Categories: ಉಡುಪಿ

ಪ್ರಧಾನಿ ಮೋದಿಯವರು ಸಂಸತ್ತಿನಲ್ಲಿ ರಾಜದಂಡವನ್ನು ಇಟ್ಟು ಹೊಸ ಸಂಪ್ರದಾಯಕ್ಕೆ ನಾಂದಿ ಹಾಡಿದ್ದಾರೆ

ಉಡುಪಿ: ಪ್ರಧಾನಿ ನರೇಂದ್ರ ಮೋದಿ ಅವರು ರಾಜದಂಡವನ್ನು ಸಂಸತ್ತಿನಲ್ಲಿ ಇಟ್ಟು ಹೊಸ ಸಂಪ್ರದಾಯಕ್ಕೆ ನಾಂದಿ ಹಾಡಿದ್ದಾರೆ. ಮುಂದಿನ ಬಾರಿ ಪ್ರಧಾನಿ ಅವರು ಪ್ರಮಾಣ ವಚನ ಸ್ವೀಕರಿಸುವ ಮೊದಲು ರಾಜದಂಡವನ್ನು ಸ್ವೀಕರಿಸಿ, ಬಳಿಕ ಪ್ರಮಾಣವಚನ ಸ್ವೀಕರಿಸಬೇಕು. ಇದರಿಂದ ರಾಜದಂಡದ ಗೌರವ ಹೆಚ್ಚುತ್ತದೆ. ಹಿಂದಿನ ಸಂಪ್ರದಾಯಗಳು ಮರುಕಳಿಸುತ್ತವೆ ಎಂದು ಬಿಜೆಪಿ ಮುಖಂಡ ತಿಂಗಳೆ ವಿಕ್ರಮಾರ್ಜುನ ಹೆಗ್ಡೆ ಹೇಳಿದರು.

ಉಡುಪಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಿಂದಿನ ಕಾಲದಲ್ಲಿ ರಾಜರ ಪಟ್ಟಾಭಿಷೇಕ ನಡೆಯುವಾಗ ರಾಜದಂಡ ನೀಡುವ ಸಂಪ್ರದಾಯ ಇತ್ತು. ಈಗ ಕುಟುಂಬ, ಗ್ರಾಮಕ್ಕೆ ಸಂಪ್ರದಾಯ ಸೀಮಿತಗೊಂಡಿದೆ. ಅರ್ಧದಲ್ಲಿ ನಿಂತಿದ್ದ ನಮ್ಮ ಮನೆತನದ ಸಂಪ್ರದಾಯವನ್ನು ದೈವಗಳ ಬೇಡಿಕೆ, ಕುಟುಂಬದ ಒಪ್ಪಿಗೆಯಂತೆ ನಾನು ರಾಜದಂಡ ಸ್ವೀಕರಿಸಿದ್ದೇನೆ. ಹಿಂದೆ ರಾಜರು ನ್ಯಾಯ ತೀರ್ಮಾನ ಮಾಡುವಾಗ, ಪ್ರಮುಖ ನಿರ್ಧಾರಗಳನ್ನು ಕೈಗೊಳ್ಳುವಾಗ ರಾಜದಂಡ ಹಿಡಿಯುತ್ತಿದ್ದರು. ಆದರೆ ಈಗ ಅದು ವಿಜಯದಶಮಿ, ದೈವದ ಬಲಿ ನಡೆಯುವ ಸಂದರ್ಭದಲ್ಲಿ ಮಾತ್ರ ಹಿಡಿಯಲಾಗುತ್ತದೆ ಎಂದರು.

Gayathri SG

Recent Posts

ಬೀದರ್ ಅಭಿವೃದ್ಧಿಗೆ ಕಾಂಗ್ರೆಸ್ ಗೆಲ್ಲಿಸಿ : ಸಾಗರ್ ಖಂಡ್ರೆ ಮನವಿ

'ಬೀದರ್ ಲೋಕಸಭಾ ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗಾಗಿ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ. ಅತ್ಯಂತ ಕಿರಿಯ ವಯಸ್ಸಿನ ಅಭ್ಯರ್ಥಿಯನ್ನು ಸಂಸತ್ತಿಗೆ ಗೆಲ್ಲಿಸಿ…

35 seconds ago

ಪಕ್ಷಿಗಳ ದಾಹ ತಣಿಸುವ ಪರಿಸರ ಪ್ರೇಮಿ ರಿಯಾಜ್‌ ಪಾಶಾ

ಹೆಚ್ಚುತ್ತಿರುವ ಬಿಸಿಲಿನ ತಾಪದಿಂದ ತಾಲ್ಲೂಕಿನ ಗಡಿ ಭಾಗದ ಜನ ಜಾನುವಾರುಗಳ ಜತೆ ಪ್ರಾಣಿ ಪಕ್ಷಿಗಳು ಕುಡಿಯುವ ನೀರಿಗಾಗಿ ಪರದಾಡಬೇಕಿದೆ. ತಾಲ್ಲೂಕಿನ…

19 mins ago

ಚಾಮುಂಡಿಬೆಟ್ಟದ ಪಾದದಲ್ಲಿ ಪ್ರಾಣಿ ಪಕ್ಷಿಗಳಿಗೆ ನೀರಿನ ತೊಟ್ಟಿ ಅಳವಡಿಕೆ

ನಗರದ ಚಾಮುಂಡಿ ಬೆಟ್ಟದ ಪಾದದಲ್ಲಿ ಕೆಎಂಪಿ ಕೆ ಚಾರಿಟೇಬಲ್ ಟ್ರಸ್ಟ್ ಹಾಗೂ ಸೈನಿಕ ಅಕಾಡೆಮಿ  ವತಿಯಿಂದ ಶನಿವಾರ ಪ್ರಾಣಿ ಪಕ್ಷಿಗಳು,…

24 mins ago

ಪ್ರಜ್ವಲ್ ವಿರುದ್ಧ ನಾವು ಕೊಟ್ಟ ಮೊದಲ ದೂರು ದಾಖಲಾಗಿಲ್ಲ: ವಕೀಲ ಆಕ್ರೋಶ

ಹಾಸನ ಲೋಕಸಭಾ ಕ್ಷೇತ್ರದ ಸಂಸದ ಹಾಗೂ ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ರಾಸಲೀಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ…

43 mins ago

ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಕಾಂಗ್ರೆಸ್ ಸರ್ಕಾರ ವಿಫಲವಾಗಿದೆ : ಶೋಭಾ

ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ, ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ರಾಜ್ಯ ಕಾಂಗ್ರೆಸ್ ಸರ್ಕಾರ ವಿಫಲವಾಗಿದೆ ಎಂದು ಕೇಂದ್ರ ಸಚಿವೆ ಕುಮಾರಿ…

58 mins ago

ಕೋವಿಶೀಲ್ಡ್ ಲಸಿಕೆಯ ಬಗ್ಗೆ ಜನರು ಭಯಪಡುವ ಅಗತ್ಯವಿಲ್ಲ: ದಿನೇಶ್ ಗುಂಡೂರಾವ್

ಕೋವಿಶೀಲ್ಡ್ ಲಸಿಕೆಯಿಂದ ಅಡ್ಡಪರಿಣಾಮಗಳು ಉಂಟಾಗುತ್ತಿದೆ ಎಂಬ ಕುರಿತು ಜನರು ಭಯಪಡುವ ಅಗತ್ಯವಿಲ್ಲ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.

1 hour ago