News Karnataka Kannada
Saturday, April 20 2024
Cricket
ಉತ್ತರಕನ್ನಡ

ಕಾರವಾರ: ದಶಕದ ಬಳಿಕ ಮತ್ತೆ ವೈಭವತ್ತ ಅಘನಾಶಿನಿ ಹಿನ್ನೀರಿನ ಚಿಪ್ಪೆಕಲ್ಲು

Karwar: After a decade, Aghanashini backwaters are back in glory
Photo Credit : News Kannada

ಕಾರವಾರ: ಅಘನಾಶಿನಿ ಮತ್ತು ಗಂಗಾವಳಿ ನದಿಯಲ್ಲಿ ಈ ವರ್ಷ ಅಧಿಕ ಚಿಪ್ಪೆಕಲ್ಲು ದೊರೆಯುತ್ತಿರುವುದು ಮೀನುಗಾರರ ಸಂತಸಕ್ಕೆ ಕಾರಣವಾಗಿದೆ. ಇಲ್ಲಿ ದೊರೆಯುವ ಚಿಪ್ಪೆಕಲ್ಲನ್ನು ಕೇವಲ ಸ್ಥಳೀಯವಾಗಿ ಮಾತ್ರವಲ್ಲದೇ ಪಂಚತಾರಾ ಹೊಟೇಲ್ಗಳಲ್ಲಿಯೂ ಕಳಿಸಲಾಗುತ್ತದೆ. ಹೀಗಾಗಿ ಮೀನುಗಾರರ ಪಾಲಿಗೆ ಈ ಎರಡು ನದಿಗಳು ಅಕ್ಷಯ ಪಾತ್ರೆಯಂತಾಗಿದೆ.

ಅಘನಾಶಿನಿ ನದಿಯಲ್ಲಿ ಕಪ್ಪೆಚಿಪ್ಪು ಹಾಗೂ ಮೀನುಗಾರಿಕೆ ನಂಬಿಕೊಂಡು 40 ಗ್ರಾಮದವರು ಜೀವನ ನಡೆಸುತ್ತಿದ್ದಾರೆ. ಮಹಿಳೆಯರು ನದಿ ದಡದಲ್ಲಿ ಚಿಪ್ಪೆಕಲ್ಲು ಹೆಕ್ಕಿ ಮಾರಾಟ ಮಾಡಿ ಸ್ವಾವಲಂಬಿ ಜೀವನ ನಡೆಸುವಂತಾಗಿದೆ. ಆದರೆ ಈ ಹಿಂದೆ ಚಿಪ್ಪೆ ಗಣಿಗಾರಿಕೆ ನಡೆಯುತ್ತಿರುವುದರಿಂದ ಚಿಪ್ಪೆಕಲ್ಲು ಸಿಗುವುದು ಅಪರೂಪ ಎಂಬಂತಾಗಿತ್ತು. ಆದರೆ ಈಗ ಮತ್ತೊಮ್ಮೆ ಮೀನುಗಾರರು ಸಂತಸ ಪಡುವಂತಾಗಿದೆ.

ಅಘನಾಶಿನಿ ನದಿಯಲ್ಲಿ ಚಿಪ್ಪೆ ಗಣಿಗಾರಿಕೆ ನಿಲ್ಲಬೇಕು ಎಂದು ಸ್ಥಳೀಯರು 1971 ರಿಂದಲೇ ಹೋರಾಟ ನಡೆಸುತ್ತಲೇ ಬಂದಿದ್ದು, ಆದರೆ ಅದನ್ನು ಸ್ಥಗಿತಗೊಳಿಸಲು ಸಾಧ್ಯವಾಗಿರಲಿಲ್ಲ. ದೊಡ್ಡ ದೊಡ್ಡ ವ್ಯಕ್ತಿಗಳೇ ಶಾಮೀಲಾಗಿರುವುದರಿಂದ ಮೀನುಗಾರರ ಹೋರಾಟಕ್ಕೆ ಯಾವುದೇ ಬೆಲೆ ಇಲ್ಲದಂತಾಗಿತ್ತು. ಆದರೆ ಕಳೆದ ದಶಕಗಳ ಹಿಂದೆ ತೀವೃ ಹೋರಾಟದ ನಡುವೆ ಹಾಗೂ ಪರಿಸರವಾದಿಗಳ ಕಾಳಜಿಯಿಂದಾಗಿ ಚಿಪ್ಪುಗಣಿಗಾರಿಕೆ ಸ್ಥಗಿತಗೊಂಡಿತ್ತು. ಈ ಅಘನಾಶಿನಿ ನದಿಯನ್ನು ನಂಬಿಕೊಂಡು 40 ಗ್ರಾಮಗಳಿವೆ. ಅದರಲ್ಲಿ 10 ಸಾವಿರ ಕುಟುಂಬವಿದ್ದು, ಇವರೆಲ್ಲರೂ ಇಲ್ಲಿಯ ಚಿಪ್ಪೆಕಲ್ಲು, ಮೀನು ಇವುಗಳನ್ನು ಹಿಡಿದು ಜೀವನ ಮಾಡುತ್ತಿದ್ದರು. ಒಬ್ಬರ ವಾರ್ಷಿಕ ದುಡಿಮೆ 50 ಸಾವಿರದಿಂದ ಎರಡು ಲಕ್ಷದವರೆಗೆ ಇರುತ್ತಿತ್ತು ಎನ್ನಲಾಗಿದೆ. ಚಿಪ್ಪೆ ಗಣಿಗಾರಿಕೆ ನಿಂತು ದಶಕಗಳ ಬಳಿಕ ಈಗ ಮತ್ತೆ ಸ್ವಾಭಾವಿಕವಾಗಿ ನದಿ ತನ್ನ ರೂಪ ಪಡೆದುಕೊಂಡಿರುವುದರಿಂದ ಮೀನುಗಾರ ಮಹಿಳೆಯರು ಚಿಪ್ಪೆಕಲ್ಲಿನತ್ತ ಮುಖ ಮಾಡಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12792
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು