ಕೊಡಗು: ಫೆಂಗಲ್ ಚಂಡಮಾರುತದ ಎಫೇಕ್ಟ್ ನಿಂದಾಗಿ ಇಂದು ಕೊಡಗು ಜಿಲ್ಲೆಯಲ್ಲಿ ಮಳೆಯ ಸಿಂಚನವಾಗುತ್ತಿದೆ. ಫೆಂಗಲ್ ಸೈಕ್ಲೋನ್ ಎಫೇಕ್ಟ್ ಕೊಡಗು ಜಿಲ್ಲೆಗೆ ತಟ್ಟಿದ್ದು ಜಿಲ್ಲೆಯ ಹಲವೆಡೆ ಮಳೆಯ ಸಿಂಚನವಾಗುತ್ತಿದೆ.
ಕಳೆದ ಎರಡು ದಿನಗಳಿಂದ ಜಿಲ್ಲೆಯಲ್ಲಿ ಮೋಡ ಕವಿದ ವಾತಾವರಣವಿದ್ದು ಇಂದು ಮುಂಜೆಯಿಂದಲೆ ಜಿಲ್ಲೆಯಲ್ಲಿ ಮಳೆಯಾಗುತ್ತಿದೆ. ಅಕಾಲಿಕ ಮಳೆಯಿಂದಾಗಿ ವಾಹನ ಸವಾರರು, ಪಾದಚಾರಿಗಳು ಕಿರಿ ಕಿರಿ ಅನುಭವಿಸುತ್ತಿದ್ದಾರೆ.
ಅಷ್ಟುಮಾತ್ರವಲ್ಲ ಫೆಂಗಲ್ ಚಂಡಮಾರುತದ ಎಫೇಕ್ಟ್ ಕೊಡಗಿನ ರೈತರ ಮೇಲು ವ್ಯತಿರಿಕ್ತ ಪರಿಣಾಮ ಬೀರುತ್ತಿದೆ. ಈ ಸಮದಲ್ಲಿ ಮಳೆಯಾಗುತ್ತಿರೋದು ಕೊಡಗನ ವಾಣಿಜ್ಯ ಬೆಳೆಗಳಾದ ಕಾಫಿ, ಕಾಳುಮೆಣಸು ಬೆಳೆಗಳಿಗೂ ಬಹಳ ಎಫೇಕ್ಟ್ ಬೀರಿದೆ ಅಷ್ಟುಮಾತ್ರವಲ್ಲ ಭತ್ತ ಕೊಯ್ಲು ಸಮಯವಕೂಡ ಆರಂಭವಾಗಿರೋದ್ರಿಂದ ಭತ್ತದ ಕೃಷಿ ಮೇಲು ಮಳೆ ಬಹಳ ಎಫೇಕ್ಟ್ ಬೀರಿದ್ದು,
ಅಕಾಲಿಕ ಮಳೆಯಿಂದ ಕೊಡಗಿನ ರೈತರು ಕೂಡ ಕಂಗಲ್ಲಾಗಿದ್ದಾರೆ. ಜಿಲ್ಲೆಯಲ್ಲಿ ಮುಂದಿನ 5 ದಿನ ಮಳೆಯಾಗಲಿದ್ದೆ ಎಂದು ಭಾರತೀಯ ಹವಮಾನ ಇಲಾಖೆ ಮುನ್ಸೂಚನೆ ನೀಡಿದ್ದು, ಇಂದು ಜಿಲ್ಲೆಯಲ್ಲಿ ಆರೆಂಜ್ ಅಲರ್ಟ್ ಘೋಷಿಸಲಾಗಿದೆ.