Categories: ಉಡುಪಿ

ಉಡುಪಿ: ರಾಜಕೀಯ ಲಾಭಕ್ಕಾಗಿ ಬಿಲ್ಲವ ಸಮುದಾಯವನ್ನು ಬಲಿಕೊಡಬೇಡಿ- ಪ್ರಣವಾನಂದ ಶ್ರೀ ಎಚ್ಚರಿಕೆ

ಉಡುಪಿ: ಬ್ರಹ್ಮಶ್ರೀ ನಾರಾಯಣ ಗುರು ನಿಗಮ ಸ್ಥಾಪನೆ ಮಾಡುವ ಕುರಿತು ಆದೇಶ ಪ್ರತಿ ಹೊರಡಿಸಿ. ಸಮುದಾಯಕ್ಕೆ ಮೋಸ ಮಾಡುವ ಕೆಲಸ ಮಾಡಬೇಡಿ. ತಮ್ಮ ರಾಜಕೀಯ ಲಾಭಕ್ಕಾಗಿ ಬಿಲ್ಲವ ಸಮುದಾಯವನ್ನು ಬಲಿ ಕೊಡಬೇಡಿ ಎಂದು ಬ್ರಹ್ಮಶ್ರೀ ನಾರಾಯಣ ಗುರು ಶಕ್ತಿ ಪೀಠದ ಪೀಠಾಪತಿ ಡಾ. ಪ್ರಣವಾನಂದ ಸ್ವಾಮೀಜಿ ಎಚ್ಚರಿಕೆ ನೀಡಿದರು.

ಬಿಲ್ಲವ ಸಮುದಾಯದ ವಿವಿಧ ಬೇಡಿಕೆಗಳನ್ನು ಮುಂದಿಟ್ಟುಕೊಂಡು ನಡೆಯುತ್ತಿರುವ ಪಾದಯಾತ್ರೆ ಸೋಮವಾರ ಉಡುಪಿಗೆ ಆಗಮಿಸಿದೆ. ಬನ್ನಂಜೆ ನಾರಾಯಣಗುರು ಮಂದಿರ ಆವರಣದಲ್ಲಿ ನಡೆದ ಸಭೆಯಲ್ಲಿ ಅವರು ರಾಜ್ಯ ಬಿಜೆಪಿ‌ ಸರಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

ಚುನಾವಣೆಗಾಗಿ ಸುಳ್ಳು ಹೇಳಿ ಯುವಕರ ಹಾದಿ ತಪ್ಪಿಸಬೇಡಿ. ನಮ್ಮ ಸಮುದಾಯದವರೇ ಈ ಕೆಲಸಕ್ಕೆ ಮುಂದಾದರೂ ಸುಮ್ಮನೆ ಬಿಡಲ್ಲ. ನಾರಾಯಣ ಗುರು ಕೋಶ ಮಾಡಿ ಮೋಸ ಆಗಿದೆ. ನಿಮ್ಮನ್ನು ಎಷ್ಟು ಸಹಿಸಬೇಕು. ರಾಜ್ಯದ ಬಿಲ್ಲವರು ಜಾಗೃತರಾಗಿದ್ದಾರೆ. ಬ್ರಹ್ಮಶ್ರೀ ನಾರಾಯಣ ಗುರು ನಿಗಮದ ಸ್ಥಾಪನೆಯ ಆದೇಶ ಪ್ರತಿ ಕೊಡಿ, ಅಭಿನಂದನೆ ಸಲ್ಲಿಸುತ್ತೇವೆ ಎಂದರು.

70 ಲಕ್ಷದಷ್ಟು ಜನಸಂಖ್ಯೆ ಹೊಂದಿರುವ ಬಿಲ್ಲವ ಸಮುದಾಯಕ್ಕೆ ಅನ್ಯಾಯ ಆಗಿದೆ. ಸಮುದಾಯದ ಬೇಡಿಕೆಗೆ ಬೀದಿಗಿಳಿದು ಹೋರಾಟ ಮಾಡುವ ಸ್ಥಿತಿ ನಿರ್ಮಾಣವಾಗಿದೆ. ರಾಜ್ಯದ 7 ಮಂದಿ ಬಿಲ್ಲವ ಶಾಸಕರು ಕುಲಬಾಂಧವರಿಂದ ಮತ ಪಡೆದು ಏನು ಮಾಡಿದ್ದೀರಿ? ನಿಮ್ಮ ಕೆಲಸ, ಜವಾಬ್ದಾರಿಯ ಅರಿವು ಉಂಟೇ? 2023 ರ ಚುನಾವಣೆಯಲ್ಲಿ ಬಿಲ್ಲವರ ಮತ ಬೇಡ ಎಂದು ಬಹಿರಂಗವಾಗಿ ಸ್ವಾಭಿಮಾನದಿಂದ ಹೇಳಿ. ಬಿಲ್ಲವರ ಸಾಮರ್ಥ್ಯ ತೋರಿಸುತ್ತೇವೆ ಎಂದು ಸವಾಲು ಹಾಕಿದರು.
ಸಭೆಯಲ್ಲಿ ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ, ಮುಖಂಡರಾದ ರಾಘವೇಂದ್ರ ಅಮೀನ್, ದಿವಾಕರ ಸನಿಲ್, ರಾಜಶೇಖರ್ ಕೋಟ್ಯಾನ್, ಅಶ್ವಿತ್ ಸುವರ್ಣ, ಮಾಧವ ಬನ್ನಂಜೆ, ವಿಶು ಕುಮಾರ ಪೂಜಾರಿ, ಸಂತೋಷ್ ಬೈರಂಪಳ್ಳಿ, ಸೂರ್ಯೋದಯ ಮೊದಲಾದವರು ಉಪಸ್ಥಿತರಿದ್ದರು.

Gayathri SG

Recent Posts

ಮಕ್ಕಳಲ್ಲಿ ಮಾನವೀಯ ಗುಣಗಳನ್ನು ಬೆಳೆಸುವುದೇ ನಿಜವಾದ ಶಿಕ್ಷಣ : ಕೆಕೆ ಪೇಜಾವರ

ಶಿಕ್ಷಣವು ಯಾವತ್ತಿಗೂ ಮೌಲ್ಯಾಧಾರಿತ ಶಿಕ್ಷಣ ಆಗಿರಬೇಕು.ಇಂದಿನ ಸಮಾಜವು ಮನುಷ್ಯ ಪ್ರೀತಿಯನ್ನು ಮರೆತಿದೆ ಮಾನವೀಯ ಮೌಲ್ಯಗಳ ಕೊರತೆಯು ಆಧುನಿಕ ಸಮಾಜದಲ್ಲಿ ಎದ್ದು…

4 mins ago

ಪಾಕಿಸ್ತಾನ ಬಳೆಗಳನ್ನು ತೊಟ್ಟಿಲ್ಲ ಅಂದ್ರೆ ನಾವು ಅವರಿಗೆ ಬಳೆ ತೊಡಿಸುತ್ತೇವೆ: ಪ್ರಧಾನಿ

ಫಾರೂಕ್ ಅಬ್ದುಲ್ಲಾ ಮತ್ತು ಮಣಿಶಂಕರ್ ಅಯ್ಯರ್ ಹೇಳಿಕೆ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ವಾಗ್ದಾಳಿ ನಡೆಸಿದ್ದಾರೆ. 

13 mins ago

ಜಮೀನು ವಿವಾದ ತಾರಕಕ್ಕೇರಿ ಕೊಲೆಯಲ್ಲಿ ಅಂತ್ಯ

ಜಮೀನು ವಿವಾದ ತಾರಕಕ್ಕೇರಿ ವ್ಯಕ್ತಿಯೊಬ್ಬನ ಬರ್ಬರ ಕೊಲೆಯಾಗಿರುವ ಘಟನೆ  ಶಿವಮೊಗ್ಗ ತಾಲೂಕಿನ ದುಮ್ಮಳ್ಳಿ ಗ್ರಾಮದಲ್ಲಿ ನಡೆದಿದೆ.

15 mins ago

ವಿಮಾನ ನಿಲ್ದಾಣದಲ್ಲಿ 13.56 ಕೋಟಿ ಮೌಲ್ಯದ ಚಿನ್ನ ಜಪ್ತಿ : 11 ಪ್ರಯಾಣಿಕರ ಬಂಧನ

ಮುಂಬೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಿವಿಧ ಪ್ರಯಾಣಿಕರು ಅಕ್ರಮವಾಗಿ ಸಾಗಿಸುತ್ತಿದ್ದ 13.56 ಕೋಟಿ ರೂ. ಮೌಲ್ಯದ 22.14 ಕೆಜಿ ಚಿನ್ನವನ್ನು…

24 mins ago

ಬೈಕ್ ಗೆ ಬಸ್‌ ಡಿಕ್ಕಿ: ಸವಾರ ಸ್ಥಳದಲ್ಲೇ ಮೃತ್ಯು

ರಾಷ್ಟ್ರೀಯ ಹೆದ್ದಾರಿ ಹುಬ್ಬಳ್ಳಿ ಗದಗ ಮಾರ್ಗ ಮಧ್ಯ ಬರುವ ಅಣ್ಣಿಗೇರಿ ಸಮೀಪ ಕೊಂಡಿಕೊಪ್ಪ ಕ್ರಾಸ್‌ ಬಳಿ ಬಸ್‌ ಚಾಲಕ ರಾಂಗ್…

36 mins ago

ನಾಪತ್ತೆಯಾಗಿದ್ದ ಮೂವರು ಮಕ್ಕಳು ಶವವಾಗಿ ಪತ್ತೆ

ಗಚ್ಚಿನಗಕಟ್ಟಿ ಕಾಲೋನಿಯಿಂದ ಭಾನುವಾರ ಮಧ್ಯಾಹ್ನ ನಾಪತ್ತೆಯಾಗಿದ್ದ ಮೂವರು ಮಕ್ಕಳು ಶವವಾಗಿ ಪತ್ತೆಯಾಗಿದ್ದಾರೆ. ನೀರು ಶುದ್ಧೀಕರಣ ಘಟಕದಲ್ಲಿ ಶವವಾಗಿ ಪತ್ತೆಯಾಗಿರುವ ಘಟನೆ…

42 mins ago