Bengaluru 21°C
Ad

ವೇತನ ಸ್ಥಗಿತ: ಕೆಎಸ್‌ಆರ್‌ಟಿಸಿಯ 48 ಹೊರಗುತ್ತಿಗೆ ಚಾಲಕರ ದಿಢೀರ್‌ ಪ್ರತಿಭಟನೆ

ಸರಿಯಾಗಿ ವೇತನ ಪಾವತಿಯಾಗದ್ದಕ್ಕೆ ಕರ್ತವ್ಯ ಸ್ಥಗಿತಗೊಳಿಸಿ ಕೆಎಸ್‌ಆರ್‌ಟಿಸಿಯ 48 ಹೊರಗುತ್ತಿಗೆ ಚಾಲಕರು ದಿಢೀರ್‌ ಪ್ರತಿಭಟನೆ ನಡೆಸಿದ ಘಟನೆ ಮಡಿಕೇರಿಯಲ್ಲಿ ‌ಇಂದು ಬೆಳಿಗ್ಗೆ ನಡೆದಿದೆ.

ಮಡಿಕೇರಿ: ಸರಿಯಾಗಿ ವೇತನ ಪಾವತಿಯಾಗದ್ದಕ್ಕೆ ಕರ್ತವ್ಯ ಸ್ಥಗಿತಗೊಳಿಸಿ ಕೆಎಸ್‌ಆರ್‌ಟಿಸಿಯ 48 ಹೊರಗುತ್ತಿಗೆ ಚಾಲಕರು ದಿಢೀರ್‌ ಪ್ರತಿಭಟನೆ ನಡೆಸಿದ ಘಟನೆ ಮಡಿಕೇರಿಯಲ್ಲಿ ‌ಇಂದು ಬೆಳಿಗ್ಗೆ ನಡೆದಿದೆ.

ಸರಿಯಾದ ವೇತನ ಸಿಗದಕ್ಕೆ ಇರುವುದರಿಂದ ಇಂದು ಬೆಳಿಗ್ಗೆಯಿಂದಲೇ ಬಸ್ಸುಗಳನ್ನು ರಸ್ತೆಗೆ ಇಳಿಸದೇ ಪ್ರತಿಭಟನೆ ನಡೆಸುತ್ತಿದ್ದು ಹಲವು ಮಾರ್ಗಗಳಲ್ಲಿ ಬಸ್‌ ಸಂಚಾರ ಬಂದ್‌ ಆಗಿದೆ. ಹೊರಗುತ್ತಿಗೆ ಆಧಾರದಲ್ಲಿ ನೇಮಕವಾಗಿದ್ದ ಬಸ್ಸು ಚಾಲಕರು ಪೂಜ್ಯಾಯ ಸೆಕ್ಯುರಿಟಿ ಏಜೆನ್ಸಿ ಮೂಲಕ ಕರ್ತವ್ಯ ನಿರ್ವಹಿಸುತ್ತಿದ್ದರು. ಈ ಹಿಂದೆ ಇದ್ದ ಏಜೆನ್ಸಿ ಪ್ರತಿ ತಿಂಗಳು 23 ಸಾವಿರ ರೂ. ಸಂಬಳ ನೀಡುತ್ತಿತ್ತು.

ಆದರೆ ಈ ಏಜೆನ್ಸಿ ಬದಲಾಗಿದ್ದು ಪೂಜ್ಯಾಯ ಸೆಕ್ಯುರಿಟಿ ಏಜೆನ್ಸಿ 13, 14 ಸಾವಿರ ರೂ. ಪಾವತಿಸುತ್ತಿದೆ. ಹಲವು ದಿನಗಳ ಬಳಿಕ ಒತ್ತಾಯದ ಬಳಿಕ ಶುಕ್ರವಾರ ಅರ್ಧ ಸಂಬಳ ಪಾವತಿಸಿದ್ದಾರೆ. ಸಿಎಲ್ ರಜೆ ಕೊಡದ ಏಜೆನ್ಸಿ ಯಾವುದೇ ಅಪಘಾತವಾದರೂ ಚಾಲಕರನ್ನೇ ಹೊಣೆ ಮಾಡುತ್ತಿದೆ. ಏಜೆನ್ಸಿ ಪೂರ್ಣ ಪ್ರಮಾಣದ ವೇತನ ಹಾಕುವವರೆಗೂ ಬಸ್ಸು ಸಂಚಾರ ಅರಂಭ ಮಾಡುವುದಿಲ್ಲ ಎಂದು 48 ಬಸ್ಸು ಚಾಲಕರು ಪಟ್ಟು ಹಿಡಿದ್ದಾರೆ.

 

Ad
Ad
Nk Channel Final 21 09 2023