ಉತ್ತರಕನ್ನಡ

ಕಾರವಾರ: ಸ್ವಾತಂತ್ರ್ಯ ನಂತರ ಭವ್ಯ ಭಾರತ ನಿರ್ಮಾಣಕ್ಕೆ ಡಾ.‌ಬಾಬಾ ಸಾಹೇಬ್ ಅಂಬೇಡ್ಕರ್ ಕೊಡುಗೆ ಅಪಾರ

ಕಾರವಾರ: ಸ್ವಾತಂತ್ರ್ಯ ನಂತರ ಭವ್ಯ ಭಾರತ ನಿರ್ಮಾಣಕ್ಕೆ ಸಂವಿಧಾನ ಶಿಲ್ಪಿ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಕೊಡುಗೆ ಅಪಾರವಿದೆ ಎಂದು ಉಪನ್ಯಾಸಕಿ ಡಾ. ಭಾಗ್ಯಶ್ರಿ ನಾಯಕ ಹೇಳಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಶಿವಾಜಿ ಶಿಕ್ಷಣ ಮಹಾವಿದ್ಯಾಲಯದ ವತಿಯಿಂದ ನಗರದ ಶಿವಾಜಿ ಬಿ.ಎಡ್ ಕಾಲೇಜಿನಲ್ಲಿ ಆಯೋಜಿಸಿದ್ದ ಡಾ. ಅಂಬೇಡ್ಕರ್ ಓದು ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಅಂಬೇಡ್ಕರ್ ಬಗ್ಗೆ ಓದು ಮುಗಿಯದ ಪುಸ್ತಕ ಎಂದರು.

ಅಂಬೇಡ್ಕರ್ ಅವರು ಬೃಹತ್ ಕಣಜ ಇದ್ದಂತೆ. ಯಾವ ವಿಚಾರವೂ ಗೊತ್ತಿಲ್ಲ ಎನ್ನದ ವ್ಯಕ್ತಿ ಅಂಬೇಡ್ಕರ್ ಆಗಿದ್ದರು. ಭಾರತದ ಅಭಿವೃದ್ದಿಗೆ ಸಂವಿಧಾನದ ಕೊಡುಗೆಯೇ ಅಪಾರ. ಸಮಾನತೆಯನ್ನ ಹೋಗಿಸಲು ಅವರು ಪಟ್ಟ ಶ್ರಮ‌ಎಲ್ಲರೂ ನೆನೆಯಬೇಕು ಎಂದರು. ಅಂಬೇಡ್ಕರ್ ಮಾನವತಾವಾದಿಗಳಾಗಿದ್ದರು. ಅವರ ಸಂವಿಧಾನದಿಂದಲೇ ಹಿಂದು ಅಸ್ಪೃಶ್ಯತೆ ನಿವಾರಣೆಯಾಗಿ ದಲಿತರು, ತುಳಿತಕ್ಕೊಳಗಾಗಿದವರು, ಹಿಂದುಳಿದವರು ಮೇಲಕ್ಕೆ ಬಂದಿದ್ದಾರೆ. ಮಹಿಳೆಯ ಏಳಿಗೆಗೆ ಬಾಬಾ ಸಾಹೇಬರ ಕೊಡುಗೆ ಅಪಾರ ಎಂದರು.

ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಪತ್ರಕರ್ತ ಸಂದೀಪ್ ಸಾಗರ್ ಮಾತನಾಡಿ ಅಂಬೇಡ್ಕರ್ ಎಂದರೆ ದಲಿತರು, ಮೀಸಲಾತಿ ಅನ್ನುವ ಕಲ್ಪನೆಯನ್ನ ಬಿಡಬೇಕು. ಎಲ್ಲಾ ವರ್ಗದ ಏಳಿಗೆಗೆ ಅಂಬೇಡ್ಕರ್ ಅವರ ಕೊಡುಗೆ ಇದೆ ಎಂದರು. ಸಮಾಜದಲ್ಲಿ ಶೋಷಿತಕ್ಕೊಳಗಾದ ಸಮಾಜ ಇಂದು ಉನ್ನತ ಹಂತಕ್ಕೆ ಹೋಗುತ್ತಿದೆ ಎಂದರೆ ಅದು ಅಂಬೇಡ್ಕರ್ ಕಾರಣ. ಅಸಮಾನತೆ ಹೋಗಬೇಕು. ಅಸಮಾನತೆ ಹೆಚ್ಚಾದರೆ ದೇಶದ ಪ್ರಗತಿ ಮೇಲೂ ಪರಿಣಾಮ ಬೀರಲಿದ್ದು ಶಿಕ್ಷಕರಾಗುವವರು ಮುಂದೆ ವಿದ್ಯಾರ್ಥಿಗಳಿಗೂ ಅಂಬೇಡ್ಕರ್ ಆದರ್ಶಗಳನ್ನ ತಿಳಿಸಿ ಪಾಲಿಸುವಂತೆ ಮಾಡಬೇಕು ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಡಾ.‌ಶಿವಾನಂದ ನಾಯಕ ಮಾತನಾಡಿ ಅಂಬೇಡ್ಕರ್ ಹುಟ್ಟದೇ ಇದ್ದಿದ್ದರೆ ಗುಲಾಮಗಿರಿ ಇನ್ನು ಇರುತ್ತಿತ್ತು. ದೇಶಕ್ಕೆ ಸಂವಿಧಾನವನ್ನ ಬರೆದ ಅಂಬೇಡ್ಕರ್ ದೀಪವಾಗಿ ಬೆಳಕನ್ನು ನೀಡಿದರು ಎಂದರು.

ಕಾರ್ಯಕ್ರಮದಲ್ಲಿ ಉಪನ್ಯಾಸಕರಾದ ಡಾ. ಶಿವಕುಮಾರ ನಾಯಕ, ನವೀನ್ ದೇವರಭಾವಿ, ಸುಮನ್ ಸಾವಂತ್, ಮಾದವಿ ಗಾಂವಕರ್, ರಾಜೇಶ್ ಭಂಟ್ ಸೇರಿದಂತೆ ಹಲವರು ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ವಿವಿಧ ಸ್ಪರ್ಧೆಯಲ್ಲಿ ಗೆದ್ದವರಿಗೆ ಬಹುಮಾನ ವಿತರಿಸಲಾಯಿತು.‌

Sneha Gowda

Recent Posts

ಪಾಪನಕೆರೆ ಒತ್ತುವರಿ ಆರೋಪ : ತಾಲೂಕು ಕಚೇರಿ ಮುಂದೆ ಪ್ರತಿಭಟನೆ

ಭೀಮನಗರದ ರೈತರು ಯುವ ಮುಖಂಡ ಕೃಷ್ಣಕುಮಾರ್ ನೇತೃತ್ವದಲ್ಲಿ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.

15 mins ago

ಸ್ವಾತಿ ಮಲಿವಾಲ್‌ ಮೇಲೆ ಹಲ್ಲೆ: ಆರೋಪಿ ಬಿಭವ್‌ ಕುಮಾರ್‌ ವಶಕ್ಕೆ

ಆಮ್‌ ಆದ್ಮಿ ಪಕ್ಷದ ರಾಜ್ಯಸಭಾ ಸಂಸದೆ ಸ್ವಾತಿ ಮಲಿವಾಲ್‌ ಮೇಲೆ ಹಲ್ಲೆ ನಡೆಸಿದ ಆರೋಪಿ, ಅರವಿಂದ್‌ ಕೇಜ್ರಿವಾಲ್‌ ಆಪ್ತ ಕಾರ್ಯದರ್ಶಿ…

42 mins ago

ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಹುಸಿ ಬಾಂಬ್ ಬೆದರಿಕೆ: ಪ್ರಯಾಣಿಕನ ಮೇಲೆ ಪ್ರಕರಣ ದಾಖಲು

ಬೆಂಗಳೂರಿನಿಂದ ಪುಣೆಗೆ ಹೊರಟಿದ್ದ ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನದ ಚೆಕ್-ಇನ್ ಬ್ಯಾಗ್‌ನಲ್ಲಿ ಬಾಂಬ್ ಅಡಗಿಸಿಟ್ಟಿರುವುದಾಗಿ ಸುಳ್ಳು ಬೆದರಿಕೆ ಹಾಕಿ ಭೀತಿ…

51 mins ago

ಸಂವಿಧಾನವನ್ನು ಯಾವುದೇ ಸರ್ಕಾರ ಬದಲಾಯಿಸಲು ಸಾಧ್ಯವಿಲ್ಲ : ನಿತಿನ್‌ ಗಡ್ಕರಿ

ಬಿಜೆಪಿ ಅಧಿಕಾರಕ್ಕೆ ಬಂದರೆ ಸಂವಿಧಾನ ಬದಲಿಸಲಿದೆ ಎನ್ನುವ ಕಾಂಗ್ರೆಸ್‌ ಆರೋಪಕ್ಕೆ ಕೇಂದ್ರ ರಸ್ತೆ ಸಾರಿಗೆ ಹಾಗೂ ಹೆದ್ದಾರಿಗಳ ಖಾತೆ ಸಚಿವ…

1 hour ago

ತೀರ್ಥಯಾತ್ರೆಗೆ ಬಂದ ನಾಲ್ವರು ನದಿಯಲ್ಲಿ ಮುಳುಗಿ ದಾರುಣ ಸಾವು

ತೀರ್ಥಯಾತ್ರೆಗೆಂದು ಅತಿಥಿ ಗೃಹಕ್ಕೆ ಬಂದಿದ್ದವರು ನದಿಯಲ್ಲಿ ಬಟ್ಟೆ ತೊಳೆಯಲು ಹೋಗಿ ನಾಲ್ವರು ದಾರುಣವಾಗಿ ಸಾವನ್ನಪ್ಪಿರುವ ಘಟನೆ ಕೊಲ್ಲಾಪುರದ ಕಾಗಲ್ ತಾಲೂಕಿನ…

1 hour ago

ಪ್ರಾಚೀನರ ಕಲಾ ಕೊಡುಗೆಗಳ ಸಂರಕ್ಷಣೆ ಅಗತ್ಯ: ನೇಮಿರಾಜ ಶೆಟ್ಟಿ

ಇತಿಹಾಸವನ್ನು ಚಿತ್ರಗಳ ಮೂಲಕ ಜೋಪಾಸನೆ ಮಾಡುವ ಕಾಯಕವೂ ಅತ್ಯಂತ ಶ್ರೇಷ್ಠ. ಮುಂದಿನ ಪೀಳಿಗೆಗೆ ಪ್ರಾಚೀನರ ಕಲಾ ಕೊಡುಗೆಯನ್ನು ಸಂರಕ್ಷಣೆ ಮಾಡುವುದು…

1 hour ago