Categories: ಉಡುಪಿ

ಕಾರ್ಕಳ ಅಭಿವೃದ್ಧಿಗೆ ಜವಳಿ ಪಾರ್ಕ್ ಹೊಸ ಕೊಡುಗೆ ನೀಡಿದೆ- ವಿ.ಸುನೀಲ್‌ಕುಮಾರ್

ಕಾರ್ಕಳ: ಡೀಮ್ಡ್ ಫಾರೆಸ್ಟ್ ಸಮಸ್ಯೆ ರಾಜ್ಯ ಸರಕಾರ ನಿವಾರಣೆ ಮಾಡಿರುವುದರಿಂದ ಕಾರ್ಕಳದಲ್ಲಿ ಜವಳಿ ಪಾರ್ಕ್ ನಿರ್ಮಾಣಕ್ಕೆ ಜಾಗ ಒದಗಿಸಲು ಸಾಧ್ಯವಾಗಿದೆ. ಆ ಮೂಲಕ ೩,೦೦೦ ಮಂದಿಗೆ ಉದ್ಯೋಗ ಲಭಿಸುವ ಮೂಲಕ ಕಾರ್ಕಳ ಅಭಿವೃದ್ಧಿಗೆ ಜವಳಿ ಪಾರ್ಕ್ ಹೊಸ ಕೊಡುಗೆ ನೀಡಿದೆ ಎಂದು ಸಚಿವ ವಿ.ಸುನೀಲ್‌ಕುಮಾರ್ ಹೇಳಿದರು.

ನಿಟ್ಟೆ ಮದನಾಡು ಎಂಬಲ್ಲಿ ಜವಳಿ ಪಾರ್ಕ್ ಗೆ ಶಿಲಾನ್ಯಾಸ ನೆರವೇರಿಸಿ ಅವರು ಮಾತನಾಡಿದರು. ಕಾರ್ಕಳದಲ್ಲಿ ಉದ್ಯೋಗ ಮತ್ತು ಉದ್ಯಮ ಸೃಷ್ಠಿಯಲ್ಲಿ ಗೇರು ಬೀಜ ಪ್ಯಾಕ್ಟರಿ ಮಹತ್ವ ಪಾತ್ರ ವಹಿಸಿದೆ. ಗ್ರಾಮೀಣ ಭಾಗದಲ್ಲಿ ೫೦ ಪ್ಯಾಕ್ಟರಿಗಳು ೫೦,೦೦೦ಕ್ಕೂ ಮಿಕ್ಕಿ ಉದ್ಯೋಗ ಸೃಷ್ಟಿಸಿದೆ. ಹೆಬ್ರಿ ಹಾಗೂ ಅಸುಪಾಸಿನಲ್ಲಿ ಅಕ್ಕಿ ಗಿರಾಣಿಗಳು ಹಲವಾರು ಉದ್ಯೋಗವನ್ನು ನೀಡಿದೆ. ಇದರೊಂದಿಗೆ ಬೇರೆ ಬೇರೆ ಉದ್ಯಮಗಳು ಕಾರ್ಕಳಕ್ಕೆ ಬರಬೇಕು. ಸಾಮಾನ್ಯವಾಗಿ ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿ ಮಾಡಿದಂತವರ ಯುವ ಸಮುದಾಯಕ್ಕೂ ಇದರಿಂದ ಉದ್ಯೋಗ ಲಭಿಸುತ್ತದೆ. ಬಸವರಾಜು ಬೊಮ್ಮಾಯಿ ಜಿಲ್ಲಾ ಉಸ್ತುವಾರಿ ಇದ್ದಾಗ ಹಾಗೂ ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ಬಜೆಟಿನಲ್ಲಿ ಜವಳಿ ಪಾರ್ಕ್ ಘೋಷಣೆಯಾಗಿತ್ತು. ೧೫ ಎಕರೆ ಜಾಗ ವೊಂದಿರುವ ಜವಳಿ ಪಾರ್ಕ್ ನಲ್ಲಿ ನೂಲ ತಯಾರಿಕ ಘಟಕದಿಂದ ಹಂತ ಹಂತವಾಗಿ ಸಿದ್ಧ ಉಡುಪುಗಳು ಎಲ್ಲವೂ ಇಲ್ಲಿಯೇ ಉತ್ಪಾದನೆಯಾಗಲಿದೆ. ಇನ್ನಷ್ಟು ಜಾಗದ ಬೇಡಿಕೆ ಅನುಗುಣವಾಗಿ ಸ್ಪಂದಿಸುವುದಾಗಿ ಇದೇ ಭರವಸೆ ನೀಡಿದರು.

ಕೈಮಗ್ಗ ಮತ್ತು ಜವಳಿ ಇಲಾಖೆಯ ನಿರ್ದೇಶಕ ಶಿವ ಶಂಕರ ಮಾತನಾಡಿ, ಇಡೀ ಎರಡು ಕಡೆ ಜವಳಿ ಪಾರ್ಕ್ ಗೆ ಅವಕಾಶ ಸಿಕ್ಕಿದೆ. ಸಿದ್ಧ ಉಡುಪಿಗೆ ಉತ್ತಮ ಭವಿಷ್ಯ ಇದೆ ಎಂದರು.

ಉಡುಪಿ ಜಿಲ್ಲಾಧಿಕಾರಿ ಕುರ್ಮಾರಾವ್ ಮಾತನಾಡಿ, ಸದಾ ಅಭಿವೃದ್ಧಿ ಚಿಂತನೆ ಹೊಸತನವನ್ನು ಹುಟ್ಟು ಹಾಕುತ್ತದೆ. ಥೀಮ್ ಪಾರ್ಕ್ನ ಮೂಲಕ ಸಂಚಲನ ಮೂಡಿಸಿ ಇದೀಗ, ಜವಳಿ ಪಾರ್ಕ್ ನತ್ತ ಸಚಿವರ ಯೋಜನೆ ಯೋಚನೆ ಹರಿಸಿರುವುದು ಶ್ಲಾಘನೀಯವಾಗಿದೆ. ಕೃಷಿ ಕ್ಷೇತ್ರ ನಂತರ ಹೆಚ್ಚು ಉದ್ಯೋಗವನ್ನು ಜವಳಿ ಉದ್ಯಮ ನೀಡುತ್ತಿದೆ ಎಂದರು.

ಉಡುಪಿ ಜಿಲ್ಲಾ ಪಂಚಾಯತ್ ಕಾರ್ಯ ನಿರ್ವಹಣಾಧಿಕಾರಿ ಪ್ರಸನ್ನ ಮಾತನಾಡಿ, ಜವಳಿ ಪಾರ್ಕ್ ನಿರ್ಮಾಣದಿಂದ ಹಲವು ಉದ್ಯಮ ಹಾಗೂ ಉದ್ಯೋಗ ನೇರ, ಪರೋಕ್ಷವಾಗಿ ಸೃಷ್ಠಿಯಾಗಲಿದೆ. ಬೇರೆ ಬೇರೆ ಕೌಶಲ್ಯ ಹೊಂದಿದವರಿಗೆ ಈ ಉದ್ಯಮದಲ್ಲಿ ಬೇಡಿಕೆ ಹೆಚ್ಚಾಗಿ ಕಂಡು ಬರಲಿದೆ. ಉಡುಪಿ ಸೀರೆಗೆ ದೇಶದಲ್ಲಿ ಬಾರೀ ಬೇಡಿಕೆ ಇದ್ದು, ಅದರಲ್ಲಿ ಕೇವಲ ೩೫ ಮಂದಿ ಮಾತ್ರ ಈ ಕ್ಷೇತ್ರದಲ್ಲಿ ದುಡಿಯುತ್ತಿರುವುದು ಗಮನಾರ್ಹವೆಂದರು.

ತಹಶೀಲ್ದಾರ್ ಅನಂತ ಶಂಕರ್, ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ಗುರುದತ್, ನಿಟ್ಟೆ ಗ್ರಾಮ ಪಂಚಾಯತ್ ಅಧ್ಯಕ್ಷ ಸತೀಶ್ ಪೂಜಾರಿ, ಉಪಾಧ್ಯಕ್ಷೆ ಸುಮಿತ್ರಾ ಆಚಾರ್ಯ, ಅಶೋಕ್ ಅಡ್ಯಾಮತಾಯ, ಪ್ರಶಾಂತ್ ಕುಂ ಆರ್, ಸಂತೋಷ್ ಡಿಸಿಲ್ವ ಮೊದಲಾದವರು ಉಪಸ್ಥಿತರಿದ್ದರು.

Gayathri SG

Recent Posts

ಬೈಕಿಗೆ ಡಿಕ್ಕಿ ಹೊಡೆದ ಕಾರು: ಓರ್ವ ಸಾವು

ಕಾರು ​​ ಚಾಲಕನೋರ್ವ ಕುಡಿದು ಅಡ್ಡಾದಿಡ್ಡಿ ಡ್ರೈವಿಂಗ್​ ಮಾಡಿ ಬೈಕ್​ಗೆ ಡಿಕ್ಕಿ ಹೊಡೆದ ಪರಿಣಾಮ ಓರ್ವ ಸಾವನ್ನಪ್ಪಿದ ಘಟನೆ ನಡೆದಿದೆ.

17 mins ago

ಬ್ಯಾಂಕ್ ಗೆ ಜಮೆ ಮಾಡಲು ತಂದಿದ್ದ 1.37 ಲಕ್ಷ ರೂ‌ ಎಗರಿಸಿದ ಖದೀಮ

ಬ್ಯಾಂಕ್‌ ಖಾತೆಗೆ ಜಮಾ ಮಾಡಲು ಎಂದು ತಂದಿದ್ದ ಹಣವು ಕಳ್ಳತನಕ್ಕೆ ಒಳಗಾದ ಘಟನೆ ಬಸವಕಲ್ಯಾಣದಲ್ಲಿ ನಡೆದಿದೆ. ಬೈಕ್ ನ ಪೆಟ್ರೋಲ್…

35 mins ago

ಇರಾನ್‌ ಅಧ್ಯಕ್ಷ ಇಬ್ರಾಹಿಂ ರೈಸಿ ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್ ಅಪಘಾತ

ಇರಾನ್‌ ಅಧ್ಯಕ್ಷ ಇಬ್ರಾಹಿಂ ರೈಸಿ ಅವರು ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್ ಪೂರ್ವ ಅಜೆರ್ಬೈಜಾನ್ ಪ್ರಾಂತ್ಯದಲ್ಲಿ‌ಭಾನುವಾರ ಮುಂಜಾನೆ ಅಪಘಾತಕ್ಕೀಡಾಗಿದೆ.

51 mins ago

ಚಾಕುವಿನಿಂದ ಇರಿದು ಯುವಕನ ಬರ್ಬರ ಹತ್ಯೆ : ಪರಿಚಯಸ್ಥರಿಂದಲೇ ಕೊಲೆ ಶಂಕೆ

ತಡರಾತ್ರಿ ದುಷ್ಕರ್ಮಿಗಳು ಯುವಕನ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಹತ್ಯೆಗೈದಿರುವ ಘಟನೆ ನಗರದ…

1 hour ago

ಬಿಜೆಪಿ ಈಗ ಬೆಳೆದು ನಿಂತಿದೆ ಅದಕ್ಕೆ ಆರ್ ಎಸ್ ಎಸ್ ಬೆಂಬಲ ಬೇಕಾಗಿಲ್ಲ: ಉದ್ಧವ್ ಠಾಕ್ರೆ

ಬಿಜೆಪಿ ಮತ್ತು ಆರೆಸ್ಸೆಸ್ ಸಂಬಂಧದ ಬಗ್ಗೆ ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾ ನೀಡಿದ ಹೇಳಿಕೆಯನ್ನು ಉಲ್ಲೇಖಿಸಿ ಶಿವಸೇನಾ ಯುಬಿಟಿ ಬಣದ…

1 hour ago

ನೇಹಾ, ಅಂಜಲಿ ಕೊಲೆ ಕೇಸ್​​ : ಎಡಿಜಿಪಿ ಆರ್.ಹಿತೇಂದ್ರ ಅಧಿಕಾರಿಗಳಿಗೆ ಕ್ಲಾಸ್​

ನೇಹಾ ಮತ್ತು ಅಂಜಲಿ ಅಂಬಿಗೇರ ಹತ್ಯೆ ಪ್ರಕರಣಗಳು ಬಾರಿ ಸಂಚಲನ ಮೂಡಿಸಿದ್ದವು ಈ ಹಿನ್ನೆಲೆ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ…

1 hour ago