Categories: ಉಡುಪಿ

ಉಡುಪಿ: ಕುಡಿಯುವ ನೀರಿನ ಸಮಸ್ಯೆ ಉಲ್ಬಣ, ಟ್ಯಾಂಕರ್ ನೀರು ಪೂರೈಸುವಂತೆ ಆಗ್ರಹ

ಉಡುಪಿ: ನಗರಸಭೆ ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ಸಮಸ್ಯೆ ಉಲ್ಬಣಗೊಂಡಿದ್ದು, ಬಹುತೇಕ ವಾರ್ಡ್ ಗಳಲ್ಲಿ ಕುಡಿಯುವ ನೀರಿನ ಅಭಾವ ಉಂಟಾಗಿದೆ.

ಬಜೆ ಡ್ಯಾಂನಲ್ಲಿ ನೀರಿನ ಮಟ್ಟ ತಗ್ಗಿದ್ದು, ಸದ್ಯ ಇರುವ ನೀರನ್ನು ನೋಡಿಕೊಂಡು ವಾರ್ಡ್ ಗಳಿಗೆ ನೀರು ಪೂರೈಕೆ ಮಾಡಲಾಗುತ್ತಿದೆ. ಆದರೆ, ನಗರದ ಎಲ್ಲ ಭಾಗಗಳಿಗೆ ಸಮರ್ಪಕವಾಗಿ ನೀರು ಪೂರೈಕೆಯಾಗುತ್ತಿಲ್ಲ.ಬನ್ನಂಜೆ, ಮಣಿಪಾಲ, ಪರ್ಕಳ, ಹೆರ್ಗ, ಇಂದ್ರಾಳಿ, ಶಿರಿಬೀಡು, ಒಳಕಾಡು, ದೊಡ್ಡಣಗುಡ್ಡೆ ಭಾಗದ ಕೆಲವು ಭಾಗದಲ್ಲಿ ಮನೆಗಳಿಗೆ ಸರಿಯಾಗಿ ನೀರು ಲಭ್ಯವಾಗುತ್ತಿಲ್ಲ ಎಂಬ ದೂರುಗಳು ಕೇಳಿಬಂದಿದೆ.

ಸದ್ಯಕ್ಕೆ ಎರಡು ದಿನಗಳ ಕಾಲ ಬಜೆ ಡ್ಯಾಂನಲ್ಲಿ ನಿರ್ವಹಣೆ ಕೆಲಸ ಇರುವುದರಿಂದ ತಾಂತ್ರಿಕ ಸಮಸ್ಯೆಗಳನ್ನು ಸರಿಪಡಿಸಲಾಗುತ್ತಿದೆ. ಈ ನಿಟ್ಟಿನಲ್ಲಿ ಎರಡು ದಿನ ನೀರಿನ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮನೆಗಳು ಸೇರಿದಂತೆ ಕೆಲವು ಅಪಾರ್ಟ್ ಮೆಂಟ್ ಗಳಿಗೆ ನೀರಿನ ಸಮಸ್ಯೆ ತೀವ್ರಗೊಂಡಿದ್ದು, ಖಾಸಗಿ ಟ್ಯಾಂಕರ್ ನೀರನ್ನೇ ಹೆಚ್ಚಾಗಿ ನಂಬುವಂತಹ ಪರಿಸ್ಥಿತಿ ಬಂದಿದೆ. ಅಲ್ಲದೇ ಹೊಟೇಲ್, ಕ್ಯಾಂಟೀನ್, ಲಾಡ್ಜ್ ,ಕೈಗಾರಿಕೆ ಘಟಕ, ಮೀನುಗಾರಿಕೆ ವಲಯ ಎಲ್ಲೆಡೆ ನೀರಿನ ಕೊರತೆ ಎದುರಾಗಿದ್ದು, ಮೇ ಅಂತ್ಯದ ಒಳಗೆ ಮುಂಗಾರು ಪೂರ್ವ ಮಳೆಯಾಗದಿದ್ದರೆ, ಕುಡಿಯುವ ನೀರಿಗೆ ಪರದಾಡುವ ಸ್ಥಿತಿ ನಿರ್ಮಾಣವಾಗಲಿದೆ.

Ashika S

Recent Posts

ಹೆಚ್.ಡಿ ರೇವಣ್ಣ ನಿವಾಸದಲ್ಲಿ ಸಂತ್ರಸ್ತೆಯ ಸಮ್ಮುಖದಲ್ಲಿ ಮಹಜರು ನಡೆಸಿದ ಎಸ್‍ಐಟಿ

ಮಾಜಿ ಸಚಿವ ಹೆಚ್.ಡಿ ರೇವಣ್ಣ ವಿರುದ್ಧ ದಾಖಲಾಗಿರುವ  ಪ್ರಕರಣದ ತನಿಖೆ ಆರಂಭಿಸಿರುವ ಎಸ್‍ಐಟಿ ಅಧಿಕಾರಿಗಳು, ಹೊಳೆನರಸೀಪುರದ ಅವರ ನಿವಾಸದಲ್ಲಿ ಸಂತ್ರಸ್ತೆಯ…

3 mins ago

ಬಿರುಗಾಳಿ ಸಹಿತ ಭಾರಿ ಮಳೆ: ನೆಲ ಕಚ್ಚಿದ ಬಾಳೆ ಮತ್ತು ಹೀರೇ ಬೆಳೆ

ಬಿರುಗಾಳಿ ಸಹಿತ ಸುರಿದ ಭಾರಿ ಮಳೆಗೆ ಬಾಳೆ ಬೆಳೆ ಮತ್ತು ಹೀರೇ ಬೆಳೆ ನೆಲ ಕಚ್ಚಿರುವ ಘಟನೆ ನಂಜನಗೂಡು ತಾಲ್ಲೂಕಿನ…

10 mins ago

ದಕ್ಷಿಣ ಭಾರತದ ಕರಾಟೆ ಚಾಂಪಿಯನ್ ಶಿಪ್ ನಲ್ಲಿ ಅಮೀನಾ ಖಾನ್ ರಾಜ್ಯಕ್ಕೆ ದ್ವಿತೀಯ

ದಕ್ಷಿಣ ಭಾರತದ ಕರಾಟೆ ಚಾಂಪಿಯನ್ ಶಿಪ್ ನಲ್ಲಿ ನಂಜನಗೂಡಿನ 8 ವರ್ಷದ ಬಾಲಕಿ ರಾಜ್ಯಕ್ಕೆ ದ್ವಿತೀಯ ಸ್ಥಾನವನ್ನು ಪಡೆದು ಕೀರ್ತಿ…

23 mins ago

ಬಿಜೆಪಿ ಅವಧಿಯಲ್ಲಿ ಭಾರತ ಬದಲಾಗಿದೆ: ಪ್ರಧಾನಿ ಮೋದಿ

ನಮ್ಮ ರಾಷ್ಟ್ರವನ್ನು ರಕ್ಷಿಸಲು ಹೋದ ಜಾರ್ಖಂಡ್ ಮತ್ತು ಬಿಹಾರದ ಜನರು ಗಡಿಯಲ್ಲಿ ದೇಶಕ್ಕಾಗಿ ಸಾಯುತ್ತಿದ್ದ ಸಮಯವಿತ್ತು. ಬಿಜೆಪಿ ಅವಧಿಯಲ್ಲಿ ಭಾರತ…

25 mins ago

ಕೆಎಂಸಿ ಆಸ್ಪತ್ರೆ ಅತ್ತಾವರದಲ್ಲಿ “ನೋವು ಮುಕ್ತ ಮಂಗಳೂರು” ಅಭಿಯಾನ

ಕೆ.ಎಂ.ಸಿ. ಆಸ್ಪತ್ರೆ ಅತ್ತಾವರದ ರುಮಟಾಲಜಿ (ಸಂಧಿವಾತ) ವಿಭಾಗ ಹಾಗೂ ಫಿಸಿಕಲ್ ಮೆಡಿಸಿನ್ ಮತ್ತು ರಿಹ್ಯಾಬಿಲಿಟೇಶನ್ (ದೈಹಿಕ ಔಷಧ ಮತ್ತು ಪುನರ್ವಸತಿ)…

41 mins ago

ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಾಂಬ್‌ ಸ್ಪೋಟ ಬೆದರಿಕೆ : ಪೊಲೀಸ್‌ ಭದ್ರತೆ

ನಗರದ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಸ್ಪೋಟಿಸುವುದಾಗಿ ಬೆದರಿಕೆಯನ್ನು ಇಮೇಲ್‌ ಮೂಲಕ ಬಂದಿರುವುದಾಗಿ ವರದಿಯಾಗಿದೆ. ಬೆದರಿಕೆ ಹಿನ್ನಲೆಯಲ್ಲಿ ಪೊಲೀಸರು ವಿಮಾನ ನಿಲ್ದಾಣದಲ್ಲಿ…

55 mins ago