News Karnataka Kannada
Tuesday, April 30 2024
ಉಡುಪಿ

ಮಲ್ಪೆ: ಸಮುದ್ರ ಜೀವಿಯ ಕವಚ ಪತ್ತೆ; ವಿಜ್ಞಾನಿಗಳ ತಂಡದಿಂದ ಪರಿಶೀಲನೆ

Malpe: Sea creature's shell discovered; Inspection by a team of scientists
Photo Credit : News Kannada

ಉಡುಪಿ: ಕಳೆದು ಒಂದು ವಾರಗಳಿಂದ ಮಲ್ಪೆ ಸಮುದ್ರ ತೀರದಲ್ಲಿ ಭಾರೀ ಪ್ರಮಾಣದಲ್ಲಿ ಪಾಚಿಯಂತಹ ವಸ್ತುಗಳು ಕಂಡುಬಂದಿದ್ದು, ಈ ಬಗ್ಗೆ ಸಾಕಷ್ಟು ಊಹಾಪೋಹಗಳು ಸೃಷ್ಟಿಯಾಗಿದ್ದವು.

ಈ ಹಿನ್ನೆಲೆಯಲ್ಲಿ ಸ್ಥಳಕ್ಕೆ ಭೇಟಿನೀಡಿದ ವಿಜ್ಞಾನಿಗಳ ತಂಡವೊಂದು ಇದು ಸಮುದ್ರ ಜೀವಿ ‘ಸೆಲ್ಲೋ ಫೇನ್ ಟ್ಯೂಬ್ ವರ್ಮ್’ನ ಕವಚಗಳು ಎಂಬುದನ್ನು ಪತ್ತೆ ಹಚ್ಚಿದೆ.

ಪ್ರಾಣಿಜನ್ಯವಾಗಿರುವ ಈ ಜೀವಿಯು ಸಮುದ್ರ ತೀರದಿಂದ 50ಮೀಟರ್ ದೂರದ ತಳಭಾಗದಲ್ಲಿ ಗುಂಪಾಗಿ ವಾಸ ಮಾಡುತ್ತದೆ. ಹಾವು, ಸಿಗಡಿ, ಏಡಿಗಳಂತೆ ಈ ಜೀವಿಯು ತನ್ನ ಮೇಲ್ಪದರದ ಕವಚವನ್ನು ಕಳಚಿ ಹೊರ ಬಂದು ಹೊಸ ಕವಚವನ್ನು ಬೆಳೆಸಿಕೊಳ್ಳುತ್ತದೆ. ಆ ಕವಚಗಳು ಚಂಡಮಾರುತದ ಪರಿಣಾಮವಾಗಿ ಸಮುದ್ರ ತೀರಕ್ಕೆ ಬಂದು ಬಿದ್ದಿವೆ. ಸದ್ಯ‌ ಈ ಜೀವಿ ಭಾರತ ಸಮುದ್ರದಲ್ಲಿ ಮಾತ್ರ ಕಂಡುಬಂದಿದೆ. ಇದರ ಬಗ್ಗೆ ಇನ್ನಷ್ಟು ಅಧ್ಯಯನ ಆಗಬೇಕಾದ ಅಗತ್ಯವಿದೆ ಎಂದು ಸೆಂಟ್ರಲ್ ಮರೀನ್ ಫಿಶರೀಸ್ ರಿಸರ್ಚ್ ಇನ್‌ಸ್ಟಿಟ್ಯೂಟ್ ನ ವಿಜ್ಞಾನಿ ದಿವ್ಯಾ ವಿ ತಿಳಿಸಿದ್ದಾರೆ.

ಮೂರು ದಶಕಗಳಲ್ಲಿ ನಾವು ಈ ರೀತಿಯ ಕವಚವನ್ನು ನೋಡುವುದು ಇದೇ ಮೊದಲ ಬಾರಿಯಾಗಿದೆ. ಈ ಬಗ್ಗೆ ಯಾರು ಕೂಡ ಆತಂಕ ಪಡಬೇಕಾದ ಅಗತ್ಯ ಇಲ್ಲ. ಇದನ್ನು ನಾವೇ ವಿಲೇವಾರಿ ಮಾಡಬಹುದು ಅಥವಾ ಅಲೆಗಳೇ ಮರಳಿ ಸಮುದ್ರಕ್ಕೆ ತೆಗೆದುಕೊಂಡು ಹೋಗಬಹುದು. ಇದು ಕೊಳೆತ ನಂತರ ಪೋಷ ಕಾಂಶ ಜಾಸ್ತಿಯಾಗಿರುತ್ತದೆ. ಹಾಗಾಗಿ ಈ ಪ್ರದೇಶದಲ್ಲಿ ಹೆಚ್ಚು ಮೀನು ಸಿಗುವ ಸಾಧ್ಯತೆ ಇದೆ ಎಂದು ಮಂಗಳೂರು ಮೀನುಗಾರಿಕಾ ಮಹಾವಿದ್ಯಾಲಯದ ಪ್ರಾಧ್ಯಾಪಕ ಡಾ. ಶಿವಕುಮಾರ್ ಮಗದ ಹೇಳಿದ್ದಾರೆ.

ಇದನ್ನು ಹೆಚ್ಚಿನ ಅಧ್ಯಯನಕ್ಕೆ ಇದರ ಮಾದರಿಯನ್ನು ಕೊಚ್ಚಿನ್‌ನಲ್ಲಿರುವ ಸಿಎಂಆರ್‌ಎಫ್, ಸೆಂಟ್ರಲ್ ಇಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ಗೋವಾದಲ್ಲಿರುವ ನ್ಯಾಶನಲ್ ಇಸ್ಟಿಟ್ಯೂಟ್ ಆಫ್ ಓಷಿಯನ್‌ಗ್ರಪಿ ಸಂಸ್ಥೆಗೆ ಕಳುಹಿಸಲಾಗುವುದು ಎಂದು ಮಾಹಿತಿ ನೀಡಿದ್ದಾರೆ.

ಈ ಸಮುದ್ರ ಜೀವಿ ಮೀನುಗಾರಿಕೆ ಹಾಗೂ ಮೀನುಗಾರಿಗೆ ಯಾವುದೇ ತೊಂದರೆ ಮಾಡಲ್ಲ. ಯಾರು ಆತಂಕ ಪಡುವ ಅಗತ್ಯ ಇಲ್ಲ ಎಂದು ಮೀನುಗಾರಿಕೆ ಇಲಾಖೆಯ ಉಡುಪಿ ವಲಯದ ಜಂಟಿ ನಿರ್ದೇಶಕ ವಿವೇಕ್.ಆರ್ ತಿಳಿಸಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು