Ad

ಕೊಡಗಿನಲ್ಲಿ ಭಾರೀ ಲಾರಿಗಳ ಸಂಚಾರ ನಿರ್ಬಂಧಕ್ಕೆ ಆಕ್ಷೇಪ

ಕೊಡಗು ಜಿಲ್ಲೆಯ ವ್ಯಾಪ್ತಿಯಲ್ಲಿ 18 ಟನ್ ಗಿಂತ ಮೇಲ್ಪಟ್ಟು ಸಾಮಾಗ್ರಿಗಳನ್ನು ಹೊತ್ತ ಲಾರಿಗಳ ಓಡಾಟಕ್ಕೆ ಜಿಲ್ಲಾಧಿಕಾರಿಗಳು ನಿಷೇಧ ಹೇರಿರುವ ಬಗ್ಗೆ ವಿಧಾನ ಪರಿಷತ್ ಮಾಜಿ ಸದಸ್ಯರಾದ ಸಿ.ಎಸ್.ಅರುಣ್ ಮಾಚಯ್ಯನವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಮಡಿಕೇರಿ; ಕೊಡಗು ಜಿಲ್ಲೆಯ ವ್ಯಾಪ್ತಿಯಲ್ಲಿ 18 ಟನ್ ಗಿಂತ ಮೇಲ್ಪಟ್ಟು ಸಾಮಾಗ್ರಿಗಳನ್ನು ಹೊತ್ತ ಲಾರಿಗಳ ಓಡಾಟಕ್ಕೆ ಜಿಲ್ಲಾಧಿಕಾರಿಗಳು ನಿಷೇಧ ಹೇರಿರುವ ಬಗ್ಗೆ ವಿಧಾನ ಪರಿಷತ್ ಮಾಜಿ ಸದಸ್ಯರಾದ ಸಿ.ಎಸ್.ಅರುಣ್ ಮಾಚಯ್ಯನವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

Ad
300x250 2

ಭಾರೀ ಲಾರಿಗಳ ನಿಷೇಧದಿಂದ ಕೊಡಗಿನ ರೈತರು ಶೋಷಣೆಗೆ ಒಳಗಾಗುತ್ತಿದ್ದಾರೆ ಕೊಡಗಿಗೆ ಬರುವ ಗೊಬ್ಬರ ಲಾರಿಗಳೆಲ್ಲವೂ 16 ಚಕ್ರದ ಲಾರಿಗಳಲ್ಲಿ 50ಕ್ಕೂ ಹೆಚ್ಚು ಟನ್ ಗೊಬ್ಬರಗಳನ್ನು ಹೊತ್ತು ತರುತ್ತಿವೆ ಕಡಿಮೆ ಟನ್ ನ ಗೊಬ್ಬರವನ್ನು ಹೊತ್ತು ತಂದರೆ ಬರೆ ಬೀಳುವುದು ರೈತರಿಗೆ ಈ ಲಾರಿಗಳನ್ನು ತಡೆಹಿಡಿಯಲು ಸಾಧ್ಯವೇ ಎಂದು ಪ್ರಶ್ನಿಸಿರುವ ಅರುಣ್ ಮಾಚಯ್ಯ,ಮೈಸೂರು ಹಾಸನ ಮಂಗಳೂರು ಕಡೆಯಿಂದ ಬರುವ ಗೊಬ್ಬರ ವಾಹನಗಳನ್ನು, ಸಿಮೆಂಟ್, ಕಬ್ಬಿಣ ಹೊತ್ತ ಲಾರಿಗಳು ಕೂಡ ಕೊಡಗನ್ನು ಪ್ರವೇಶಿಸಬೇಕಾಗಿದೆ.

ತಮಿಳುನಾಡಿನಿಂದ ಸಂಪಾಜೆ ಮಾರ್ಗವಾಗಿ ಮಂಗಳೂರಿಗೆ ಕಂಟೇನರ್ ಗಳು ಹೋಗುತ್ತಿವೆ, ಬೆಂಗಳೂರು ಚೆನ್ನೈ ಯಿಂದ ಆನೆಚೌಕೂರು, ಮಾಕುಟ್ಟ ಮಾರ್ಗವಾಗಿ ಕೇರಳಕ್ಕೆ ಲಾರಿಗಳು ಹೋಗುತ್ತಿವೆ ಇದನ್ನು ತಡೆಯಲು ಸಾಧ್ಯವೇ? ಎಲ್ಲೂ ಇಲ್ಲದ ನಿರ್ಬಂಧ ಕೇವಲ ಕೊಡಗಿನಲ್ಲಿ ಮಾತ್ರ ಹೇರಿದರೆ ಕೊಡಗಿನ ಮೂಲಕ ಬೇರೆ ರಾಜ್ಯಕ್ಕೆ ಮತ್ತು ಜಿಲ್ಲೆಗೆ ಹೋಗೋ ಲಾರಿಗಳನ್ನು ತಡೆಯಲು ಸಾಧ್ಯವೇ ಎಂದು ಅರುಣ್ ಮಾಚಯ್ಯನವರು ಪ್ರಶ್ನಿಸಿದ್ದಾರೆ. ಅದೇ ರೀತಿ ರೈತರು ಈಗಾಗಲೇ ಕಟಾವು ಮಾಡಿದ ಮರಗಳನ್ನು ಸಾಗಿಸಲು 18 ಟನ್ ಮೇಲ್ಪಟ್ಟ ಲಾರಿಗಳ ಸಂಚಾರವನ್ನು ನಿರ್ಬಂಧ ಹೇರಿದ್ದರಿಂದ ಹಲವಾರು ಕಾರ್ಮಿಕರಿಗೆ ಬದುಕು ಕಟ್ಟಿಕೊಳ್ಳಲು ಸಾಧ್ಯವಾಗುತ್ತಿಲ್ಲ.

ಮರಗಳ ಸಾಗಾಟಕ್ಕೆ ನಿರ್ಬಂಧ ಹೇರಿದ್ದರು ರಾತ್ರಿ ಹೊತ್ತು ತಿತಿಮತಿ, ಮಕುಟ್ಟ ಸಂಪಾಜೆ ಗೇಟ್ ಗಳ ಮೂಲಕ ಟಾರ್ಪಲ್ ಹಾಕಿ ಲಾರಿಗಳು ಸಾಗುತ್ತಿವೆ. ಜಿಲ್ಲಾಧಿಕಾರಿಗಳು ಹೊರಡಿಸಿರುವ ನಿರ್ಬಂಧದಿಂದ ಕೆಲವು ಸಂಬಂಧಪಟ್ಟ ಇಲಾಖೆಯವರಿಗೆ ಪರೋಕ್ಷವಾಗಿ ಭ್ರಷ್ಟಾಚಾರಕ್ಕೆ ಸಹಕಾರ ನೀಡಿದಂತಾಗಿದೆ. ಅವೈಜ್ಞಾನಿಕವಾದ ಈ ಆದೇಶವನ್ನು ಕೂಡಲೇ ಜಿಲ್ಲಾಧಿಕಾರಿಗಳ ರದ್ದು ಪಡಿಸುವಂತೆ ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದ್ದಾರೆ.

Ad
Ad
Nk Channel Final 21 09 2023
Ad