ಕಾರವಾರ: ದಿ. ದೇವರಾಜ ಅರಸು ಅವರ 107 ನೇ ಜನ್ಮ ದಿನಾಚರಣೆಗೆ ಸಿದ್ಧತೆ

ಕಾರವಾರ: ಸರ್ಕಾರದ ನಿರ್ದೇಶನದಂತೆ ಮಾಜಿ ಮುಖ್ಯಮಂತ್ರಿ ದಿ. ದೇವರಾಜ ಅರಸು ರವರ 107 ನೇ ಜನ್ಮ ದಿನಾಚರಣೆಯನ್ನು ಈ ಬಾರಿ 3 ದಿನಗಳ ಕಾಲ ವಿಜೃಂಭಣೆಯಿಂದ ಆಚರಿಸಲಾಗುವುದು ಎಂದು ಅಪರ ಜಿಲ್ಲಾಧಿಕಾರಿ ರಾಜು ಮೊಗವೀರ ಹೇಳಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ನ್ಯಾಯಾಲಯ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಡಿ. ದೇವರಾಜು ಅರಸು 107 ನೇ ಜನ್ಮ ದಿನಾಚರಣೆಯ ಪೂರ್ವ ಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಜಿಲ್ಲೆಯಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣಕ್ಕಾಗಿ ಕೆಲಸ ಮಾಡಿದ ವ್ಯಕ್ತಿಗಳು ಅಥವಾ ಸಂಘ- ಸಂಸ್ಥೆಗಳನ್ನ ಗುರುತಿಸಿ ಒಬ್ಬರಿಗೆ ಜಿಲ್ಲಾ ಮಟ್ಟದ ಪ್ರಶಸ್ತಿಯನ್ನು ನೀಡಲಾಗುವುದು ಎಂದು ಹೇಳಿದರು.

ಜಿಲ್ಲೆಯ ವ್ಯಾಪ್ತಿಯಲ್ಲಿರುವ ಯಾವುದೇ ಸಮುದಾಯದ ಕುಲ ಕಸುಬಿಗೆ ಸಂಬಂಧಿಸಿದಂತಹ ವಸ್ತುಗಳನ್ನ ಮಾರಾಟ ಹಾಗೂ ಪ್ರದರ್ಶನ ಮಾಡಲು ಅವಕಾಶ ಕಲ್ಪಿಸಲಾಗಿದ್ದು, ಅರಸು ಅವರ ಜನ್ಮ ದಿನವಾದ ಆಗಸ್ಟ್ 20 ರಿಂದ 24 ರವರೆಗೆ 4 ದಿನಗಳ ಕಾಲ ಮಳಿಗೆ ತರೆಯಲು ಸಂಬಂಧಪಟ್ಟ ಇಲಾಖಾಧಿಕಾರಿಗಳು ಬೇಕಾದ ವ್ಯವಸ್ಥೆ ಮಾಡಿಕೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು. ಶಾಲಾ ಮಕ್ಕಳಿಗೆ ಯೋಗ, ಕ್ರೀಡಾ ಸ್ಪರ್ಧೆ, ಅರಣ್ಯದ ಮಹತ್ವದ ತಿಳುವಳಿಕೆ ಹಾಗೂ ಗಿಡ ನೆಡುವ ಕಾರ್ಯಕ್ರಮವನ್ನು ಮಾಡಬೇಕು ಮತ್ತು ಕಾಲೇಜು ವಿದ್ಯಾರ್ಥಿಗಳಿಗೆ ಪ್ರಬಂಧ ಸ್ಪರ್ಧೆಯನ್ನು ಏರ್ಪಡಿಸಬೇಕು ಹಾಗೂ ಇದರ ಜೊತೆಗೆ ಶಾಲಾ-ಕಾಲೇಜುಗಳಲ್ಲಿ ಒಂದು ಗಂಟೆಯ ಡಿ.ದೇವರಾಜ ಅರಸು ಅವರ ಉಪನ್ಯಾಸ ಕಾರ್ಯಕ್ರಮ ಹಮ್ಮಿಕೊಳ್ಳಬೇಕು ಎಂದು ಅಧಿಕಾರಿಗಳಿಗೆ ಹೇಳಿದರು.

ಸಭೆಯಲ್ಲಿ ಜಿಲ್ಲಾ ಸಹಾಯಕ ಆಯುಕ್ತೆ ಜಯಲಕ್ಷ್ಮಿ ರಾಯಕೊಡ, ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ಸಿಬ್ಬಂಧಿಗಳು ಮತ್ತು ವಿವಿಧ ಸಂಘ-ಸಂಸ್ಥೆಗಳ ಸದಸ್ಯರುಗಳು ಹಾಜರಿದ್ದರು.

Gayathri SG

Recent Posts

ಮಸೀದಿಯೊಳಗೆ ಅರೆನಗ್ನ ಸ್ಥಿತಿಯಲ್ಲಿ ಮಹಿಳೆಯ ಡೆಡ್‌ಬಾಡಿ ಪತ್ತೆ

ತಾಜ್‌ಮಹಲ್‌ ಸಮೀಪದ ಮಸೀದಿವೊಂದರಲ್ಲಿ ಘೋರ ಕೃತ್ಯ ನಡೆದಿದ್ದು ಅರೆನಗ್ನ ಸ್ಥಿತಿಯಲ್ಲಿ 22 ವರ್ಷದ ಮಹಿಳೆಯ ಶವ ಪತ್ತೆಯಾಗಿದೆ. ಈ ಘಟನೆ…

14 mins ago

ಮಾಜಿ ಸಂಸದ ಎಲ್​ ಆರ್ ಶಿವರಾಮೇಗೌಡ ಮನೆ ಮೇಲೆ ಮೊಟ್ಟೆ ದಾಳಿ

ಪ್ರಜ್ವಲ್‌ ರೇವಣ್ಣ ಪೆನ್‌ಡ್ರೈವ್‌ ಕೇಸ್‌ ಸಂಬಂಧಿಸಿದಂತೆ ಎಚ್‌ ಡಿ ದೇವೆಗೌಡ ಅವರ ವಿರುದ್ದ ಆಡಿಯೋ ಒಂದರಲ್ಲಿ ಅವಹೇಳನವಾಗಿ ನಿಂಧಿಸಿದ ಮಾಜಿ…

40 mins ago

ಇರಾನ್ ಅಧ್ಯಕ್ಷ ಇಬ್ರಾಹಿಂ ರೈಸಿ ಮೃತ್ಯು; ಪ್ರಧಾನಿ ಮೋದಿ ಸಂತಾಪ

ಇರಾನ್ ಅಧ್ಯಕ್ಷ ಇಬ್ರಾಹಿಂ ರೈಸಿ ಅವರು ಪ್ರಯಾಣಿಸುತ್ತಿದ್ದ ಬೆಂಗಾವಲು ಪಡೆ ಹೆಲಿಕಾಪ್ಟರ್‌ಗಳ ಪೈಕಿ ಒಂದು ಪತನಗೊಂಡಿದ್ದು, ಅಪಘಾತದಲ್ಲಿ ಇರಾನ್‌ ಅಧ್ಯಕ್ಷ…

48 mins ago

‘ರೇವ್ ಪಾರ್ಟಿ’ ಮೇಲೆ ಸಿಸಿಬಿ ದಾಳಿ; ನಟಿ ಹೇಮಾ ಸೇರಿ ಐವರು ಅರೆಸ್ಟ್

ಆರ್ ಫಾರ್ಮ್ ಹೌಸ್ ನಲ್ಲಿ ರೇವ್​ ಪಾರ್ಟಿ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಬಿ ಪೊಲೀಸರು ಐವರನ್ನು ಬಂಧಿಸಿದ್ದಾರೆ. ಪಾರ್ಟಿ ಆಯೋಜಕ ವಾಸು,…

1 hour ago

ಆನೆಯ ಕೂಡುದಂತಕ್ಕೆ ಕತ್ತರಿ ಪ್ರಯೋಗ ಸಕ್ಸಸ್

ಬಂಡೀಪುರದಲ್ಲಿ ಸೆರೆಹಿಡಿಯಲಾಗಿದ್ದ ಆನೆಯ ಕೂಡುದಂತಕ್ಕೆ ಕತ್ತರಿ ಪ್ರಯೋಗ ಮಾಡಿರುವುದು ಸಕ್ಷಸ್ ಆಗಿದೆ. ಕೂಡು ದಂತದಿಂದ ಆಹಾರ ಸೇವಿಸಲಾಗದೆ ಪರದಾಡುತ್ತಿದ್ದ ಆನೆ…

1 hour ago

ಮತಗಟ್ಟೆ ದ್ವಂಸ ಪ್ರಕರಣ : ಬಿಡುಗಡೆಗೊಂಡ ಗ್ರಾಮಸ್ಥರಿಗೆ ಎನ್. ಮಹೇಶ್ ಸಾಂತ್ವಾನ

ಏಪ್ರಿಲ್ 26 ರಂದು ನಡೆದ ಲೋಕಸಭಾ ಸಾರ್ವತ್ರಿಕ ಚುನಾವಣೆಯಲ್ಲಿ ಚಾಮರಾಜನಗರ ಜಿಲ್ಲೆಯ ಹನೂರು ತಾಲ್ಲೂಕಿನ ಮಲೆ ಮಹದೇಶ್ವರ ಬೆಟ್ಟ ಗ್ರಾಮ…

1 hour ago