News Karnataka Kannada
Friday, April 19 2024
Cricket
ಉತ್ತರಕನ್ನಡ

ಚಂದ್ರಯಾನ-3 ಪೂರ್ಣ ಯಶಸ್ಸಿನ ಪ್ರತೀಕ್ಷೆ: ರಾಘವೇಶ್ವರ ಸ್ವಾಮೀಜಿ

Chandrayaan-3 is expected to be a complete success: Raghaveswara Swamiji
Photo Credit : News Kannada

ಗೋಕರ್ಣ: ಬಹುನಿರೀಕ್ಷಿತ ಚಂದ್ರಯಾನ-3 ಗಗನನೌಕೆ ಯಶಸ್ವಿಯಾಗಿ ನಭಕ್ಕೆ ಚಿಮ್ಮಿದೆ. ಆಕಾಶದೆತ್ತರಕ್ಕೆ ಚಿಮ್ಮಿರುವುದು ಚಂದ್ರಯಾನ ನೌಕೆ ಮಾತ್ರವಲ್ಲ; ನಮ್ಮ ಹೃದಯ. ನಮ್ಮ ಹೃದಯ ಮಾತ್ರವಲ್ಲ; ಶತಕೋಟಿ ಭಾರತೀಯರ ಹೃದಯ ಇಂದು ಆಗಸಕ್ಕೆ ಯಶಸ್ವಿಯಾಗಿ ಹಾರಿದೆ ಎಂದು ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀರಾಘವೇಶ್ವರಭಾರತೀಮಹಾಸ್ವಾಮೀಜಿ ಬಣ್ಣಿಸಿದ್ದಾರೆ.

ಭಾರತದ ಇತಿಹಾಸದಲ್ಲಿ ಇದು ಅಪರೂಪದಲ್ಲಿ ಅಪರೂಪದ ದಿನ. ಉಡಾವಣೆ ಯಶಸ್ವಿಯಾದದ್ದು ಎಲ್ಲಿಲ್ಲದ ಸಂಭ್ರಮ ತಂದಿದೆ. ನಮಗೇ ಇಷ್ಟು ಖುಷಿಯಾಗಿರಬೇಕಾದರೆ ಆ ವಿಜ್ಞಾನಿಗಳಿಗೆ ಅದೆಷ್ಟು ಸಂಸತಸವಾಗಿರಬೇಡ ಎಂದು ಸ್ವಾಮೀಜಿ ಉದ್ಗರಿಸಿದ್ದಾರೆ.

“ಹಿಂದಿನ ಕಾಲದಲ್ಲಿ ಋಷಿಮುನಿಗಳು ತಪಸ್ಸು ಮಾಡುತ್ತಿದ್ದುದನ್ನು ನಾವು ಕೇಳಿದ್ದೇವೆ. ಇಸ್ರೋದಲ್ಲಿ ವಿಜ್ಞಾನಿಗಳು ಮಾಡುತ್ತಿರುವುದು ತಪಸ್ಸಿಗೆ ಕಡಿಮೆಯೇನೂ ಅಲ್ಲ. ಅವರ ಅಗಾಧವಾದ ಪರಿಶ್ರಮ ಫಲಕೊಟ್ಟು ಆಕಾಶನೌಕೆ ಯಶಸ್ವಿಯಾಗಿ ಉಡಾವಣೆಯಾಗಿರುವುದು ಶತಕೋಟಿ ಭಾರತೀಯರು ಹೆಮ್ಮೆಪಡುವಂಥ ವಿಚಾರ” ಎಂದು ಸಂದೇಶದಲ್ಲಿ ವಿವರಿಸಿದ್ದಾರೆ.

ಆಕಾಶದಲ್ಲಿ ಭಾರತದ ಕೀರ್ತಿಪತಾಕೆ ಹಾರುತ್ತಿದೆ ಎಂಬ ಭಾವನೆ ಬರುತ್ತಿದೆ. ನಾವು, ಧರ್ಮಪುರುಷರೆಲ್ಲ ಸೇರಿ ಅನುಷ್ಠಾನ ಮಡೋಣ. ಶುಭ ಹಾರೈಕೆ ಮಾಡೋಣ. ಈ ನೌಕೆ ಯಶಸ್ವಿಯಾಗಿ ಚಂದ್ರನಲ್ಲಿ ಇಳಿಯಬೇಕು. ಈ ಯೋಜನೆ ಪರಿಪೂರ್ಣ ಯಶಸ್ಸು ಕಾಣಬೇಕು. ತನ್ಮೂಲಕ ದೇಶಕ್ಕೆ, ವಿಶ್ವಕ್ಕೆ ಶ್ರೇಯಸ್ಸು ಆಗಬೇಕು. ಆ ಆಕಾಶನೌಕೆ ಚಂದ್ರನಲ್ಲಿ ಇಳಿದು ಭಾರತದ ಕೀರ್ತಿಪತಾಕೆ ಚಂದ್ರನಲ್ಲಿ ಸ್ಥಾಪಿಸುವಂತೆ ಆಗುವ ಸುದಿನಕ್ಕಾಗಿ ಪ್ರತೀಕ್ಷೆ ಮಾಡೋಣ. ನಾವೆಲ್ಲ ಸೇರಿ ಇದಕ್ಕಾಗಿ ಪ್ರಾರ್ಥನೆ ಮಾಡೋಣ, ತಪಸ್ಸು ಮಾಡೋಣ ಎಂದು ಕೋರಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು