ಸಿದ್ದಾಪುರ : ರಾಜ್ಯದಲ್ಲಿ ಕೊರೊನಾ 4ನೇ ಅಲೆಯ ಆತಂಕದ ನಡುವೆ ಮಂಗನ ಕಾಯಿಲೆ ಉಲ್ಭಣಿಸುತ್ತಿದ್ದು, ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನಲ್ಲಿ ಮತ್ತೆ ಇಬ್ಬರಲ್ಲಿ ಮಂಗನ ಕಾಯಿಲೆ ಸೋಂಕು ದೃಢಪಟ್ಟಿದೆ.
ರಾಜ್ಯದಲ್ಲಿ ಈಗಾಗಲೇ 4ನೇ ಭೀತಿ ಶುರುವಾಗಿದ್ದು, ಕೊರೊನಾ ಸೋಂಕಿತರ ಸಂಖ್ಯೆಯಲ್ಲೂ ನಿಧನವಾಗಿ ಏರಿಕೆಯಾಗ್ತಿದೆ
ಇನ್ನು ಈ ನಡುವೆ ಉತ್ತರ ಕನ್ನಡ ಜಿಲ್ಲೆಯಲ್ಲಿ ಮಂಗನ ಕಾಯಿಲೆ ಹವಾಳಿ ಹೆಚ್ಚುತ್ತಿದ್ದು, ಮತ್ತೆ ಇಬ್ಬರಲ್ಲಿ ಮಂಗನ ಕಾಯಿಲೆ ಸೋಂಕು ಪತ್ತೆಯಾಗಿದೆ. ಈ ಮೂಲಕ ಮಂಗನಕಾಯಿಲೆ ಸೋಂಕಿತರ ಸಂಖ್ಯೆ 11 ಕ್ಕೆ ಏರಿಕೆಯಾಗಿದೆ.ದ್ದಾಪುರ ದಲ್ಲಿ 85 ವರ್ಷದ ವೃದ್ಧೆ ಜಾನಕಿ ಹೆಗಡೆ ಎನ್ನುವವರು ಬಲಿಯಾಗಿದ್ದಾರೆ.
ಸಿದ್ದಪುರ ತಾಲೂಕಿನಲ್ಲಿ ಇಬ್ಬರಲ್ಲಿ ಮಂಗನ ಕಾಯಿಲೆ ಪತ್ತೆಯಾಗಿದೆ. 18 ವರ್ಷದ ಯುವತಿ ಮತ್ತು 42 ವರ್ಷದ ಮಹಿಳೆಗೆ ಮಂಗನಕಾಯಿಲೆ ದೃಢಪಟ್ಟಿದೆ. ಈ ಮೂಲಕ ಮಂಗನಕಾಯಿಲೆ ಸೋಂಕಿತರ ಸಂಖ್ಯೆ 11 ಕ್ಕೆ ಏರಿಕೆಯಾಗಿದೆ.