News Karnataka Kannada
Sunday, April 14 2024
Cricket
ಉತ್ತರಕನ್ನಡ

ಕಾರವಾರ: ಗ್ರಾಪಂ ವಾಟರ್ ಮನ್ ಗಳಿಗೆ ನ್ಯಾಯ ಕಲ್ಪಿಸುವಂತೆ ಆಗ್ರಹಿಸಿ ಡಿಸಿ ಕಚೇರಿ ಬಳಿ ಧರಣಿ

Karwar: Dharna in front of DC's office demanding justice for gram panchayat watermen
Photo Credit : By Author

ಕಾರವಾರ: ನಗರದ ಜಿಲ್ಲಾಧಿಕಾರಿ ಕಚೇರಿಯ ಎದುರು ಸೋಮವಾರ ಜಿಲ್ಲೆಯ ಗ್ರಾಮ ಪಂಚಾಯತ್ ವಾಟರ್‌ಮನ್‌ಗಳು ಎಚ್‌ಆರ್‌ಎಂಎಸ್ ಮೂಲಕ ವೇತನ ಪಾವತಿಗೆ ಆಗ್ರಹಿಸಿ ಅನಿರ್ಧಿಷ್ಟಾವಧಿಯ ಧರಣಿ ನಡೆಸಿದರು. ಡಾ. ಬಿ ಆರ್ ಅಂಬೇಡ್ಕರ್ ಅವರ ಭಾವಚಿತ್ರವನ್ನು ಇಟ್ಟು ಪ್ರತಿಭಟನೆ ಆರಂಬಿಸಿದರು.

ಬಳಿಕ ಜಿಲ್ಲಾ ಪಂಚಾಯತ್ ಹಾಗೂ ಅಧಿಕಾರಿಗಳ ವಿರುದ್ಧ ಘೋಷಣೆಗಳನ್ನು ಹಾಕಿದರು. ಬಳಿಕ ಕರ್ನಾಟಕ ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ಬಸವರಾಜ ಸಂಗಮೇಶ್ವರ ಮಾತನಾಡಿ, ಈ ಹಿಂದೆ ವೇತನ ಪಾವತಿಯ ಬಗ್ಗೆ ಜಿಲ್ಲಾ ಪಂಚಾಯಿತಿ ಕಚೇರಿಗೆ ಮನವಿ ನೀಡಲಾಗಿತ್ತು. ಆದರೆ ಈ ವರೆಗೆ ಯಾವುದೆ ಪ್ರಯೋಜನವಾಗಲಿಲ್ಲ. ಸರಕಾರವು 2017ರಲ್ಲಿ ಪಂಚಾಯಿತಿ ನೌಕರರನ್ನು ಪಂಚತಂತ್ರದಲ್ಲಿ ಅಳವಡಿಸಲು ಆದೆಶ ನೀಡಿದೆ. ಜತೆಗೆ 2021 ರಲ್ಲಿ ಗ್ರಾಮ ಪಂಚಾಯತಿ ಸಿಬ್ಬಂದಿಗಳಿಗೆ ನಗದು, ಚೆಕ್,ಡಿ.ಡಿ, ನೆಪ್ಟ್, ಆರ್ಟಿಜಿಎಸ್ ಮೂಲಕ ವೇತನ ಪಾವತಿಸುವುದನ್ನು ನಿಷೇಧಿಸಲಾಗಿದೆ. ಆದರೆ ಉತ್ತರಕನ್ನಡ ಜಿಲ್ಲೆಯಲ್ಲಿ ಪ್ರತಿ ಗ್ರಾಮ ಪಂಚಾಯಿತಿಗಳಲ್ಲಿ 2 ರಿಂದ 6 ಜನ ವಾಟರ್‌ಮೆನ್‌ಗಳಿದ್ದು, ಇವರಿಗೆ ನಗದು, ಚೆಕ್,ಡಿ.ಡಿ, ನೆಪ್ಟ್, ಆರ್ಟಿಜಿಎಸ್ ಮೂಲಕ ವೇತನ ನೀಡಲಾಗುತ್ತಿದೆ ಎಂದು ಆರೋಪಿಸಿದ್ದಾರೆ. ಕೂಡಲೇ ಈ ರಿತಿ ವೇತನ ಪಾವತಿಸುವುದನ್ನು ತಡೆಹಿಡಿದು ಸರ್ಕಾರದ ಆದೇಶದಂತೆ ಆನ್ ಲೈನ್ ಪಂಚತಂತ್ರ 2.0 ಮೂಲಕ ಸಿಬ್ಬಂದಿಗಳ ವೇತನ ಪಾವತಿಸಬೇಕು.

ಅಲ್ಲದೆ ಈವರೆಗೂ ಆದೇಶ ಪಾಲಿಸದ ಜಿಲ್ಲಾ ಪಂಚಾಯಿತಿ ಸಿಇಓ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಮನವಿಯಲ್ಲಿ ಒತ್ತಾಯಿಸಿದ್ದಾರೆ.ಜಾವಿದ್ ವಾಗಿನಕೋಡು, ಲಕ್ಷ್ಮಣ ಕೊಳಕಾರ, ಮಾದೇಶ ಹುಲ್ಲೂರು, ಮೆಹಬೂಬ್ ಮುಲ್ಲಾ, ಮಂಜುನಾಥ ಬೋವಿ, ಸುರೇಶ್ ಕರ್ಜಗಿ, ಈರಪ್ಪ ಬೆನಕಣ್ಣನವರ, ನವುಲು ಅಪ್ಪು ಸಳಕೆ, ಗಣಪತಿ ನಾಯ್ಕ, ಮಾಂಬು ಜಾಣು ಗಾವಡೆ, ಸಂತೋಷ ಇಡಗೋಡ, ಶೇಖಪ್ಪ, ರಾಮು ಚಕ್ರಸಾಲಿ, ಜಾನು ಗಾವಡೆ, ಮಲ್ಲಪ್ಪ ಬೊಂಗಾಳೆ, ಜೀವನ್ ಲಮಾಣಿ, ಸುಭಾಷ್ ಹರಿಜನ, ಪರಮೇಶ ಪಾಟೀಲ, ಬಂಕಪ್ಪ ಕಾಮನಳ್ಳಿ, ಚಂದ್ರಶೇಖರ್ ಚೆನ್ನಯ್ಯ, ಇಸ್ಮಾಯಿಲ್ ಮರುಸಾಬ ಹಾಗೂ ಜಯಪ್ಪ ಕಲಕರಡಿ ಇದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
178
Srinivas Badkar

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು