Categories: ಉಡುಪಿ

ಉಡುಪಿ: ಶ್ರೀಕೃಷ್ಣಮಠದಲ್ಲಿ ವೈಭವದ ರಥೋತ್ಸವ

ಉಡುಪಿ: ಶ್ರೀ ಕೃಷ್ಣಮಠದಲ್ಲಿ ತೆಪ್ಪೋತ್ಸವದ ಅಂಗವಾಗಿ ಮಂಗಳವಾರ ರಾತ್ರಿ ವೈಭವದ ರಥೋತ್ಸವ ಜರಗಿತು. ನೂರಾರು ಸಂಖ್ಯೆಯಲ್ಲಿ ಆಗಮಿಸಿದ್ದ ಭಕ್ತರು ರಥೋತ್ಸವದ ವೈಭವವನ್ನು ಕಣ್ತುಂಬಿಕೊಂಡರು.

ಮಹಾಪೂಜೆಯ ಬಳಿಕ ರಥಬೀದಿಯಲ್ಲಿ‌ ಎರಡು ರಥಗಳನ್ನು ಎಳೆಯಲಾಯಿತು. ವಾದ್ಯ, ಬ್ಯಾಂಡ್, ಸುಡು ಮದ್ದುಗಳ‌ ಸದ್ದಿನೊಂದಿಗೆ ರಥೋತ್ಸವವೂ ವೈಭವದಿಂದ ನೆರವೇರಿತು.

ಜ.14ರಂದು ಮಕರಸಂಕ್ರಾಂತಿ ಅಂಗವಾಗಿ ಸಂಜೆ ಶ್ರೀಕೃಷ್ಣ, ಮುಖ್ಯ ಪ್ರಾಣ ದೇವರಿಗೆ ಮಧ್ವ ಸರೋವರದಲ್ಲಿ ವೈಭವದ ತೆಪ್ಪೋತ್ಸವ ನಡೆಯಲಿದೆ. ಬಳಿಕ ರಥಬೀದಿಯಲ್ಲಿ ಬ್ರಹ್ಮರಥದಲ್ಲಿ ಕೃಷ್ಣನ ಉತ್ಸವ ಮೂರ್ತಿ ಪ್ರತಿಷ್ಠಾಪಿಸಲಾಗುತ್ತದೆ. ಸಣ್ಣರಥದಲ್ಲಿ ಮುಖ್ಯಪ್ರಾಣ ದೇವರು, ಗರುಡರಥದಲ್ಲಿ ಅನಂತೇಶ್ವರ ಮತ್ತು ಚಂದ್ರೇಶ್ವರ ದೇವರ ಮೂರ್ತಿಗಳನ್ನಿಟ್ಟು ಅಷ್ಟಮಠಾಧೀಶರ ಸಹಿತ ಭಕ್ತರು ತೇರನ್ನು ಎಳೆಯಲಿದ್ದಾರೆ.

ಜ.15ರಂದು ಹಗಲು ರಥೋತ್ಸವ ನಡೆಯಲಿದ್ದು, ಬೆಳಗ್ಗೆ ಮಹಾ ಪೂಜೆ ಬಳಿಕ ಶ್ರೀಕೃಷ್ಣ ಹಾಗೂ ಮುಖ್ಯಪ್ರಾಣ ದೇವರನ್ನು ಬ್ರಹ್ಮರಥದಲ್ಲಿರಿಸಿ ಪರ್ಯಾಯ ಶ್ರೀಪಾದರ ಸಹಿತ ಅಷ್ಟಮಠದ ಯತಿಗಳು ಮಂಗಳಾರತಿ ಬೆಳಗಲಿದ್ದಾರೆ.

Gayathri SG

Recent Posts

ವಿಶ್ವದಲ್ಲೇ ಮೊದಲ ಬಾರಿಗೆ ಹಂದಿ ಕಿಡ್ನಿ ಕಸಿ ಮಾಡಿಸಿಕೊಂಡಿದ್ದ ವ್ಯಕ್ತಿ ಸಾವು

ವಿಶ್ವದಲ್ಲೇ ಮೊದಲ ಬಾರಿಗೆ ಹಂದಿ ಕಿಡ್ನಿ ಕಸಿ ಮಾಡಿಸಿಕೊಂಡಿದ್ದ 62 ವರ್ಷದ ರಿಚರ್ಡ್​ ಸ್ಲಾಯ್​​ಮನ್ ನಿಧನರಾಗಿದ್ದಾರೆ. ಕಳೆದ ಮಾರ್ಚ್​​ನಲ್ಲಿ ಅವರು…

3 mins ago

ಎಸ್‌ಐಟಿಯವರು ಅಪರಾಧಿಗಳನ್ನ ಬಂಧಿಸುತ್ತಿಲ್ಲ: ಬಸವರಾಜ ಬೊಮ್ಮಾಯಿ

ಪ್ರಜ್ವಲ್ ಪ್ರಕರಣದ ತನಿಖೆ ನಡೆಯುತ್ತಿರುವ ರೀತಿ ಸರಿ ಇಲ್ಲ. ಎಸ್‌ಐಟಿಯ ತನಿಖೆಯ ದಿಕ್ಕು ತಪ್ಪುತ್ತಿದೆ. ಅಪರಾಧಿಗಳನ್ನ ಎಸ್‌ಐಟಿಯವರು ಬಂಧಿಸುತ್ತಿಲ್ಲ. ಎಂದು…

20 mins ago

ಅಮ್ಮನ ಮೇಲಿನ ಪ್ರೀತಿಗಾಗಿ ಹೆಸರು ಬದಲಿಸಿಕೊಂಡ ವಿಜಯ್ ಸೂರ್ಯ

ತಾಯಿ ಎಂದರೆ ಮಮತೆಯ ಆಗರ, ತಾಯಿ ಎಂದರೆ ಕರುಣೆಯ ಕಡಲು, ತಾಯಿ ಎಂದರೆ ಪ್ರೀತಿಯ ಸೆಲೆ... ಹೀಗೆ ತಾಯಿಯ ಬಗ್ಗೆ…

25 mins ago

ಮಲ್ಲಿಕಾರ್ಜುನ ಖರ್ಗೆ ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್‌ ಪರಿಶೀಲಿಸಿದ ಚುನಾವಣಾ ಅಧಿಕಾರಿಗಳು

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರು ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್‌ನ್ನು ಚುನಾವಣಾ ಅಧಿಕಾರಿಗಳು ತಪಾಸಣೆ ನಡೆಸಿದ ಘಟನೆ ಬಿಹಾರದ ಸಮಸ್ತಿಪುರದಲ್ಲಿ ನಡೆದಿದೆ.

50 mins ago

ಮಕ್ಕಳಿಗೆ ಆಸ್ತಿ ಮಾಡುವುದಕ್ಕಿಂತ ಸಂಸ್ಕಾರ ಕಲಿಸಿ : ರವಿ ಶಾಸ್ತ್ರಿ

ಮಕ್ಕಳಿಗೆ ಆಸ್ತಿ ಮಾಡಿ ಇರಿಸುವುದರ ಬದಲು ಮಕ್ಕಳನ್ನು ವಿದ್ಯಾವಂತರನ್ನಾಗಿ ಸಂಸ್ಕಾರವಂತರನ್ನಾಗಿ ಮಾಡಿದರೆ ಅದುವೇ ದೊಡ್ಡ ಆಸ್ತಿ ಎಂದು ಶ್ರೀ ಕೃಷ್ಣ…

1 hour ago

ರೊನಿ ಅರುಣ್ ಬರೆದ ಲೇಖನಗಳ ಸಂಗ್ರಹ ʻರಿಕ್ಷಾ ಡೈರಿʼ ಲೋಕಾರ್ಪಣೆ

ಮಾಂಡ್ ಸೊಭಾಣ್ ಪ್ರಕಾಶನದ 22 ನೇ ಪುಸ್ತಕ ರೊನಿ ಅರುಣ್ ಬರೆದ ಲೇಖನಗಳ ಸಂಗ್ರಹ ʻರಿಕ್ಷಾ ಡೈರಿʼ ಉಲ್ಲಾಳ ಸೋಮೇಶ್ವರದಲ್ಲಿರುವ…

1 hour ago