News Karnataka Kannada
Monday, April 29 2024
ಉತ್ತರಕನ್ನಡ

ಜೋಗ ಜಲಪಾತ ವೈಭವದ ದೃಶ್ಯ ಕಣ್ತುಂಬಿಕೊಂಡ ರಾಜ್ಯಪಾಲರು

Thavarchand
Photo Credit :

ಉತ್ತರ ಕನ್ನಡ, ನ 25 : ಭಾರತದ ಅತಿ ಎತ್ತರದ ಜೋಗ ಜಲಪಾತ ಮತ್ತು ಸುತ್ತಮುತ್ತಲಿನ ನಿಸರ್ಗದ ಸೌಂದರ್ಯವನ್ನು ಗೌರವಾನ್ವಿತ ರಾಜ್ಯಪಾಲರಾದ  ಥಾವರ್ ಚಂದ್ ಗೆಲ್ಹೋಟ್ ಅವರು ವೀಕ್ಷಿಸಿ ಸಂತಸ ಪಟ್ಟರು.

ನವೆಂಬರ್ 24ರಂದು ರಾತ್ರಿ ಜೋಗದಲ್ಲಿ ವಾಸ್ತವ್ಯ ಹೂಡಿದ ಅವರು, ಇಂದು ಮುಂಜಾನೆಯೇ ಜೋಗದ ರಾಜಾ ರಾಣಿ ರೋರರ್ ರಾಕೆಟ್ ಹೆಸರಿನ ಜಲಧಾರೆಗಳ ಮಾಹಿತಿಯನ್ನು ಪಡೆದರು.

ನಂತರ ದಟ್ಟವಾದ ಕಾಡು ಮತ್ತು ಗುಡ್ಡಗಳ ನಡುವಲ್ಲಿ ಶರಾವತಿ ನದಿಯು ಹರಿದು ಅತಿ ಎತ್ತರದಿಂದ ಭೋರ್ಗರೆಯುತ್ತಾ ನಾಲ್ಕು ಸೀಳಾಗಿ ಧುಮುಕುತ್ತಿರುವ ವೈಭವದ ದೃಶ್ಯವನ್ನು ಕಣ್ತುಂಬಿಕೊಂಡರು.

ಈ ಸಂದರ್ಭದಲ್ಲಿ ಉತ್ತರ ಕನ್ನಡ ಡಿಸಿ ಮುಲ್ಲೈ ಮುಹಿಲನ್, ಎಸ್ ಪಿ ಡಾ.ಸುಮನ್ ಡಿ ಪೆನ್ನೇಕರ್, ಕುಮ್ಟ ಎಸಿ ರಾಹುಲ್ ಪಾಂಡೆ ಉಪಸ್ಥಿತರಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
190
Ismail M Kutty

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು