News Karnataka Kannada
Tuesday, April 16 2024
Cricket
ಉಡುಪಿ

ಉಡುಪಿ ಶಿರೂರು ಮಠದಲ್ಲಿ ನೂರಾರು ಭಕ್ತರಿಗೆ ಮುದ್ರಾಧಾರಣೆ ಮಾಡಿದ ವೇದವರ್ಧನ ತೀರ್ಥ ಸ್ವಾಮೀಜಿ

Vedavardhana Theertha Swamiji offers mudra to hundreds of devotees at Shirur Mutt in Udupi
Photo Credit : News Kannada

ಉಡುಪಿ: ಮಳೆಗಾಲದ ಆರಂಭದಲ್ಲಿ ನಡೆಯುವ ಅಪರೂಪದ ಧಾರ್ಮಿಕ ಆಚರಣೆಗಳಲ್ಲಿ ಒಂದಾದ ತಪ್ತಮುದ್ರಾಧಾರಣೆ ಉಡುಪಿ‌ ಶಿರೂರು ಮಠದಲ್ಲಿ ಅತ್ಯಂತ ವೈಭವದಿಂದ ನಡೆಯಿತು.

ಶಿರೂರು ಮಠಾಧೀಶರಾರದ ಶ್ರೀ ವೇದವರ್ಧನ ತೀರ್ಥ ಸ್ವಾಮೀಜಿ ನೂರಾರು ಭಕ್ತರಿಗೆ ಮುದ್ರಾಧಾರಣೆ ಮಾಡಿದರು. ಸುದರ್ಶನ ಹೋಮ ನಡೆಸಿ ಶಂಖ, ಚಕ್ರದ ಮುದ್ರೆಯನ್ನು ಭಕ್ತರಿಗಿರಿಸುವ ಸಂಪ್ರದಾಯವೇ ಮುದ್ರಾಧಾರಣೆ.

ಮಳೆಗಾಲದಲ್ಲಿ ಬರಬಹುದಾದ ರೋಗರುಜಿನಗಳಿಂದ ರಕ್ಷಣೆ ಪಡೆಯುವ ಸಲುವಾಗಿ ಈ ಮುದ್ರಾಧಾರಣೆ ಮಾಡಲಾಗುತ್ತದೆ ಎಂಬ ನಂಬಿಕೆ ಇದೆ. ಪುರುಷರಿಗೆ ತೋಳು ಮತ್ತು ಎದೆ , ಮಹಿಳೆಯರಿಗೆ ಎಡ ಬಲ ತೋಳುಗಳಿಗೆ ಮುದ್ರಾಧಾರಣೆ ಮಾಡಲಾಯಿತು.

ಮುದ್ರಾಧಾರಣೆಯ  ಮೂಲಕ ತಾವು ವೈಷ್ಣವ ತತ್ವದ ಅನುಯಾಯಿಗಳು ಎಂದು ಹೇಳುವ ಪದ್ಧತಿ ಇದಾಗಿದೆ.  ಯತಿಗಳಿಗೆ ಮಾತ್ರ ಮುದ್ರಾ ಧಾರಣೆ ಮಾಡುವ ಹಕ್ಕು ಇದ್ದು, ಚಾತುರ್ಮಾಸ್ಯದ ಮೊದಲ ದಿನ ಸರ್ವೈಕಾದಶಿಯಂದೇ ಮುದ್ರಾದಾರಣೆ ನಡೆಸಲಾಗುತ್ತದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12792
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು