ಕಾರವಾರ: ಗೃಹರಕ್ಷಕರ ವಾರ್ಷಿಕ ಕ್ರೀಡಾಕೂಟಕ್ಕೆ ಚಾಲನೆ

ಕಾರವಾರ: ಕ್ರೀಡೆಯಿಂದ ದೈಹಿಕ ಹಾಗೂ ಮಾನಸಿಕ ಆರೋಗ್ಯ ಸದೃಢವಾಗಿರಲು ಸಾಧ್ಯ ಎಂದು ಹಿರಿಯ ಪತ್ರಕರ್ತ ಸದಾಶಿವ ಎಂ.ಎಸ್ ಹೇಳಿದರು.

ಇಲ್ಲಿನ ಕಾಜುಬಾಗದ ಪೋಲಿಸ್ ಕವಾಯತು ಮೈದಾನದಲ್ಲಿ ಗೃಹರಕ್ಷಕರ ಜಿಲ್ಲಾ ಮಟ್ಟದ ವೃತ್ತಿಪರ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಕ್ರೀಡೆಯಿಂದ ಇನ್ನಷ್ಟು ಕ್ರಿಯಾಶೀಲತೆ ಮೈಗೂಡಿಸಲು ಸಾಧ್ಯ. ಇನ್ನು ಸಮಾಜದ ಹಿತಕ್ಕಾಗಿ ನಿಸ್ವಾರ್ಥದಿಂದ, ಶಿಸ್ತುಬದ್ಧವಾಗಿ ಹಗಲು ರಾತ್ರಿ ಸೇವೆ ಸಲ್ಲಿಸುತ್ತಿರುವ ಗೃಹರಕ್ಷಕರು ಸಮಾಜದ ಬಹುದೊಡ್ಡ ಆಸ್ತಿ. ನಾವು ಅವರಿಗೆ ಋಣಿಯಾಗಿರಬೇಕು  ಕಾನೂನು ಪರಿಪಾಲನೆಯ ವಿವಿಧ ಕಾರ್ಯಗಳಲ್ಲಿ ತಮ್ಮದೇ ಆದ ಕೊಡುಗೆ ನೀಡುತ್ತಿರುವ ಗೃಹ ರಕ್ಷಕರ ಸೇವೆಯು ಸದಾ ಸ್ಮರಣೀಯ ಎಂದರು.

ಅಧ್ಯಕ್ಷತೆ ವಹಿಸಿದ್ದ ಗೃಹರಕ್ಷಕದಳದ ಜಿಲ್ಲಾ ಸಮಾದೇಷ್ಠ ದೀಪಕ ಗೋಕರ್ಣ, ಕ್ರೀಡಾಕೂಟದಲ್ಲಿ ಕ್ರೀಡಾ ಸ್ಪೂರ್ತಿಯಿಂದ ಗೃಹರಕ್ಷಕರು ಪಾಲ್ಗೊಳ್ಳುವಂತೆ ಮನವಿ ಮಾಡಿದರು.

ಜಿಲ್ಲಾ ಮಟ್ಟದಲ್ಲಿ ವಿಜೇತರಾದ ೩೫ ಅರ್ಹ ಕ್ರೀಡಾಪಟುಗಳು ಮಂಗಳೂರಿನಲ್ಲಿ ಇದೇ ೧೩ ರಿಂದ ೧೫ ರವರೆಗೆ ನಡೆಯಲಿರುವ ವಲಯ ಮಟ್ಟದ ಕ್ರೀಡಾಕೂಟದಲ್ಲಿ ಭಾಗವಹಿಸಲಿದ್ದಾರೆ. ವಲಯ ಮಟ್ಟದಲ್ಲಿ ವಿಜೇತರಾದವರು ನ. ೧೮ ರಿಂದ ಬೆಂಗಳೂರಿನಲ್ಲಿ ನಡೆಯಲಿರುವ ರಾಜ್ಯ ಮಟ್ಟದ ಕ್ರೀಡಾಕೂಟದಲ್ಲಿ ಪಾಲ್ಗೊಳ್ಳಲಿದ್ದಾರೆ.

ಉತ್ತಮ ಆಟದ ಮೂಲಕ ಜಿಲ್ಲೆಗೆ ಕೀರ್ತಿ ತರುವಂತೆ ಕ್ರೀಡಾಪಟುಗಳಿಗೆ ಶುಭ ಹಾರೈಸಿದರು.  ಕ್ರೀಡಾಕೂಟದ ನಿರ್ಣಾಯಕರಾದ ರಾಜಾಸಾಬ್ ಡೆಂಗಣ್ಣನವರ್, ಜೈವಂತ ನಾಗೇಕರ, ಪ್ರವೀಣ ತಳೇಕರ, ರಫೀಕ್ ಶೇಖ್, ಇಲಾಖೆ ಸಿಬ್ಬಂದಿ ಮಧು, ಮಾಯಾ ಕಾಳೆ ಹಾಗೂ ಕುಮಟಾ ಘಟಕಾಧಿಕಾರಿ ಸಿ.ಡಿ.ನಾಯ್ಕ, ಮಲ್ಲಾಪುರ ಪ್ರಬಾರಿ ಘಟಕಾಧಿಕಾರಿ ಪ್ರಭು ಮುದ್ದಕ್ಕನವರ್ ಇದ್ದರು. ಚೆಂಡಿಯಾದ ಘಟಕಾಧಿಕಾರಿ ರಾಘವೇಂದ್ರ ಗಾಂವಕರ್ ಸ್ವಾಗತಿಸಿ ನಿರೂಪಿಸಿದರು. ಕಾರವಾರ ಘಟಕದ ಎಸ್.ಕೆ.ನಾಯ್ಕ ವಂದಿಸಿದರು.

Ashika S

Recent Posts

ವೀಕ್ಷಕರ ಗಮನ ಸೆಳೆದ ನಾಣ್ಯ ಮತ್ತು ನೋಟುಗಳ ಪ್ರದರ್ಶನ

ನಗರದ ದಸರಾ ವಸ್ತುಪ್ರದರ್ಶನ ಪ್ರಾಧಿಕಾರದ ಆವರಣದಲ್ಲಿರುವ ಪುರಾತತ್ವ ಸಂಗ್ರಹಾಲಯಗಳು ಮತ್ತು  ಪರಂಪರೆ ಇಲಾಖೆಯಲ್ಲಿ  ಆಯೋಜಿಸಿರುವ ಅಪೂರ್ವ ನಾಣ್ಯ ಮತ್ತು ನೋಟುಗಳ ಪ್ರದರ್ಶನ ನೋಡುಗರ ಗಮನ ಸೆಳೆಯಿತು.

2 mins ago

ಬೀದಿಗಳಲ್ಲಿ ಹಸುಗಳ ಕಾದಾಟ: ಬಾಲಕಿಯರ ಮೇಲೆ ಬಿದ್ದ ಹಸು, ವಿಡಿಯೋ ವೈರಲ್

ಸಿಸಿಟಿವಿಯಲ್ಲಿ ಆಘಾತಕಾರಿ ಘಟನೆಯೊಂದು ಸೆರೆಯಾಗಿದ್ದು ಬೀದಿಯಲ್ಲಿ ಬಾಲಕಿಯರ ಗುಂಪಿನ ಮೇಲೆ ಎರಡು ಹಸುಗಳು ಬಿದ್ದು ಉರುಳಾಡುವುದು ವೀಕ್ಷಕರನ್ನು ಬೆಚ್ಚಿ ಬೀಳಿಸಿದೆ,…

4 mins ago

ಅಂಜಲಿ ಹತ್ಯೆ ಪ್ರಕರಣ : ಆತ್ಮಹತ್ಯೆಗೆ ಯತ್ನಿಸಿದ ಸಹೋದರಿ ಚೇತರಿಕೆ

ಅಂಜಲಿ ಅಂಬಿಗೇರ ಹತ್ಯೆ ಪ್ರಕರಣ ರಾಜ್ಯಾದ್ಯಂತ ಸಂಚಲನ ಸೃಷ್ಟಿಸಿದೆ. ಈ ಮಧ್ಯೆ ಸಹೋದರಿಯ ಹತ್ಯೆಯಿಂದ ಮಾನಸಿಕವಾಗಿ ಕುಗ್ಗಿ ಹೋಗಿರುವ ಯಶೋದಾ…

27 mins ago

ಜಮ್ಮು-ಕಾಶ್ಮೀರದಲ್ಲಿ ಭಯೋತ್ಪಾದಕ ದಾಳಿ : ಬಿಜೆಪಿ ಮಾಜಿ ಸರಪಂಚ್ ಸಾವು

ಜಮ್ಮು-ಕಾಶ್ಮೀರದಲ್ಲಿ ಇನ್ನು ಎರಡು ದಿನಗಳಲ್ಲಿ ಲೋಕಸಭೆ ಚುನಾವಣೆ ನಡೆಯಲಿದ್ದು, ಅದಕ್ಕೂ ಮುನ್ನ ನಿನ್ನೆ ಶನಿವಾರ ತಡರಾತ್ರಿ ಜಮ್ಮು ಮತ್ತು ಕಾಶ್ಮೀರದ…

37 mins ago

ವಿಮಾನ ಇಂಜಿನ್‌ನಲ್ಲಿ ಬೆಂಕಿ : ಬೆಂಗಳೂರಿನಲ್ಲಿ ತುರ್ತು ಭೂಸ್ಪರ್ಶ

ಬೆಂಗಳೂರಿನಿಂದ ಕೊಚ್ಚಿಗೆ ಪ್ರಯಾಣಿಸುತ್ತಿದ್ದ ಏರ್‌ ಇಂಡಿಯಾ ಎಕ್ಸಪ್ರೆಸ್‌ ವಿಮಾನವು ಶನಿವಾರ ತಡರಾತ್ರಿ ಬೆಂಗಳೂರು ವಿಮಾನ ನಿಲ್ದಾಣದಲ್ಲಿ ತುರ್ತು ಲ್ಯಾಂಡಿಂಗ್‌ ಮಾಡಿದೆ.…

45 mins ago

ಸಿಂಗಾಪುರದಲ್ಲಿ ಹೆಚ್ಚುತ್ತಿರುವ ಕೊರೊನಾ ಅಲೆ ಭೀತಿ : ಮಾಸ್ಕ್‌ ಧರಿಸುವಂತೆ ಆದೇಶ

ಸಿಂಗಾಪುರದಲ್ಲಿ ಕೊರೊನಾ ಸೋಂಕಿನ ಹೊಸ ಅಲೆ ಭೀತಿ ಎದುರಾಗಿದ್ದು, ದಿನದಿಂದ ದಿನಕ್ಕೆ ಕೊರೊನಾ ಸೋಂಕಿತ ಸಂಖ್ಯೆಯಲ್ಲಿ ಏರಿಕೆಯಾಗಿದೆ. ಜನರಿಗೆ ಮಾಸ್ಕ್‌…

47 mins ago