News Karnataka Kannada
Thursday, April 18 2024
Cricket
ಉತ್ತರಕನ್ನಡ

ಕಾರವಾರ: ಕಡಿಮೆಯಾದ ಮಳೆ ಚುರುಕುಗೊಂಡ ಮೀನುಗಾರಿಕೆ

Reduced rainfall intensifies fishing
Photo Credit : News Kannada

ಕಾರವಾರ: ಕಳೆದ ಕೆಲವು ದಿನಗಳ ಎಡಬಿಡದೆ ಸುರಿಯುತ್ತಿದ್ದ ಮಳೆ ಶನಿವಾರ ಕೊಂಚ ಬಿಡುವು ನೀಡಿದ್ದರಿಂದ ಕೃಷಿ ಕಾರ್ಯ ಹಾಗೂ ಮೀನುಗಾರಿಕೆ ಚುರುಕುಗೊಂಡಿದೆ.

ಗಾಳಿ, ಮಳೆಯ ಕಾರಣ ಮೀನುಗಾರಿಕೆ ನಡೆಸಲು ಕಡಲಿಗಿಳಿಯದಂತೆ ಜಿಲ್ಲಾಡಳಿತ ಸೂಚನೆ ನೀಡಿತ್ತು. ಈ ಹಿನ್ನೆಲೆಯಲ್ಲಿ ಕಡಲತೀರದಲ್ಲಿ ನಡೆಯುತ್ತಿದ್ದ ಸಾಂಪ್ರದಾಯಿಕ ಮೀನುಗಾರಿಕೆ ನಾಲ್ಕೈದು ದಿನಗಳಿಂದ ಸ್ಥಗಿತಗೊಂಡಿತ್ತು. ಗಾಳಿ, ಮಳೆ ಕಡಿಮೆಯಾಗಿರುವ ಕಾರಣ ಸ್ಥಗಿತಗೊಂಡಿದ್ದ ಮೀನುಗಾರಿಕೆ ಶನಿವಾರ ಮತ್ತೆ ಆರಂಭವಾಗಿರುವುದು ಕಂಡುಬAತು. ನಗರದ ಅಲಿಗದ್ದಾ ಮತ್ತು ಟ್ಯಾಗೋರ ಕಡಲತೀರದಲ್ಲಿ ಮೀನುಗಾರರು ಯೆಂಡಿ ಬಲೆ ಸಾಂಪ್ರದಾಯಿಕ ಮೀನುಗಾರಿಕೆ ನಡೆಸಿದರು.

ಬಿಟ್ಟುಬಿಟ್ಟು ಸುರಿಯುತ್ತಿರುವ ಮಳೆಯ ಮತ್ತು ಕಡಲಿನ ಸಣ್ಣ ಆರ್ಭಟದ ನಡುವೆಯೇ ಮೀನುಗಾರರು ಮೀನುಗಾರಿಕೆ ನಡೆಸಿದರು. ಕೆಲವರು ಬಂಪರ್ ಮೀನು ಹಿಡಿದರೆ ಮತ್ತೆ ಕೆಲವರು ನಿರಾಸೆ ಅನುಭವಿಸಿದರು. ಅನೇಕ ಮೀನುಗಾರಿಕಾ ಬಲೆಗೆ ಪ್ಲಾಸ್ಟಿಕ್, ತ್ಯಾಜ್ಯಗಳೇ ಹೆಚ್ಚಿನ ಪ್ರಮಾಣದಲ್ಲಿ ಸಿಲುಕಿರುವುದು ಕಂಡು ಬಂದಿದೆ.

ತಾಲ್ಲೂಕಿನಾದ್ಯಂತ ಮೀನುಗಾರಿಕೆ ಆರಂಭವಾಗಿದ್ದರಿಂದ ಮೀನು ಮಾರುಕಟ್ಟೆಯಲ್ಲೂ ಮೀನುಗಳ ಆಗಮಮನವೂ ಹೇರಳ ಪ್ರಮಾಣದಲ್ಲಿತ್ತು. ಮಳೆಗಾಲವಾಗಿದ್ದರಿಂದ ಯಾಂತ್ರಿಕೃತ ಮೀನುಗಾರಿಕೆಗೆ ನಿಷೇಧವಿದೆ ಹಾಗಾಗಿ ಸಹಜವಾಗಿಯೇ ಮಾರುಕಟ್ಟೆಯಲ್ಲಿ ಮೀನಿಗೆ ಹೆಚ್ಚಿನ ಬೇಡಿಕೆ ಇದ್ದು, ಬೆಲೆಯೂ ಹೆಚ್ಚಾಗಿದೆ. ನಗರದ ಮಾರುಕಟ್ಟೆಯಲ್ಲಿ ಮೀನುಗಳನ್ನು ಪಾಲುಗಳಾಗಿ ವಿಂಗಡಿಸಿ ಮಾರಾಟ ಮಾಡಲಾಗುತ್ತದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12792
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು