ಕಾರವಾರ: ವಾಸ್ತು ಶಿಲ್ಪ ಪರಂಪರೆಗೆ ಶಿಲ್ಪಗಳ ಕೊಡುಗೆ ಅಪಾರ

ಕಾರವಾರ: ನಾಡಿನ ಐತಿಹಾಸಿಕ ವಾಸ್ತು ಶಿಲ್ಪ ಪರಂಪರೆಗೆ ಶಿಲ್ಪಗಳ ಕೊಡುಗೆ ಅಪಾರ ವಾದುದು ಎಂದು ಅಪರ ಜಿಲ್ಲಾಧಿಕಾರಿ ರಾಜು ಮೊಗವೀರ ಹೇಳಿದರು.

ನಗರದ ಜಿಲ್ಲಾಧಿಕಾರಿಗಳ ಕಾರ್ಯಾಲಯದ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ವಿಶ್ವ ಕರ್ಮ ಅಮರಶಿಲ್ಪಿ ಜಕಣಾಚಾರಿ ದಿನಾಚರಣೆಯನ್ನು ಜ್ಯೋತಿ ಬೆಳಗಿಸಿ ಮಾತನಾಡಿದ ಅವರು, ಅಮರಶಿಲ್ಪಿ ಜಕಣಾಚಾರಿ ಅಪರೂಪದ ಕೊಡುಗೆಯನ್ನು ಮತ್ತು ಕಲಾ ಕೌಶಲ್ಯವನ್ನು ನಾಡಿಗೆ ನೀಡಿ ಅಜರಾಮರರಾದರು ಸೌಂದರ್ಯ ಮತ್ತು ಕಲಾ ಆರಾಧಕನಾಗಿದ್ದ ಜಕಣಾಚಾರಿಯವರು ವೈಯಕ್ತಿಕ ಬದುಕಿನಲ್ಲಿ ನಡೆದ ಘಟನೆಗಳಿಂದ ಬೇಸತ್ತು ಹೆಂಡತಿ, ಮನೆ, ಊರನ್ನು ತೊರೆದು ಲೋಕಸಂಚಾರಿಯಾಗಿ ಅಲೆಯುತ್ತಿರುವಾಗ ರಾಮಾನುಜಾಚಾರ್ಯರು ಮಾರ್ಗದರ್ಶನ ದಿಂದ ತನ್ನ ವೃತ್ತಿಯಲ್ಲಿ ಏಕಾಗ್ರತೆನ್ನು ಸಾಧಿಸಿದ.

ಹೊಯ್ಸಳರ ಬೇಲೂರು ಚನ್ನಕೇಶವ ದೇವಾಲಯದ ನಿರ್ಮಾಣ ಜವಾಬ್ದಾರಿಯನ್ನು ವಹಿಸಿಕೊಂಡ. ಅದು ದೇವಾಲಯವಾಗದೆ ಅಪರೂಪದ ಕಲಾಕೃತಿಯಾಗಿ ನಿರ್ಮಿಸಿಲು ತನ್ನ ಜೀವನವನ್ನೇ ಮುಡುಪಾಗಿಟ್ಟ. ಶಿಲೆಯನ್ನು ಕಲೆಯಾಗಿ ಅರಳಿಸಿದರು ನಮ್ಮ ನಾಡಗೀತೆಯಲ್ಲಿ ಡಂಕಣ ಜಕಣರ ನೆಚ್ಚಿನ ಬೀಡೆ ಅಮರ ಶಿಲ್ಪಿಯ ಹೆಸರು ಅಜರಾಮರ ಕರ್ನಾಟಕ ಇತಿಹಾಸವನ್ನು ಕಲೆ ಮತ್ತ ವಾಸ್ತುಶಿಲ್ಪದಿಂದ ಶ್ರೀಮಂತಗೊಳಿಸಿದ ಇಂತಹ ಮಹಾನ್ ಶಿಲ್ಪಿಯನ್ನು ಸ್ಮರಿಸುವ ಮೂಲಕ ಇತಿಹಾಸದ ಎಲ್ಲಾ ಶಿಲ್ಪಕಾರರಿಗೂ ಗೌರವಿಸುತ್ತಿದೆ ನಾಡಿಗೆ ಅವರ ನೀಡಿದ ಕೊಡುಗೆ ಇವತ್ತಿಗೊ ನಮ್ಮ ದೇವಸ್ಥಾನಗಳಲ್ಲಿ ಅಳಿಸಲಾಗದ ಇತಿಹಾಸವಾಗಿದೆ. ಇಂತಹ ಮಾಹಾನ ವ್ಯಕ್ತಿಗಳು ಆದರ್ಶ ಸಮಾಜಕ್ಕೆ ಅತ್ಯಮುಲ್ಯ ಎಂದರು.

ಬಳಿಕ ಸಂಪನ್ಮೂಲ ವ್ಯಕ್ತಿ ಅರುಣ ಆಚಾರ್ಯ, ರಾಜ್ಯ ವಿಶ್ವಕರ್ಮ ಸಮಾಜದ ಉಪಾಧ್ಯಕ್ಷರಾದ ರಾಘವೇಂದ್ರ ಆಚಾರ್ಯ, ಜಿಲ್ಲಾ ವಿಶ್ವ ಕರ್ಮ ಸಮಾಜದ ಅಧ್ಯಕ್ಷರು ವಾಸುದೇವ ಆಚಾರ್ಯ, ಕನ್ನಡ ಮತ್ತು ಸಂಸ್ಕೃತಿ ಸಹಾಯಕ ನಿರ್ದೇಶಕ ರಾಮಚಂದ್ರ ಕೆ. ಎಮ್, ಸಮಾಜದ ಬಾಂಧವರು, ಸಾರ್ವಜನಿಕರು ಹಾಗೂ ಶಾಲಾ ಮಕ್ಕಳು ಭಾಗವಹಿಸಿದ್ದರು.

Gayathri SG

Recent Posts

ವಿಜೃಂಭಣೆಯಿಂದ ಜರುಗಿದ ಶ್ರೀ ಅವಿಜ್ಞ ಸಾಯಿಬಾಬಾ ಪ್ರತಿಷ್ಠಾಪನಾ ಮಹೋತ್ಸವ

ವರುಣ ವಿಧಾನಸಭಾ ಕ್ಷೇತ್ರದ ನಂಜನಗೂಡು ತಾಲ್ಲೂಕಿನ ಬಿಳಿಗೆರೆ ಹೋಬಳಿಯ ಸರಗೂರು ಗ್ರಾಮದಲ್ಲಿ ಶ್ರೀ ಅವಿಜ್ಞ ಸಾಯಿ ಕ್ಷೇತ್ರದಲ್ಲಿ ಶ್ರೀ ಅವಿಜ್ಞ…

4 hours ago

ಪ್ರವಾಸಿಗರನ್ನು ಕರೆದೊಯ್ಯುತ್ತಿದ್ದ ಬೋಟ್ ಪಲ್ಟಿ: 40 ಜನರ ರಕ್ಷಣೆ

ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ತದಡಿ ಗ್ರಾಮದ ಮೂಡಂಗಿಯ ಸಮೀಪ  ಪ್ರವಾಸಿಗರನ್ನು ಕರೆದೊಯ್ಯುತ್ತಿದ್ದ ಬೋಟ್ ಪಲ್ಟಿಯಾದ ಘಟನೆ ನಡೆದಿದೆ. 

5 hours ago

ಮೋದಿಗೆ ಯಾರೂ ಮತ ಹಾಕಬೇಡಿ ಎಂದಿದ್ದ ಶಿಕ್ಷಕ ಅರೆಸ್ಟ್

ಬಿಹಾರದ ಸರ್ಕಾರಿ ಶಾಲೆಯ ಶಿಕ್ಷಕರೊಬ್ಬರು ಮೋದಿಗೆ ಯಾರೂ ಮತ ಹಾಕಬೇಡಿ ಎಂದು ಮಕ್ಕಳಿಗೆ ಹೇಳಿದ್ದಕ್ಕೆ ಶಿಕ್ಷಕನನ್ನು ಬಂಧಿಸಿ ಜೈಲಿಗೆ ಕಳುಹಿಸಲಾಗಿದೆ.

5 hours ago

ಮೇ 24ರಿಂದ ಮೈಸೂರಿನಲ್ಲಿ ಮಾವು, ಹಲಸು ಮೇಳ

ಪ್ರತಿವರ್ಷದಂತೆ ಈ ಬಾರಿಯೂ ಮೈಸೂರು ನಗರದಲ್ಲಿ  ಒಂದೇ ಸೂರಿನಡಿ ವಿವಿಧ ಮಾವಿನ ತಳಿಯ ಹಣ್ಣು, ಹಲಸಿನ ಹಣ್ಣಿನ ರುಚಿ ಸವಿಯಲು…

5 hours ago

ಜಿಪ್​ ಲೈನ್ ತುಂಡಾಗಿ ಬಿದ್ದು ಮಹಿಳೆ ಸಾವು

ಜಿಪ್​ ಲೈನ್ ತುಂಡಾಗಿ ಬಿದ್ದು ಮಹಿಳೆಯೊಬ್ಬರು ಸಾವನ್ನಪ್ಪಿದ ಘಟನೆ  ರಾಮನಗರ ಜಿಲ್ಲೆಯ ಹಾರೋಹಳ್ಳಿಯ ಜಂಗಲ್ ಟ್ರಯಲ್ಸ್ ರೆಸಾರ್ಟ್​ನಲ್ಲಿ ನಡೆದಿದೆ. 

6 hours ago

ಮೀನು ಹಿಡಿಯಲು ಹೋದ ಒಂದೇ ಕುಟುಂಬದ ಇಬ್ಬರು ಕೆರೆಯಲ್ಲಿ ಮುಳುಗಿ ಮೃತ್ಯು

ಮೀನು ಹಿಡಿಯಲು ಹೋದ ಒಂದೇ ಕುಟುಂಬದ ಇಬ್ಬರು ಸದ್ಯಸರು ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ಕಾರ್ಕಳ ತಾಲೂಕಿನ ಶಿರ್ಲಾಲು ಎಂಬಲ್ಲಿ…

6 hours ago