Ad

ಆಶಾ ಕಿರಣ ಕಲಾ ಟ್ರಸ್ಟ್‌ನಿಂದ ಅಸಕ್ತ ಕುಟುಂಬಗಳಿಗೆ ಅಗತ್ಯ ಸಾಮಾಗ್ರಿ ಆಹಾರ ವಿತರಣೆ

ಜಿಲ್ಲೆಯ ಸೋಮವಾರಪೇಟೆ ತಾಲೂಕಿನಲ್ಲಿ ಮಳೆ ಗಾಳಿಗೆ ಸಂಪೂರ್ಣವಾಗಿ ಮನೆ ಬಿದ್ದಂತವರಿಗೆ ಹಾಗೂ ಟಾರ್ಪಲ್ ಮನೆಯಲ್ಲಿದ್ದು ಕಷ್ಟಪಡುತ್ತಿರುವವರಿಗೆ ಆಹಾರ ಸಾಮಗ್ರಿಗಳನ್ನು ವಿತರಿಸಲಾಗಿದೆ.

ಕೊಡಗು: ಜಿಲ್ಲೆಯ ಸೋಮವಾರಪೇಟೆ ತಾಲೂಕಿನಲ್ಲಿ ಮಳೆ ಗಾಳಿಗೆ ಸಂಪೂರ್ಣವಾಗಿ ಮನೆ ಬಿದ್ದಂತವರಿಗೆ ಹಾಗೂ ಟಾರ್ಪಲ್ ಮನೆಯಲ್ಲಿದ್ದು ಕಷ್ಟಪಡುತ್ತಿರುವವರಿಗೆ ಆಹಾರ ಸಾಮಗ್ರಿಗಳನ್ನು ವಿತರಿಸಲಾಗಿದೆ.

ಮನೆ ಬಿರುಕು ಬಿದ್ದು ಬೀಳುವ ಹಂತದಲ್ಲಿರುವ ತೊಂದರೆಯಲ್ಲಿರುವ ಕುಟುಂಬಸ್ಥರಿಗೆ ಹಾಗೂ ಅನಾರೋಗ್ಯ ಸರಿಯಿಲ್ಲದ ಕುಟುಂಬಸ್ಥರಿಗೆ ಆಶಾ ಕಿರಣ ಕಲಾ ಟ್ರಸ್ಟ್ ಅಧ್ಯಕ್ಷರಾದ ಮಾಲತಿ ರವರು ಚಲನಚಿತ್ರ ಮತ್ತು ಕಿರುತೆರೆ ಎಲ್ಲಿ ಇವರು ನಟಿಸುತ್ತಿದ್ದು ಕೊಡಗಿನ ಗ್ರಾಮೀಣ ಭಾಗದಲ್ಲಿ ಮಳೆಗಾಳಿಗೆ ಹೆಚ್ಚಾಗಿ ಮನೆಗಳು ಬಿದ್ದು ಹೋಗಿರುವುದನ್ನು ಹಾಗೂ ಟಾರ್ಪಲ್ ಮನೆಯಲ್ಲಿರುವವರನ್ನು ಬಗ್ಗೆ ಸೋಮವಾರಪೇಟೆ ತಾಲೂಕು ಅಧ್ಯಕ್ಷರಾದ ಫ್ರಾನ್ಸಿಸ್ ಡಿಸೋಜರವರ ಆಶಾಕಿರಣ ಕಲಾ ಟ್ರಸ್ಟ್ ಅಧ್ಯಕ್ಷರಾದ ಮಾಲತಿ ಮೇಡಂ ಅವರನ್ನು ಕರವೇ ಫ್ರಾನ್ಸಿಸ್ ಡಿಸೋಜರವರು ಫೋನ್ ನಲ್ಲಿ ಸಂಪರ್ಕಿಸಿ ಸಹಾಯ ಮಾಡಿದ್ದಾರೆ.

ಊರಿನಲ್ಲಿ ಮಳೆಯಿಂದಾಗಿ ಮನೆ ಬಿದ್ದುಹೋಗಿ ಹಾಗೂ ಟಾರ್ಪಲ್ ಮನೆಗಳಲ್ಲಿ ಇವರಿಗೆ ನಿಮ್ಮ ಟ್ರಸ್ಟ್ ಕಡೆಯಿಂದ ಆಹಾರ ಸಾಮಗ್ರಿಗಳನ್ನು ಕೊಡಿ ಎಂದು ಕೇಳಿಕೊಂಡ ಮೇರೆಗೆ ಅವರು ಒಪ್ಪಿಕೊಂಡು ತಮ್ಮ ಊರಿನಲ್ಲಿ ಎಷ್ಟು ಜನರಿಗೆ ತೊಂದರೆ ಆಗಿದೆ ಎಂದು ಒಂದು ಲಿಸ್ಟ್ ಕೊಡಿ ಕೇಳಿದ ಮೇರೆಗೆ ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಫ್ರಾನ್ಸಿಸ್ ಡಿಸೋಜರವರು ಮನೆ ಬಿದ್ದು ಹೋದ ಕುಟುಂಬಸ್ಥನ ಸಂಪರ್ಕಿಸಿ ಹಾಗೂ ಟಾರ್ಪಲ್ ಮನೆಯಲ್ಲಿರುವ ಕುಟುಂಬದವರನ್ನು ಸಂಪರ್ಕಿಸಿ ಒಟ್ಟು 27 ಆಹಾರ ಸಾಮಗ್ರಿಗಳನ್ನು ಬೇಕೆಂದು ಆಶಾ ಕಿರಣ ಟ್ರಸ್ಟ್ ಅಧ್ಯಕ್ಷರಿಗೆ ತಿಳಿಸಿದ ಮೇರೆಗೆ ಟ್ರಸ್ಟ್ ಕಡೆಯಿಂದ ಆಹಾರ ಸಮಗ್ರಗಳನ್ನು ಕೊಡುತ್ತವೆ ಎಂದು ತುಂಬು ಹೃದಯದಿಂದ ಒಪ್ಪಿಕೊಂಡಿದ್ದಾರೆ.

ಬಳಿಕ ಟ್ರಸ್ಟ್ ಅಧ್ಯಕ್ಷ ಮಾಲತಿ ಮೇಡಂ ರವರು ಬೆಂಗಳೂರಿನಿಂದ ಮೈಸೂರಿಗೆ ಬಂದು ಮೈಸೂರಿನಲ್ಲಿ ಆಹಾರ ಸಾಮಗ್ರಿಗಳನ್ನು ತೆಗೆದುಕೊಂಡು ಕರ್ನಾಟಕ ರಕ್ಷಣಾ ವೇದಿಕೆ ಫ್ರಾನ್ಸಿಸ್ ಡಿಸೋಜರವರಿಗೆ ಮೈಸೂರಿಗೆ ಬರಲು ಹೇಳಿ ಮೈಸೂರಿನಿಂದ ಆಹಾರ ಸಾಮಗ್ರಿಗಳನ್ನು ಬಡವರಿಗೆ ಆಹಾರ ಕೊಡುವಂತೆ ಕರವೇ ಪ್ರಾನ್ಸಿಸ್ ಡಿಸೋಜರವರಿಗೆ ಒಪ್ಪಿಸಿದರು.

ಅದರಂತೆ ರಾಮನಹಳ್ಳಿ ಹಾಗೂ ಎಳನೀರುಗುಂಡಿ ಹಾಗೂ ನಂದಿಗುದ್ದ ಹಾಗೂ ಚನ್ನಾಪುರ ಹಾಗೂ ಹಿರೀಕರ ಹಾಗೂ ಬಿಟಿಕಟ್ಟೆ ಹಾಗೂ ವನವಳ್ಳಿ ಮತ್ತು ಶುಂಠಿ ಎಷ್ಟು ಗ್ರಾಮಗಳಿಗೆ ಒಟ್ಟು 27 ಕುಟುಂಬಸ್ಥರಿಗೆ ಆಹಾರ ಸಾಮಗ್ರಿಗಳನ್ನು ವಿತರಿಸಲಾಯಿತು.

ಈ ಸಂದರ್ಭದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷರಾದ ಫ್ರಾನ್ಸಿಸ್ ಡಿಸೋಜರವರು ಆಶಾ ಕಿರಣ ಕಲಾ ಟ್ರಸ್ಟ್ ಅಧ್ಯಕ್ಷರಾದ ಮಾಲತಿ ಅವರಿಗೆ ಹೃದಯಪೂರ್ವಕ ಧನ್ಯವಾದಗಳನ್ನು ಅರ್ಪಿಸಿದರು ಹಾಗೂ ಆಹಾರ ಸಾಮಗ್ರಿಗಳನ್ನು ತೆಗೆದುಕೊಂಡ ಕುಟುಂಬಸ್ಥರೆಲ್ಲ ಮಾಲತಿ ಮೇಡಂ ರವರಿಗೆ ಹೃದಯಪೂರ್ವಕ ಧನ್ಯವಾದಗಳು ಅರ್ಪಿಸಿದರು.

ಈ ಆಹಾರ ಸಾಮಗ್ರಿಗಳನ್ನು ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷರಾದ ಫ್ರಾನ್ಸಿಸ್ ಡಿಸೋಜರವರು ಹಾಗೂ ಧೀವನ್ ಡಿಸೋಜಾ ಹಾಗೂ ನಂದಿಗುದ್ದ ಗ್ರಾಮದ ವೇಲೆದ ಮತ್ತು ಚನ್ನಾಪುರ ಗ್ರಾಮದ ರತಿಸ್ ಪೂಜಾರಿ ಹಾಗೂ ಬಿಟಿಕಟ್ಟೆ ಗ್ರಾಮದ ಟಿಆರ್ ರಾಮಚಂದ್ರ ಹಾಗೂ ವಿಶ್ವ ಹಾಗೂ ಪ್ರಸನ್ನ ಹಾಗೂ ನಾಗರಾಜ್ ಇನ್ನಿತರರು ಉಪಸ್ಥರಿದ್ದರಿದ್ದು ಆಹಾರ ಸಾಮಗ್ರಿಗಳನ್ನು ವಿತರಿಸಲಾಯಿತು.

Ad
Ad
Nk Channel Final 21 09 2023