Categories: ಉಡುಪಿ

ಉಡುಪಿ: ಏ.15- 16ರಂದು ‘ಇನ್ನರ್‌ಸೆನ್ಸ್’ ಕಲಾ ಪ್ರದರ್ಶನ

ಉಡುಪಿ: ವಿಶ್ವದ ಖ್ಯಾತ ಕಲಾವಿದ ಲಿಯನಾರ್ಡೋ ಡ ವಿಂಚಿ ಅವರ ಸ್ಮರಣಾರ್ಥ ಎಪ್ರಿಲ್ 15ರಂದು ನಡೆಯುವ ವಿಶ್ವಕಲಾ ದಿನಾಚರಣೆಯ ಪ್ರಯುಕ್ತ ಮಣಿಪಾಲದ ತ್ರಿವರ್ಣ ಆರ್ಟ್ ಗ್ಯಾಲರಿಯ ವತಿಯಿಂದ ಏಪ್ರಿಲ್15 ಮತ್ತು 16ರಂದು ಆರ್ಟ್ ಸ್ಕೂಲ್‌ನ ಐವರು ಕಲಾ ವಿದ್ಯಾರ್ಥಿಗಳಿಂದ ‘ಇನ್ನ‌ರ್ ಸೆನ್ಸ್‌’ ಎಂಬ ಪ್ರತಿಷ್ಠಾಪನಾ ಕಲಾ ಪ್ರದರ್ಶನ ನಡೆಯಲಿದೆ ಎಂದು ತ್ರಿವರ್ಣ ಕಲಾ ಶಾಲೆಯ ಹರೀಶ್ ಸಾಗ ತಿಳಿಸಿದರು.

ಉಡುಪಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಕಲೆ ಹಾಗೂ ಬದುಕಿನ ವಿವಿಧ ಆಯಾಮದಲ್ಲಿ ಕಲೆಯ ಅನುಬಂಧತೆಯನ್ನು ಈ ಪ್ರತಿಷ್ಠಾಪನಾ ಕಲೆ ಸಾರುತ್ತದೆ ಎಂದರು.

ಮಣಿಪಾಲ ತ್ರಿವರ್ಣ ಕಲಾಕೇಂದ್ರದ ಕಲಾ ವಿದ್ಯಾರ್ಥಿಗಳಾದ ಅನಿರುದ್ಧ ಎ.ನಾಯ್ಕ, ಅನೂಷ ಆಚಾರ್ಯ, ಪ್ರಸಾದ್ ಆ‌ರ್., ಉಜ್ವಲ್ ನಿಟ್ಟೆ, ಯಶ್ಮಿತಾ ಗಣೇಶ್ ಅವರು ಕಾಗದ, ರಟ್ಟು, ಅಂಟು, ಮಣ್ಣು, ಮರಳು, ಹಗ್ಗ, ಬುಟ್ಟಿ, ರಂಗೋಲಿ ಪುಡಿ ಇತ್ಯಾದಿ ವಸ್ತುಗಳನ್ನು ಬಳಸಿ ನೆರಳು ಬೆಳಕಿನ ಸಂಯೋಜನೆಯಡಿಯಲ್ಲಿ ಇದನ್ನು ನಿರೂಪಿಸಿದ್ದಾರೆ ಎಂದು ತಿಳಿಸಿದರು.

Chaitra Kulal

Recent Posts

ವಿಧಾನಸೌಧ ಪ್ರವೇಶಕ್ಕೆ ಇನ್ನು ಮುಂದೆ ಕ್ಯೂಆರ್ ಕೋಡ್ ಪಾಸ್‌: ಪರಮೇಶ್ವರ್‌

ಇನ್ನು ಮುಂದೆ ವಿಧಾನಸೌಧ ಪ್ರವೇಶಕ್ಕೆ ಬೇಕಾಬಿಟ್ಟಿ ಪಾಸ್‌ಗಳನ್ನು ವಿತರಿಸುವುದಿಲ್ಲ ಎಂದು ಗೃಹ ಸಚಿವ ಪರಮೇಶ್ವರ್‌ ಹೇಳಿದ್ದಾರೆ.

8 mins ago

ಮೀನಾ ಹತ್ಯೆ ಪ್ರಕರಣ: ವಿಶೇಷ ನ್ಯಾಯಾಲಯ ತೆರೆಯಲು ಕ್ರಮ

ಬಾಲಕಿಯನ್ನು ಹತ್ಯೆ ಮಾಡಿರುವ ಕೃತ್ಯ ಸಹಿಸಲಾಗುವುದಿಲ್ಲ. ಬಾಲಕಿಯ ಕುಟುಂಬಕ್ಕೆ ನ್ಯಾಯ  ಒದಗಿಸುವ ನಿಟ್ಟಿನಲ್ಲಿ  ಕ್ರಮ ಕೈಗೊಳ್ಳಲಾಗುವುದು ಎಂದು ಗೃಹ ಸಚಿವ ಡಾ.…

21 mins ago

ಕೇಸೋರಾಮ್ ಇಂಡಸ್ಟ್ರೀಸ್ ಮುಖ್ಯಸ್ಥೆ ಮಂಜುಶ್ರೀ ಖೇತಾನ್ ವಿಧಿವಶ

ಬಿಕೆ ಬಿರ್ಲಾ ಒಡೆತನದ ಕೇಸೋರಾಮ್ ಇಂಡಸ್ಟ್ರೀಸ್ ಸಂಸ್ಥೆಯ ಛೇರ್ಮನ್ ಆಗಿದ್ದ ಮಂಜುಶ್ರೀ ಖೇತಾನ್ ನಿಧನರಾಗಿದ್ದಾರೆ.

23 mins ago

ಡಿವೈಡರ್‌ಗೆ ಡಿಕ್ಕಿ ಹೊಡೆದು ಬೈಕ್‌ ಸವಾರ ಮೃತ್ಯು

ಭೀಕರ ಅಪಘಾತದಲ್ಲಿ ಬೈಕ್ ಸವಾರನೊಬ್ಬ ಸಾವನ್ನಪ್ಪಿದ ಘಟನೆ ಬೆಂಗಳೂರಲ್ಲಿ ನಡೆದಿದೆ.

31 mins ago

ಎಸ್‌ಎಸ್‌ಎಲ್‌ಸಿ ಗ್ರೇಸ್ ಮಾರ್ಕ್ಸ್‌ ಹಿಂಪಡೆಯಲು ರಾಜ್ಯ ಸರ್ಕಾರ ನಿರ್ಧಾರ

ಈ ಬಾರಿಯ ಎಸ್‌ ಎಸ್‌ ಎಲ್‌ ಸಿ ಪರೀಕ್ಷೆಯಲ್ಲಿ ಶೇಕಡಾ 20ರಷ್ಟು ಗ್ರೇಸ್‌ ಮಾರ್ಕ್ಸ್ ಕೊಟ್ಟು ವಿದ್ಯಾರ್ಥಿಗಳನ್ನ ಪಾಸ್ ಮಾಡಿದ್ದು…

34 mins ago

ಅಡುಗೆ ಮಾಡುತಿದ್ದ ವೇಳೆ ಗ್ಯಾಸ್‌ ಸಿಲಿಂಡರ್ ಸ್ಫೋಟ: ಮನೆಯ ವಸ್ತುಗಳು ಬೆಂಕಿಗಾಹುತಿ

ಉತ್ತರ ಕನ್ನಡ ಜಿಲ್ಲೆಯ ಕಾರವಾರ ತಾಲೂಕಿನ ನಂದನಗದ್ದಾದಲ್ಲಿ ಮನೆಯಲ್ಲಿ ಅಡುಗೆ ಮಾಡುತಿದ್ದ ವೇಳೆ ಗ್ಯಾಸ್‌ ಸಿಲಿಂಡರ್ ಸ್ಫೋಟಗೊಂಡ ಘಟನೆ ನಡೆದಿದೆ.

42 mins ago