News Karnataka Kannada
Tuesday, April 30 2024
ಉತ್ತರಕನ್ನಡ

ಕಾರವಾರ: ಆನ್‌ಲೈನ್ ವಂಚನೆ, ಲಕ್ಷಾಂತರ ರೂ. ಕಳೆದುಕೊಂಡ ಮಹಿಳೆ

C E N
Photo Credit : By Author

ಕಾರವಾರ: ಅಪರಿಚಿತ ಮೊಬೈಲ್ ಸಂಖ್ಯೆಯಿಂದ ಬಂದ ಸಂದೇಶವನ್ನು ನಂಬಿ ನಗರದ ಮಹಿಳೆಯೊಬ್ಬರು 3.24 ಲಕ್ಷ ರೂ. ಹಣವನ್ನು ಕಳೆದುಕೊಂಡಿದ್ದಾರೆ. ಮೊಬೈಲ್ ಸಂಖ್ಯೆಗೆ ease Your SBI YONO ACCOUNT will be Blocked Today Update Your PAN Card click link ಎಂದು ಸಂದೇಶ ಬಂದಿದೆ.

ಎಸ್‌ಬಿ‌ಐ ಬ್ಯಾಂಕ್‌ನವರು ಕಳುಹಿಸಿರಬಹುದು ಎಂದು ತಿಳಿದು ಸಂದೇಶದಲ್ಲಿ ನಮೂದಾದ ಲಿಂಕ್‌ ಓಪನ್ ಮಾಡಿ ಮಾಡಿದ್ದಾರೆ. ಆನ್‌ಲೈನ್ ಪೇಜ್‌ನಲ್ಲಿ ತಮ್ಮ ಚಿಕ್ಕಮ್ಮನ ಬ್ಯಾಂಕ್ ಖಾತೆಗೆ ಸಂಬಂಧಿಸಿದ ಮಾಹಿತಿಯನ್ನು ಹಾಕಿದ್ದಾರೆ.

ತನ್ನ ಮೊಬೈಲ್‌ಗೆ ಬಂದಿರುವ ಒ.ಟಿ.ಪಿ ಯನ್ನು ಸಹ ಈ ಪೇಜನಲ್ಲಿ ನಮೂದಿಸಿದ ಕೂಡಲೇ ಅವರ ಚಿಕ್ಕಮ್ಮನ ಬ್ಯಾಂಕ್ ಖಾತೆಯಿಂದ 99,999 ರೂಪಾಯಿಯಂತೆ 3 ಬಾರಿ, ಬಳಿಕ 24,989 ರೂಪಾಯಿ ಒಟ್ಟೂ 3,24,986 ರು. ಹಣವು ಅವರ ಚಿಕ್ಕಮ್ಮನ ಬ್ಯಾಂಕ್ ಖಾತೆಯಿಂದ ವರ್ಗಾವಣೆಯಾಗಿದೆ. ಸಿಇಎನ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
178
Srinivas Badkar

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು