News Karnataka Kannada
Monday, April 22 2024
Cricket
ಉಡುಪಿ

ನೆರೆಪೀಡಿತರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಿದ್ದೇವೆ: ಡಿಸಿ ಕೂರ್ಮಾರಾವ್

Koorma Rao
Photo Credit : News Kannada

ಉಡುಪಿ: ತಗ್ಗು ಪ್ರದೇಶಗಳಲ್ಲಿ ಸ್ಥಳಾಂತರ ನಡೆಸಲು ಅಗ್ನಿಶಾಮಕ ದಳ ಸಿದ್ದವಾಗಿದೆ. 9 ಪ್ರದೇಶಗಳಿಗೆ ಈಗಾಗಲೇ ಬೋಟ್ ವ್ಯವಸ್ಥೆ ಆಗಿದೆ. ಉಡುಪಿ ನಗರದ ತಗ್ಗು ಪ್ರದೇಶಗಳಲ್ಲಿ ಕೂಡಾ ನೀರು ಮನೆಗೆ ನುಗ್ಗಿದೆ. ಜನರನ್ನು ಎತ್ತರದ ಪ್ರದೇಶಗಳಿಗೆ ಸ್ಥಳಾಂತರ ಮಾಡುತ್ತಿದ್ದೇವೆ. ಎಲ್ಲಾ ತಂಡಗಳು ಸನ್ನದ ಇವೆ ಎಂದು ಜಿಲ್ಲಾಧಿಕಾರಿ ಕುರ್ಮಾರಾವ್ ಹೇಳಿದರು.

ಉಡುಪಿಯಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ಉಸ್ತುವಾರಿ ಸಚಿವರು ಕೂಡಾ ನಿರಂತರವಾಗಿ ಸಂಪರ್ಕದಲ್ಲಿದ್ಧು ಮಾರ್ಗದರ್ಶನ ಮಾಡುತ್ತಿದ್ದಾರೆ. ಕಂಟ್ರೋಲ್‌ ರೂಂ ಕೂಡಾ ನಿರಂತರವಾಗಿ ಕಾರ್ಯ‌ನಿರ್ವಹಿಸುತ್ತಿದೆ.

ಸಾರ್ವಜನಿಕರು ಯಾವಾಗ ಬೇಕಾದರೂ ಕರೆ ಮಾಡಿ ಸಹಾಯ ಪಡೆದುಕೊಳ್ಳಬಹುದು. ನದಿ, ಹಳ್ಳ ಪ್ರದೇಶಗಳಲ್ಲಿ ಎಚ್ಚರ ವಹಿಸಬೇಕು‌. ಸಮುದ್ರ ತೀರದಲ್ಲಿ ಹೆಚ್ಚಿನ ಅಲೆಗಳು ಬರುತ್ತಿವೆ ಅಲ್ಲಿಗೆ ಯಾರೂ ಕೂಡಾ ಹೋಗಬಾರದು. ವಾರ್ಡ್ ಮಟ್ಟದಲ್ಲಿ ಕೂಡಾ ಜಾಗೃತಿ ಮಾಡುತ್ತಿದ್ದೇವೆ. ಹಾನಿಗೆ ತಹಶಿಲ್ದಾರರ ಮಟ್ಟದಲ್ಲಿಯೇ ಪರಿಹಾರ ನೀಡಲಾಗುತ್ತಿದೆ. ಎಸ್ ಡಿ ಅರ್ ಎಫ್ ಮಂಗಳೂರಿನಲ್ಲಿ ಸಿದ್ದ ಇದೆ. ನಮ್ಮ ಜೊತೆ ನಿರಂತರ ಸಂಪರ್ಕದಲ್ಲಿ ಇದ್ದಾರೆ ಎಂದು ಮಾಹಿತಿ ನೀಡಿದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12792
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು