News Karnataka Kannada
Monday, April 22 2024
Cricket
ಉತ್ತರಕನ್ನಡ

ಕಾರವಾರ: ಒಂದೇ ಕುಟುಂಬದ ಮೂವರು ಆತ್ಮಹತ್ಯೆಗೆ ಶರಣು

Karwar: Three members of a family commit suicide
Photo Credit : News Kannada

ಕಾರವಾರ: ತಾಲೂಕಿನ ಗೋಪಶಿಟ್ಟಾದ ಮೂಲದ ಉದ್ಯಮಿಯೊಬ್ಬರ ಕುಟುಂಬ ಮೂವರು ಸದಸ್ಯರು ಆತ್ಮಹತ್ಯೆಗೆ ಶರಣಾದ ಘಟನೆ ನಡೆದಿದೆ.

ಮೃತಪಟ್ಟವರನ್ನು ಮೂಲತಃ ಗೋಪಶಿಟ್ಟಾದ ನಿವಾಸಿ, ಹಾಲಿ ಗೋವಾ ವಾಸಿಯಾಗಿದ್ದ ಶ್ಯಾಮ ಪಾಟೀಲ್(45), ಅವರ ಪತ್ನಿ ಜ್ಯೋತಿ (38), ಮಗ ದಕ್ಷ (12) ಎನ್ನುವವರೆ ಆತ್ಮಹತ್ಯೆಗೆ ಶರಣಾದವರು ಎಂದು ಗುರುತಿಸಲಾಗಿದೆ.

ಜ್ಯೋತಿ ಹಾಗೂ ದಕ್ಷ ಅವರ ಮೃತದೇಹ ಕಾರವಾರದ ದೇವಭಾಗ ಕಡಲತೀರದ ಬಳಿ ಪತ್ತೆಯಾಗಿದೆ. ಶ್ಯಾಮ ಪಾಟೀಲ್ ಅವರ ಮೃತದೇಹ ಗೋವಾದ ಕುಕ್ಕಳ್ಳಿ ಪಾಡಿಯಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ ಎಂದು ತಿಳಿದು ಬಂದಿದೆ.

ಹೆಂಡತಿ, ಮಗುವನ್ನ ನದಿಗೆ ದೂಡಿ ಶ್ಯಾಮ್ ಪಾಟೀಲ್ ಗೋವಾದ ಕುಕ್ಕಳ್ಳಿಯ ಪಾಡಿಯನ್ನು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಶ್ಯಾಮ್ ಪಾಟೀಲ್ ಶ್ಯಾಮ್ ಗೋವಾದ ವಿವಿಧ ಕಂಪೆನಿಗೆ ಕಾರ್ಮಿಕರನ್ನು ಪೂರೈಕೆ ಮಾಡುವ ಹಾಗೂ ಕಂಪೆನಿಯೊಂದು ಹೊಂದಿದ್ದು, ವಿವಿಧ ಕಾರಣಕ್ಕೆ ಸಾಲ ಮಾಡಿಕೊಂಡಿದ್ದರು ಎನ್ನಲಾಗಿದೆ.

ಇದೇ ಕಾರಣದಿಂದ ಹೆಂಡತಿ, ಮಕ್ಕಳನ್ನು ಕಾರವಾರದ ಕಾಳಿ ನದಿಯಲ್ಲಿ ದೂಡಿ ತಾನು ಗೋವಾ ಬಳಿ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ಗುರುವಾರ ಬೆಳೆಗ್ಗೆ ಮಗ ದಕ್ಷನ ಮೃತದೇಹ ಪತ್ತೆಯಾಗಿದ್ದು ಸಂಜೆ ವೇಳೆ ಮೃತ ಜ್ಯೋತಿಯ ಶವ ಪತ್ತೆಯಾಗಿದೆ. ದೇವಭಾಗದ ಬಳಿ ತೆರಳಿದ ಚಿತ್ತಾಕುಲ ಪೊಲೀಸರು ಮೃತದೇಹವನ್ನು ಜಿಲ್ಲಾ ಆಸ್ಪತ್ರೆಯ ಶವಾಗಾರಕ್ಕೆ ಸಾಗಿಸಿದ್ದಾರೆ. ಈ ಬಗ್ಗೆ ಚಿತ್ತಾಕುಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12792
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು