News Karnataka Kannada
Saturday, April 20 2024
Cricket
ಉತ್ತರಕನ್ನಡ

ಕಾರವಾರ: ಬೈಕ್ ಮತ್ತು ಕಾರು ಅಪಘಾತ, ಸವಾರ ಸಾವು

Woman dies, 9 others injured in car collision
Photo Credit : News Kannada

ಕಾರವಾರ: ಬೈಕ್ ಮತ್ತು ಕಾರಿನ ನಡುವೆ ಅಪಘಾತ ಸಂಭವಿಸಿ ಬೈಕ್ ಸವಾರ ಮೃತಪಟ್ಟು ಹಿಂಬದಿಯ ಸವಾರ ಗಾಯಗೊಂಡ ಘಟನೆ ಅಂಕೋಲಾ ತಾಲೂಕಿನ ಶೆಟಗೇರಿ ಕ್ರಾಸ್ ಬಳಿ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಸಂಭವಿಸಿದೆ.

ರಾಜಸ್ಥಾನದ ಪಾಲಿಯ ಮೂಲ ನಿವಾಸಿ ಹಾಲಿ ಕುಮಟಾ ಹೆಗಡೆಯಲ್ಲಿ ವಾಸವಾಗಿದ್ದ ಸುರೇಶ ಹರಿರಾಮ ಸೋಲಂಕಿ(55) ಮೃತ ವ್ಯಕ್ತಿಯಾಗಿದ್ದು ಬೈಕ್ ಹಿಂಬದಿಯಲ್ಲಿ ಕುಳಿತಿದ್ದ ಮುಕೇಶ ಕುಮಾರ ರಾವಲ್ (26) ಎಂಬಾತ ಗಾಯಗೊಂಡಿದ್ದಾನೆ.

ರಾಜಸ್ಥಾನದಿಂದ ಬಂದು ಕುಮಟಾದಲ್ಲಿ ವಾಸವಾಗಿ ಸ್ಟೀಲ್ ಫರ್ನಿಚರ್ ಕೆಲಸ ಮಾಡಿಕೊಂಡಿದ್ದ ಇವರು ಅಂಕೋಲಾ ಕಡೆಯಿಂದ ಕುಮಟಾ ಕಡೆ ಸಾಗುತ್ತಿದ್ದ ಸಂದರ್ಭದಲ್ಲಿ ಶೆಟಗೇರಿ ಕ್ರಾಸ್ ಬಳಿ ಹಿಂಬದಿಯಿಂದ ಓವರ್ ಟೇಕ್ ಮಾಡಿಕೊಂಡು ಬಂದ ಕಾರು ಚಾಲಕ ಬೈಕಿನ ಮುಂದೆ ಹೋಗಿ ಕಾರನ್ನು ಯಾವುದೇ ಸೂಚನೆ ನೀಡದೆ ಎಡಕ್ಕೆ ಬಂದು ಬೈಕ್ ಎದುರು ನಿಲ್ಲಿಸಿದ ಪರಿಣಾಮ ಬೈಕು ಕಾರಿಗೆ ಹಿಂಬದಿಗೆ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ.

ಅಪಘಾತದಿಂದ ಡಿವೈಡರ್ ಮೇಲೆ ಬಿದ್ದು ತೀವ್ರ ಗಾಯಗೊಂಡ ಬೈಕ್ ಸವಾರನನ್ನು ಕಾರವಾರ ಜಿಲ್ಲಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಿಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೇ ಆತ ಮೃತ ಪಟ್ಟಿರುವುದಾಗಿ ತಿಳಿದು ಬಂದಿದೆ.

ಹಿಂಬದಿ ಸವಾರ ಚೇತರಿಸಿಕೊಳ್ಳುತ್ತಿದ್ದು ಆರೋಪಿತ ಕಾರು ಚಾಲಕ ಸುರೇಶ ತಿಮ್ಮಪ್ಪ ಎಂಬಾತನ ಮೇಲೆ ದೂರು ದಾಖಲಾಗಿದೆ. ಅಂಕೋಲಾ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12792
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು