News Karnataka Kannada
Tuesday, April 30 2024
ಉಡುಪಿ

ಮಲ್ಪೆ: ಕಡಲಗರ್ಭದೊಳಗಿಂದ ಹೊರಬಂದ ಟನ್ ಗಟ್ಟಲೆ ತ್ಯಾಜ್ಯ

Malpe: Tons of waste that has come out of the seabed
Photo Credit : News Kannada

ಉಡುಪಿ: ಜುಲೈ ತಿಂಗಳಿನಲ್ಲಿ ಸುರಿದ ಭಾರೀ ಗಾಳಿಮಳೆಗೆ ಪ್ರಕ್ಷುಬ್ಧಗೊಂಡಿದ್ದ ಕಡಲು, ಮಾನವ ಎಸೆದ ಟನ್ ಗಟ್ಟಲೆ ಪ್ಲಾಸ್ಟಿಕ್ ಮತ್ತಿತರ ತ್ಯಾಜ್ಯಗಳನ್ನು ಕಿನಾರೆಯತ್ತ ಹೊರಹಾಕಿದೆ. ಇದರ ಪರಿಣಾಮ ಮಲ್ಪೆ ಬೀಚ್ ನಲ್ಲೀಗ ಎಲ್ಲಿ ಕಣ್ಣು ಹಾಯಿಸಿದರೂ ತ್ಯಾಜ್ಯಗಳ ರಾಶಿಯೇ ಗೋಚರಿಸುತ್ತಿದೆ.

ಕಡಲ ಕಿನಾರೆಯುದ್ದಕ್ಕೂ ಸಾವಿರಾರು ಮದ್ಯದ ಬಾಟಲಿಗಳು, ಪ್ಲಾಸ್ಟಿಕ್ ಬಾಟಲಿಗಳು, ತೆಂಗು, ಅಡಕೆ ಮರದ ತುಂಡುಗಳು, ಚಪ್ಪಲಿಗಳು, ಪ್ಲಾಸ್ಟಿಕ್ ಲೋಟಗಳು, ಒಡೆದ ಗ್ಲಾಸ್ ಚೂರುಗಳು ಸೇರಿದಂತೆ ನೂರಾರು ಟನ್ ತ್ಯಾಜ್ಯಗಳು ಕಡಲಗರ್ಭದೊಳಗೆ ಸೇರಿ ಈಗ ದಡ ಸೇರಿವೆ. ಕಿಲೋಮೀಟರ್ ದೂರದಷ್ಟು ಉದ್ದಗಲಕ್ಕೂ ತ್ಯಾಜ್ಯದ ರಾಶಿಗಳು ಬಂದು ಬಿದ್ದಿವೆ. ಎಲ್ಲಿ ನೋಡಿದರೂ ತ್ಯಾಜ್ಯ ತ್ಯಾಜ್ಯ. ಸದ್ಯ ಬೀಚ್ ಗೆ ಬಂದ ಪ್ರವಾಸಿಗರಿಗೆ ನೀರಿಗಿಳಿಯಲು ಅನುಮತಿ ಇಲ್ಲ. ಬಂದವರು ಈ ತ್ಯಾಜ್ಯ ರಾಶಿ ನೋಡಿ ಬೆಚ್ಚಿ ಬೀಳುತ್ತಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು