಸಾಕಾನೆಗಳ ತಂಡದಿಂದ ಕಾರ್ಯಾಚರಣೆ ಮಾಡಲಾಗಿದೆ. 30 ಕ್ಕೂ ಹೆಚ್ಚು ಅರಣ್ಯ ಸಿಬ್ಬಂದಿಯಿಂದ ಕಾರ್ಯಚರಣೆ ನಡೆಸಲಾಗಿದೆ.


ಹಲವು ದಿನಗಳಿಂದ ಗ್ರಾಮದ ಸುತ್ತಮುತ್ತಲಿನಲ್ಲಿ ಕಾಡಾನೆ ದಾಂದಲೆ ಮಾಡುತ್ತಿತ್ತು. ಕಾಡಾನೆ ಸೆರೆಯಿಂದ ಗ್ರಾಮದ ಜನ ನಿಟ್ಟೂಸಿರು ಬಿಟ್ಟಿದ್ದಾರೆ. ಕಾಫಿ ತೋಟ, ಬೆಳೆ ಮೇಲೆ ದಾಳಿ ಮಾಡುತ್ತಿದ್ದ ಕಾಡಾನೆ ಸೆರೆಯಾಗಿದೆ.


Nk Channel Final 21 09 2023