Ad

ಬಿರಿಯಾನಿ ಹೋಟೆಲ್‌ ಕಟ್ಟಡ ದಿಢೀರ್ ಕುಸಿತ : ಕಾರ್ಮಿಕರ ರಕ್ಷಣೆ

ಕೊಡಗಿನ ಗೋಣಿಕೊಪ್ಪಲು ಪಟ್ಟಣದಲ್ಲಿ ಅಂಬೂರ್ ಬಿರಿಯಾನಿ ಕಟ್ಟಡ ಇಂದು(ಗುರುವಾರ) ಮಧ್ಯಾಹ್ನ 12 ಗಂಟೆಗೆ ಸುಮಾರಿಗೆ ದಿಢೀರ್ ಕುಸಿತವಾಗಿದೆ. ಇನ್ನೂ ಕಟ್ಟಡದ ಅವಷೇಶಗಳಡಿಯಲ್ಲಿ ಸಿಲುಕಿದ್ದ 8 ಮಂದಿ ಕಾರ್ಮಿಕರಲ್ಲಿ ಐವರನ್ನು ರಕ್ಷಣೆ ಮಾಡಲಾಗಿದೆ.

ಕೊಡಗು: ಕೊಡಗಿನ ಗೋಣಿಕೊಪ್ಪಲು ಪಟ್ಟಣದಲ್ಲಿ ಅಂಬೂರ್ ಬಿರಿಯಾನಿ ಕಟ್ಟಡ ಇಂದು(ಗುರುವಾರ) ಮಧ್ಯಾಹ್ನ 12 ಗಂಟೆಗೆ ಸುಮಾರಿಗೆ ದಿಢೀರ್ ಕುಸಿತವಾಗಿದೆ. ಇನ್ನೂ ಕಟ್ಟಡದ ಅವಷೇಶಗಳಡಿಯಲ್ಲಿ ಸಿಲುಕಿದ್ದ 8 ಮಂದಿ ಕಾರ್ಮಿಕರಲ್ಲಿ ಐವರನ್ನು ರಕ್ಷಣೆ ಮಾಡಲಾಗಿದೆ.

Ad
300x250 2

ಸ್ಥಳಕ್ಕೆ ಅಗ್ನಿಶಾಮಕ ದಳ ದೌಡಾಯಿಸಿದ್ದು, ಕಟ್ಟಡದೊಳಗೆ ಸಿಲುಕಿಕೊಂಡಿರುವವರನ್ನು ಹೊರ ತೆಗೆಯುವ ಕಾರ್ಯಾಚರಣೆ ನಡೆಯುತ್ತಿದೆ.ಗಾಯಾಳುಗಳನ್ನು ಗೋಣಿಕೊಪ್ಪ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಪೊಲೀಸ್ ಹಾಗೂ ಅಗ್ನಿಶಾಮಕ ಸಿಬ್ಬಂದಿಯಿಂದ ಕಾರ್ಯಾಚರಣೆ ಮುಂದುವರಿದಿದೆ. ಗೋಣಿಕೊಪ್ಪದ ಉತ್ತಯ, ತಿಮ್ಮಯ್ಯ ಇಬ್ಬರಿಗೆ ಸೇರಿದ ಕಟ್ಟಡ ಇದಾಗಿದ್ದು, ಶಿಥಿಲಾವಸ್ಥೆಯಲ್ಲಿದ್ದ ಹಳೆಯದಾದ ಕಟ್ಟಡ‌ ಎನ್ನಲಾಗಿದೆ.

Ad
Ad
Nk Channel Final 21 09 2023
Ad