Bengaluru 23°C
Ad

ಕೋಟೆ ಬೆಟ್ಟಕ್ಕೆ ಬಂದಿದ್ದ ಪುತ್ತೂರು ಪ್ರವಾಸಿಗರ ಮೇಲೆ ಹಲ್ಲೆ !

Puttur

ಕೊಡಗು: ಜಿಲ್ಲೆಯ ಸೋಮವಾರಪೇಟೆಯ ಕೋಟಬೆಟ್ಟಕ್ಕೆ ಕುಟುಂಬ ಸಮೇತ ಪ್ರವಾಸಕ್ಕೆ ಬಂದಿದ್ದವರ ಮೇಲೆ ಬೈಕ್​ನಲ್ಲಿ ಬಂದ ಇಬ್ಬರು ವ್ಯಕ್ತಿಗಳು ಗಲಾಟೆ ಮಾಡಿ, ಹಲ್ಲೆ ಮಾಡಿರುವ ಆರೋಪ ಕೇಳಿಬಂದಿದೆ.

Ad
300x250 2

ರಸ್ತೆಯಲ್ಲಿ ವಾಹನ ಹೋಗವ ವಿಚಾರಕ್ಕೆ ಗಲಾಟೆ ಶುರು ಮಾಡಿದ್ದು, ನಂತರ ಹೆಲ್ಮೆಟ್​ನಿಂದ ಹಲ್ಲೆ ಮಾಡಿದ್ದಾರೆ. ಈ ದೃಶ್ಯಗಳು ಮೊಬೈಲ್ ನಲ್ಲಿ ಸೆರೆಯಾಗಿದ್ದು, ಮಕ್ಕಳು, ಮಹಿಳೆಯರು ಭಯದಿಂದ ಚೀರಾಡುತ್ತಿರುವುದು ಕಾಣಿಸುತ್ತಿದೆ.

ಪುತ್ತೂರಿನಿಂದ ಮಕ್ಕಳು, ಮಹಿಳೆಯರು ಸೇರಿದಂತೆ ಕುಟುಂಬ ಪ್ರವಾಸಕ್ಕೆಂದು ಸೋಮವಾರಪೇಟೆಯ ಕೋಟಬೆಟ್ಟ ಪ್ರವಾಸಿ ತಾಣಕ್ಕೆ ಆಗಮಿದ್ದರು. ಈ ವೇಳೆ ಬೈಕಿನಲ್ಲಿ ಬಂದ ಇಬ್ಬರು ಪುಂಡರು ಹಲ್ಲೆ ನಡೆಸಿದ್ದಾರೆ. ಇಬ್ಬರು ಮಾದಾಪುರ ಸಮೀಪದ ನಿವಾಸಿಗಳೆಂಬ ಶಂಕೆ ವ್ಯಕ್ತವಾಗಿದ್ದು, ಆರೋಪಿಗಳು ಪ್ರವಾಸಿಗರ ಮೇಲೆ ಹೆಲ್ಮೆಟ್​ನಿಂದ ಹಲ್ಲೆ ಮಾಡಿದ್ದಾರೆ. ಇಬ್ಬರು ಆರೋಪಿಗಳು ಹಲ್ಲೆ ಮಾಡಿದ್ದಲ್ಲೆ ಪ್ರವಾಸಿಗರ ಚಿನ್ನದ ಸರವನ್ನು ಎಗರಿಸಿ ಬೈಕನ್ನು ಅಲ್ಲೇ ಬಿಟ್ಟು ಪರಾರಿಯಾಗಿದ್ದಾರೆ.

ಇನ್ನು ದೌರ್ಜನ್ಯಕ್ಕೆ ಒಳಗಾದವರು ಮಾದಾಪುರ ಉಪ ಠಾಣಾ ಪೊಲೀಸರಿಗೆ ದೂರು ನೀಡಿದ್ದಾರೆ.

Ad
Ad
Nk Channel Final 21 09 2023
Ad