News Karnataka Kannada
Sunday, April 21 2024
Cricket
ಕ್ರೀಡೆ

ಕಾರವಾರ: ರಾಜ್ಯಮಟ್ಟದಲ್ಲಿ ಬೆಳ್ಳಿ ಪದಕ ಪಡೆದ ರಾಘವೇಂದ್ರ

Karwar: Raghavendra wins silver medal at state level
Photo Credit : News Kannada

ಕಾರವಾರ: ಹುಬ್ಬಳ್ಳಿಯ ಶತಾಬ್ದಿ ಭವನದಲ್ಲಿ ನಡೆದ ಕರ್ನಾಟಕ ರಾಜ್ಯ ಸೀನಿಯರ್ ಪವರ್ ಲಿಫ್ಟಿಂಗ್ ಚಾಂಪಿಯನ್ಶಿಪ್ 2023 ಸ್ಪರ್ಧೆಯಲ್ಲಿ ಕುಮಟಾದ ಪುರಸಭೆ ವ್ಯಾಯಮ ಶಾಲೆ ವಿಧ್ಯಾರ್ಥಿಯಾದ ರಾಘವೇಂದ್ರ ಗೌಡ 66 ಕೆಜಿ ದೇಹ ತೂಕದ ವಿಭಾಗದಲ್ಲಿ ಸ್ಪರ್ಧಿಸಿ ಬೆಳ್ಳಿಯ ಪದಕ ಪಡೆಯುವ ಮೂಲಕ ರಾಜ್ಯಕ್ಕೆ ದ್ವಿತೀಯ ಸ್ಥಾನಗಳಿಸಿ ಸಾಧನೆ ಗೈದಿದ್ದಾರೆ.

ಸ್ಕಾಟ್ 195 ಕೆಜಿ, ಬೆಂಚ್ ಪ್ರೆಸ್ 110 ಕೆಜಿ ಹಾಗೂ ಡೆಡ್ಲಿಫ್ಟ್ 202.5 ಕೆಜಿ ಸೇರಿ ಒಟ್ಟೂ 507.5 ಕೆಜಿ ಎತ್ತುವದರ ಮೂಲಕ ಬೆಳ್ಳಿಯ ಪದಕ ಪಡೆದು, ರಾಜ್ಯಕ್ಕೆ ದ್ವಿತೀಯ ಸ್ಥಾನ ಪಡೆದಿದ್ದಾರೆ.

ಈ ಮೂಲಕ ಆಗಸ್ಟ್ ನಲ್ಲಿ ಉತ್ತರಾಖಂಡದಲ್ಲಿ ನಡೆಯಲಿರುವ ರಾಷ್ಟ್ರಮಟ್ಟದ ಪವರ್ ಲಿಫ್ಟಿಂಗ್ ಚಾಂಪಿಯನ್ ಶಿಪ್ಗೂ ಸಹ ಆಯ್ಕೆಯಾಗಿದ್ದು ಕರ್ನಾಟಕವನ್ನು ಪ್ರತಿನಿಧಿಸಲಿದ್ದಾರೆ. ರಾಘವೇಂದ್ರ ಗೌಡ ಅಂತರರಾಷ್ಟ್ರೀಯ ಪವರ್ಲಿಫ್ಟಿಂಗ್ ಕ್ರೀಡಾಪಟು ವೆಂಕಟೇಶ ಪ್ರಭು ಅವರ ಮಾರ್ಗದರ್ಶನದಲ್ಲಿ ತರಬೇತಿ ಪಡೆಯುತಿದ್ದಾರೆ.

ಇವರ ಈ ಸಾಧನೆಗೆ ಕುಮಟಾ ಪುರಸಭಾ ವ್ಯಾಯಾಮ ಶಾಲಾ ತರಬೇತುದಾರರಾದ ಗುರುರಾಜ ಉಪ್ಪಾರ ಸೇರಿದಂತೆ ಎಲ್ಲ ವಿದ್ಯಾರ್ಥಿಗಳು ಹರ್ಷ ವ್ಯಕ್ತಪಡಿಸಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12792
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು