News Karnataka Kannada
Sunday, April 14 2024
Cricket
ಉತ್ತರಕನ್ನಡ

ಕಾರವಾರ: ಮಾಜಿ ಸಚಿವ ಪ್ರಭಾಕರ ರಾಣೆ ನಿಧನ

Karwar: Former Minister Prabhakar Rane passes away
Photo Credit : By Author

ಕಾರವಾರ: ಮಾಜಿ ಸಚಿವ ಪ್ರಭಾಕರ ರಾಣೆ ಸೋಮವಾರ ಕೊನೆಯುಸಿರೆಳೆದರು. ಅವರಿಗೆ ೮೧ ವರ್ಷ ವಯಸ್ಸಾಗಿತ್ತು. ವಯೋ ಸಹಜ ಕಾಯಿಲೆಗಳಿದ್ದ ಅವರು ಅಲ್ಪ ಕಾಲದ ಅಸ್ವಸ್ಥತೆ ಯಿಂದ ಬಳಲುತ್ತಿದ್ದರು. ಮರೆವಿನ(ಅಲ್ಜಮೇರಿಯಾ) ಸಹ ಅವರನ್ನು ಕಾಡುತ್ತಿತ್ತು.

ಸಿದ್ಧರದ ಮಲ್ಲಿಕಾರ್ಜುನ ಶಿಕ್ಷಣ ಸಂಸ್ಥೆಯಲ್ಲಿ ದೈಹಿಕ ಶಿಕ್ಷಕರಾಗಿ ಸೇವೆ ಆರಂಭಿಸಿದ್ದ ಅವರು ಶಿಕ್ಷಕರನ್ನು ಸಂಘಟಿಸಿದ್ದರು. ತಾಲೂಕಾ ಅಭಿವೃದ್ಧಿ ಮಂಡಳಿ ಸದಸ್ಯರಾಗಿ ರಾಜಕೀಯ ಪ್ರವೇಶಿಸಿದರು‌. ೧೯೮೩ ರಿಂದ ಮೂರು ಅವಧಿಗೆ ಕಾಂಗ್ರೆಸ್ ಪಕ್ಷದಿಂದ ಶಾಸಕರಾಗಿದ್ದರು. ವೀರಪ್ಪ ಮೊಯಿಲಿ ಸಚಿವ ಸಂಪುಟದಲ್ಲಿ ವಯಸ್ಕರ ಶಿಕ್ಷಣ ಮತ್ತು ಸಾಕ್ಷರತೆ ಶಿಕ್ಷಣ ಸಚಿವರಾಗಿ ೧೦ ತಿಂಗಳು ಸಚಿವರಾಗಿದ್ದರು. ವೀರಪ್ಪ ಮೊಯ್ಲಿ ಕ್ಯಾಬಿನೆಟ್ ನಲ್ಲಿ ಸಚಿವರಾಗಿ ಸೇವೆ ಸಲ್ಲಿಸಿದ್ದರು‌ . ೧೯೯೩ ರಲ್ಲಿ ಸಚಿವರಾಗಿ ಸೇವೆ ಸಲ್ಲಿಸಿದರು.ಕಾರವಾರ ಜೊಯಿಡಾ ಶಾಸಕರಾಗಿ ಮೂರು ಅವಧಿ ಪೂರೈಸಿದ್ದ ಅವರು ೧೯೯೬ ರಲ್ಲಿ ಸೋಲು ಅನುಭವಿಸಿದರು.

ನಂತರ ಬಿಜೆಪಿಯಿಂದ ಸ್ಪರ್ಧಿಸಿ ಶಾಸಕ ವಸಂತ ಅಸ್ನೋಟಿಕರ್ ವಿರುದ್ಧ ಸೋಲು ಅನುಭವಿಸಿದರು. ನಂತರ ಜೆಡಿಎಸ್ ಸಹ ಸೇರಿದ್ದ ರಾಣೆ ಮತ್ತೆ ಸೋಲು ಕಂಡರು. ರಾಣೆ ಬಾಪೂಜಿ ಗ್ರಾಮೀಣ ವಿಕಾಸ ಸಮಿತಿ ಸ್ಥಾಪಿಸಿ ಅದರ ಅಧ್ಯಕ್ಷರಾದರು.

ಕಾರವಾರ ಜೊಯಿಡಾ ತಾಲೂಕಿನಲ್ಲಿ ಶಾಲಾ‌ ಕಾಲೇಜು ಸ್ಥಾಪಿಸಿದರು. ಬಡ ಕುಟುಂಬಗಳ ಮಕ್ಕಳು ಶಿಕ್ಷಣ ಬೆಳಕು ಕಾಣಲು ಕಾರಣರಾಗಿದ್ದರು. ಮಲ್ಲಿಕಾರ್ಜುನ ಶಿಕ್ಷಣ ಸಂಸ್ಥೆಯ ಅಧ್ಯಕ್ಷರೂ ಆಗಿದ್ದರು. ಜನ ಶಿಕ್ಷಣ ಸಂಸ್ಥಾನವನ್ನು ಉತ್ತರ ಕನ್ನಡದಲ್ಲಿ ಕ್ರಿಯಾಶೀಲ ಗೊಳಿಸಿದರು. ರಾಣೆ ಅವರು ಪತ್ನಿ ಹಾಗೂ ಅಪಾರ ಬಂಧು ಬಳಗ ವನ್ನು ಅಗಲಿದ್ದಾರೆ. ಅವರ ನಿಧನಕ್ಕೆ ರಾಜಕೀಯ ಮುಖಂಡರು ಸಂತಾಪ ಸೂಚಿಸಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
178
Srinivas Badkar

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು