News Karnataka Kannada
Sunday, May 19 2024
ಉಡುಪಿ

ಉಡುಪಿ: ಲೊಂಬಾರ್ಡ್ ಸ್ಮಾರಕ (ಮಿಷನ್) ಆಸ್ಪತ್ರೆಯ ಶತಮಾನೋತ್ಸವ ವರ್ಷಾಚರಣೆ

Photo Credit :

ಉಡುಪಿ: ಉಡುಪಿಯ ಲೊಂಬಾರ್ಡ್ ಸ್ಮಾರಕ (ಮಿಷನ್) ಆಸ್ಪತ್ರೆ ತನ್ನ ಶತಮಾನೋತ್ಸವ ವರ್ಷಾಚರಣೆಗೆ 2022ರ ಬುಧವಾರ ಜೂನ್ 15ರಂದು ಚಾಲನೆ ನೀಡಲಿದೆ. ಇಂದು ಬೆಳಗ್ಗೆ ಉಡುಪಿ ಪ್ರೆಸ್ ಕ್ಲಬ್‌ನಲ್ಲಿ ಸುದ್ದಿಗಾರರನ್ನುದ್ದೇಶಿಸಿ ಮಾತನಾಡಿದ ಆಸ್ಪತ್ರೆಯ ನಿರ್ದೇಶಕ ಡಾ.ಸುಶಿಲ್ ಜತನ್ನಾ ಅವರು ಶತಮಾನೋತ್ಸವದ ಉದ್ಘಾಟನಾ ಸಮಾರಂಭ ಮೂರು ಕಾರ್ಯಕ್ರಮಗಳನ್ನು ಒಳಗೊಂಡಿರುತ್ತದೆ, ಬೆಳಿಗ್ಗೆ 9 ಗಂಟೆಗೆ ರಕ್ತದಾನ ಶಿಬಿರ, ನಂತರ 3 ಗಂಟೆಗೆ ಪ್ರಾರ್ಥನಾ ಕೂಟ ಮತ್ತು ಸಂಜೆ 5 ಗಂಟೆಗೆ ನರ್ಸಿಂಗ್ ಕಾಲೇಜಿನ ಹೊಸ ಬ್ಲಾಕ್ ಉದ್ಘಾಟನೆ, ಎಂದು ಹೇಳಿದರು.

ರಕ್ತದಾನ ಶಿಬಿರವನ್ನು ಉಡುಪಿ ಬಡಗಬೆಟ್ಟು ಸಹಕಾರಿ ಸಂಘದ ಮಹಾಪ್ರಬಂಧಕ ಶ್ರೀ ಜಯಕರ ಶೆಟ್ಟಿ ಉದ್ಘಾಟಿಸಲಿದ್ದಾರೆ. ಸಿಎಸ್‌ಐ ಕರ್ನಾಟಕ ದಕ್ಷಿಣ ಧರ್ಮಪ್ರಾಂತ್ಯದ ಉಪಾಧ್ಯಕ್ಷೆ ವಂದನೀಯ ಭಗಿನಿ ಸುಜಾತಾ ಅವರ ನೇತೃತ್ವದಲ್ಲಿ ಮಿಷನ್ ಹಾಸ್ಪಿಟಲ್ ಚಾಪೆಲ್‌ನಲ್ಲಿ ಪ್ರಾರ್ಥನಾ ಕೂಟ ನಡೆಯಲಿದೆ.

ನಿಟ್ಟೆ ಡೀಮ್ಡ್ ವಿಶ್ವವಿದ್ಯಾನಿಲಯದ ಕುಲಪತಿ ವಿನಯ್ ಹೆಗ್ಡೆ ಅವರು ನರ್ಸಿಂಗ್ ಕಾಲೇಜಿನ ನೂತನ ಬ್ಲಾಕ್ ಅನ್ನು ಉಡುಪಿ ಜಿಲ್ಲಾಧಿಕಾರಿ ಕೂರ್ಮ ರಾವ್, ಐಎಎಸ್ ಮತ್ತು ಉಡುಪಿ ಕ್ಯಾಥೋಲಿಕ್ ಧರ್ಮಪ್ರಾಂತ್ಯದ ಬಿಷಪ್ ಡಾ. ಜೆರಾಲ್ಡ್ ಐಸಾಕ್ ಲೋಬೋ ಅವರ ಉಪಸ್ಥಿತಿಯಲ್ಲಿ ಉದ್ಘಾಟಿಸಲಿದ್ದಾರೆ.

ಲೊಂಬಾರ್ಡ್ ಸ್ಮಾರಕ ಆಸ್ಪತ್ರೆಯ ಶತಮಾನೋತ್ಸವವನ್ನು ವರ್ಷವಿಡೀ ಚಟುವಟಿಕೆಗಳೂಂದಿಗೆ ಆಚರಿಸಲಾಗುವುದು ಮತ್ತು ಜೂನ್ 15, 2023 ರಂದು ಆಸ್ಪತ್ರೆಯ ಇತಿಹಾಸದ ಕುರಿತು ಹೊಸ ಪುಸ್ತಕದ ಬಿಡುಗಡೆಯೊಂದಿಗೆ ಸಮಾರೋಪ ಸಮಾರಂಭದಲ್ಲಿ ಮುಕ್ತಾಯಗೊಳ್ಳಲಿದೆ. ಯೋಜಿತ ವಾರ್ಷಿಕ ಕಾರ್ಯಕ್ರಮದಲ್ಲಿ ಶೈಕ್ಷಣಿಕ ಸಮ್ಮೇಳನಗಳು, ಸಾಂಸ್ಕೃತಿಕ ಕಾರ್ಯಕ್ರಮಗಳು, ಉಪಶಾಮಕ ಆರೈಕೆ ಕೇಂದ್ರದ ಉದ್ಘಾಟನೆ ಮತ್ತು ಪ್ಯಾರಾಮೆಡಿಕಲ್ ಕಾಲೇಜಿಗೆ ಹೊಸ ಆವರಣದಂತಹ ಚಟುವಟಿಕೆಗಳು ಒಳಗೊಂಡಿವೆ ಎಂದು ಡಾ. ಜತನ್ನಾ ಹೇಳಿದರು.

ಲೊಂಬಾರ್ಡ್ ಮೆಮೋರಿಯಲ್ (ಮಿಷನ್) ಆಸ್ಪತ್ರೆ
120 ಹಾಸಿಗೆಗಳ ಲೊಂಬಾರ್ಡ್ ಸ್ಮಾರಕ (ಮಿಷನ್) ಆಸ್ಪತ್ರೆಯನ್ನು ಯುವ ಸ್ವಿಸ್ ಮಿಷನರಿ ವೈದ್ಯೆ ಡಾ. ಇವಾ ಲೊಂಬಾರ್ಡ್ ಅವರು ಜೂನ್ 15, 1923 ರಂದು ಸ್ಥಾಪಿಸಿದರು. ಅತ್ಯಂತ ಹಳೆಯ ಆಸ್ಪತ್ರೆಗಳಲ್ಲಿ ಒಂದಾಗಿದೆ ಈ ಸಂಸ್ಥೆ ಬಹುಶಃ ಈ ಪ್ರದೇಶದ ಮೊದಲ ತಾಯಿ ಮತ್ತು ಮಕ್ಕಳ ಕೇಂದ್ರೀಕೃತ ಘಟಕವಾಗಿದೆ. ಆಸ್ಪತ್ರೆಯು ಶುಶ್ರೂಷೆ ಮತ್ತು ಅರೆವೈದ್ಯಕೀಯ ವಿಜ್ಞಾನ ಕೋರ್ಸ್ಗಳನ್ನು ನೀಡುವ ಮತ್ತು ಶಿಶುವಿಹಾರ ಸೇರಿದಂತೆ ಐದು ಶಿಕ್ಷಣ ಸಂಸ್ಥೆಗಳನ್ನು ಸಹ ನಡೆಸುತ್ತಿದೆ. ಇದರ ಸಮುದಾಯ-ಆಧಾರಿತ ಸೇವೆಗಳಲ್ಲ್ಲಿ ಕರುಣಾಲಯ (ವೃದ್ಧರ ಶುಶ್ರೋಷೆ ಕೇಂದ್ರ) ಮತ್ತು ಸಹಜೀವನ ವೃದ್ಧಾಶ್ರಮ ಸೇರಿವೆ.

ಮಿಷನ್ ಆಸ್ಪತ್ರೆಯ ಶತಮಾನೋತ್ಸವ ಕನಸು
ಆಸ್ಪತ್ರೆಯ ನಿರ್ದೇಶಕ ಡಾ.ಸುಶಿಲ್ ಜತನ್ನಾ ಅವರ ಶತಮಾನೋತ್ಸವದ ಶುಭಸಂದರ್ಭದಲ್ಲಿ ಮಿಷನ್ ಆಸ್ಪತ್ರೆ ಮೂರು ಸ್ಪಷ್ಟ ಉದ್ದೇಶಗಳೊಂದಿಗೆ ವಿಸ್ತರಣೆಯ ಹೊಸ ಪಯಣವನ್ನು ಪ್ರಾರಂಭಿಸಲಿದೆ ಎಂದು ಹೇಳಿದ್ದಾರೆ. ಮೊದಲನೆಯದಾಗಿ, ಮಿಷನ್ ಆಸ್ಪತ್ರೆಯನ್ನು ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಾಗಿ ಅಭಿವೃದ್ಧಿಪಡಿಸುವುದು. ಎರಡನೆಯದಾಗಿ, ಮುಂದೆ ಉಡುಪಿಯಲ್ಲಿ ತನ್ನ ಬ್ಯಾನರ್ ಅಡಿಯಲ್ಲಿ ವೈದ್ಯಕೀಯ ಕಾಲೇಜನ್ನು ಸ್ಥಾಪಿಸುವ ಉದ್ದೇಶದಿಂದ ನರ್ಸಿಂಗ್ ಮತ್ತು ಸಂಬಂಧಿತ ವೈದ್ಯಕೀಯ ಶಾಸ್ತ್ರಗಳಲ್ಲಿ ಹೆಚ್ಚಿನ ಕೋರ್ಸ್ಗಳೊಂದಿಗೆ ತನ್ನ ಶೈಕ್ಷಣಿಕ ನೆಲೆಯನ್ನು ವಿಸ್ತರಿಸುವುದು. ಮತ್ತು ಅಂತಿಮವಾಗಿ, ಉಡುಪಿಯ ಗ್ರಾಮೀಣ ಪ್ರದೇಶಗಳಲ್ಲಿ ಉಪಶಾಮಕ ಆರೈಕೆ ಕೇಂದ್ರ, ಹೋಮ್ ಕೇರ್ ಸೇವೆಗಳು ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಚಿಕಿತ್ಸಾಲಯಗಳನ್ನು (ಔಟ್‌ರೀಚ್ ಕ್ಲಿನಿಕ್) ಸ್ಥಾಪಿಸುವಂತಹ ಸಮುದಾಯ ಆಧಾರಿತ ಸೇವೆಗಳನ್ನು ನೀಡುವುದು, ಎಂದು ಹೇಳಿದ್ದಾರೆ.

ಆಡಳಿತಾಧಿಕಾರಿ ಡೀನಾ ಪ್ರಭಾವತಿ, ಲೊಂಬಾರ್ಡ್ ನರ್ಸಿಂಗ್ ಕಾಲೇಜಿನ ಪ್ರಾಂಶುಪಾಲರಾದ ಡಾ.ಸುಜಾ ಕಾರ್ಕಡ, ಹಿರಿಯ ವೈದ್ಯಾಧಿಕಾರಿ ಡಾ.ಗಣೇಶ್ ಕಾಮತ್, ಆಸ್ಪತ್ರೆಯ ಪಿಆರ್‌ಒ ಹಾಗೂ ಸಮುದಾಯ ಸೇವೆಗಳ ಮುಖ್ಯಸ್ಥ ರೋಹಿ ರತ್ನಾಕರ್ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

11671
Media Release

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು