ಸಂಸದ ಅನಂತಕುಮಾರ ಹೆಗಡೆಗೆ ಟಿಕೇಟ್‌ ಕಾರಣ ಏನ್‌ ಗೊತ್ತ : ಇಲ್ಲಿದೆ ವಿವರ

ಉತ್ತರಕನ್ನಡ: ಲೋಕಸಭಾ ಚುನಾವಣೆ ಹಿನ್ನೆಲೆ, ಬಿಜೆಪಿ ಐದನೇ ಬಿಡುಗಡೆ ಆಗಿದ್ದು ಅದರಲ್ಲಿ ಹಾಲಿ ಸಂಸದ ಅನಂತಕುಮಾರ ಹೆಗಡೆಗೆ ಟಿಕೇಟ್‌ ಕೈ ಜಾರಿ ಕಾಗೇರಿ ಅವರ ಕೈ ಸೇರಿದೆ.ಹಿಂದೂ ಫೈರ್​ ಬ್ರ್ಯಾಂಡ್​ ಎಂದೆ ಹೆಸರುವಾಸಿಯಾಗಿರುವ ಇವರು ಚುನಾವಣಾ ರಾಜಕೀಯದಿಂದ ವಿಮುಖರಾಗಿರುವುದಾಗಿ ಹೇಳಿದ್ದ ಅನಂತ ಕುಮಾರ ಹೆಗಡೆ ಚುನಾವಣೆ ಸಮೀಪಿಸುತ್ತಿದ್ದಂತೆ ಸಕ್ರಿಯರಾದರೂ ಟಿಕೆಟ್ ಪಡೆಯುವಲ್ಲಿ ಸಫಲರಾಗಲಿಲ್ಲ.

ಇದಕ್ಕೆ ಕಾರಣ ಏನೆಂದರೆ ಉತ್ತರ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ತನ್ನದೆ ಆದ ಕಾರ್ಯರ್ತರನ್ನು ಹೊಂದಿರುವ ಅನಂತ ಕುಮಾರ ಹೆಗಡೆ, 2023ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳ ಪರವಾಗಿ ಒಂದೆ ಒಂದು ಬಾರಿ ಪ್ರಚಾರ ಮಾಡಲಿಲ್ಲ. ತನಗೂ ವಿಧಾನಸಭಾ ಚುನಾವಣೆಗೂ ಸಂಬಂಧ ಇಲ್ಲ ಎಂಬಂತೆ ಮನೆಯಲ್ಲಿಯೇ ಉಳಿದುಕೊಂಡಿದ್ದರು.

ಅಷ್ಟೆ ಅಲ್ಲದೆ ಕಾರವಾರ ಹಾಗೂ ಶಿರಸಿ ಬಿಜೆಪಿ ಅಭ್ಯರ್ಥಿ ಸೋಲಿಸಲು ಅನಂತ ಕುಮಾರ ಹೆಗಡೆ ಕಾಂಗ್ರೆಸ್​ ಅಭ್ಯರ್ಥಿಗಳಿಗೆ ಬೆಂಬಲಿಸಿದರು ಎಂಬ ಆರೋಪ ಜಿಲ್ಲೆಯಲ್ಲಿ ಕೇಳಿಬಂದಿದೆ.ವಿಧಾನಸಭಾ ಚುನಾವಣೆ ಪ್ರಚಾರಕ್ಕೆಂದು ಸ್ವತಃ ಪ್ರಧಾನಿ ನರೇಂದ್ರ ಮೋದಿಯವರು ಅಂಕೊಲಾಗೆ ಬಂದರೂ ಸಹಿತ ಪ್ರಧಾನಿ ಸ್ವಾಗತಕ್ಕೆ ಬಾರದೆ ಮನೆಯಲ್ಲಿ ಉಳಿದುಕೊಂಡಿದ್ದರು.ಅಲ್ಲದೇ 6 ಬಾರಿ ಗೆಲುವು ಸಾಧಿಸಿದ್ದರು ಯಾವುದೆ ಒಂದೇ ಒಂದು ಅಭಿವೃದ್ಧಿ ಕಾರ್ಯ ಮಾಡಿಲ್ಲ ಇದರಿಂದ ಬಿಜೆಪಿ ಕಾರ್ಯಕರ್ತರಿಗೆ ಮುಜುಗರ ಉಂಟುಮಾಡಿತ್ತು.

Nisarga K

Recent Posts

ಪ್ರಧಾನಿ ನರೇಂದ್ರ ಮೋದಿಯವರು ಮಣ್ಣಿನ ಮಗ: ಕಂಗನಾ ರಣಾವತ್

ಪ್ರಧಾನಿ ನರೇಂದ್ರ ಮೋದಿಯವರು ಮಣ್ಣಿನ ಮಗ, ಬಡ ಕುಟುಂಬದಲ್ಲಿ ಹುಟ್ಟಿ ದೇಶದ ಕಲ್ಯಾಣ ಮತ್ತು ಅಭಿವೃದ್ಧಿಗೆ ಶ್ರಮಿಸುತ್ತಿದ್ದಾರೆ. ಎಂದು ಹಿಮಾಚಲ…

13 mins ago

ವಾಸವಿ ಯುವಜನ ಸಂಘದಿಂದ ರಕ್ತದಾನ ಶಿಬಿರ : ದಿನೇಶ್‌ಗುಪ್ತ

ನಗರದ ವಾಸವಿ ಯುವಜನ ಸಂಘ ಮತ್ತು ವಾಸವಿ ಕ್ಲಬ್‌ ಆಶ್ರಯದಲ್ಲಿ ಇಂದು ನಗರದ ಮಲ್ಲೇಗೌಡ ಸರ್ಕಾರಿ ಆಸ್ಪತ್ರೆಯಲ್ಲಿ ರಕ್ತದಾನ ಶಿಬಿರವನ್ನು…

42 mins ago

ಗ್ರಾಮಸ್ಥರ ಆರೋಗ್ಯ ಸುರಕ್ಷತೆಗೆ ಕ್ರಮಕೈಗೊಳ್ಳಲು ಬಿಜೆಪಿ ಒತ್ತಾಯ

ಡೆಂಗ್ಯೂ ಸೋಂಕಿನಿಂದ ಬಳಲುತ್ತಿರುವ ಗ್ರಾಮಕ್ಕೆ ತಜ್ಞ ವೈದ್ಯಾಧಿಕಾರಿ ಗಳ ತಂಡವನ್ನು ರಚಿಸಿ ನಿವಾಸಿಗಳ ಆರೋಗ್ಯ ಕಾಪಾಡಬೇಕು ಎಂದು ಎರೆಹಳ್ಳಿ ಗ್ರಾಮಸ್ಥರು…

49 mins ago

ಕಿಯಾ ಕಾರಿಗೆ ಅಡ್ಡ ಬಂದ ಕುದುರೆ: ಸರಣಿ ಅಪಘಾತ

ಕುದುರೆಯೊಂದು ಏಕಾಏಕಿ ಕಿಯಾ ಕಾರಿಗೆ ಅಡ್ಡ ಬಂದ ಕಾರಣ ಸರಣಿ ಅಪಘಾತ ಸಂಭಿಸಿರೋ ಘಟನೆ ಮಾಗಡಿ ತಾಲೂಕಿನ ತಿಪ್ಪಸಂದ್ರ ಹ್ಯಾಂಡ್…

51 mins ago

ಹಿರಿಯಡ್ಕ: ಕಾಲೇಜಿಗೆ ಹೋದ ಯುವತಿ ನಾಪತ್ತೆ

ಹಿರಿಯಡ್ಕ ನಿವಾಸಿ ವಿದ್ಯಾಲಕ್ಷ್ಮೀ (20) ಎಂಬ ಯುವತಿಯು ಏಪ್ರಿಲ್ 19 ರಂದು ಕಾಲೇಜಿಗೆಂದು ಹೋದವರು ವಾಪಾಸು ಬಾರದೇ ನಾಪತ್ತೆಯಾಗಿರುತ್ತಾರೆ.

60 mins ago

ಕೆಸರು ಗದ್ದೆಯಾದ ತಾಲೂಕು ಆಡಳಿತ ಸೌಧ: ಕೆಲಸಕ್ಕಾಗಿ ಬಂದ ಸಾರ್ವಜನಿಕರ ಪರದಾಟ

ಅಫಜಲಪುರ ತಾಲೂಕು ಆಡಳಿತ ಸೌಧ ಅಕ್ಷರಶಃ ಕೆಸರು ಗದ್ದೆಯಾಗಿದೆ. ದಿನಾಲು ಸಾವಿರಾರು ಜನರು ತಹಶೀಲ್ದಾರ ಕಚೇರಿಗೆ ತಮ್ಮ ಕೆಲಸಗಳಿಗೆ ಬಂದು…

1 hour ago