ಉಡುಪಿ

ಕುಂದಾಪುರ: ಸಚಿವ ಎಸ್ ಅಂಗಾರ ಗಂಗೊಳ್ಳಿ ಬಂದರಿಗೆ ಭೇಟಿ

ಕುಂದಾಪುರ: ತಾಂತ್ರಿಕವಾಗಿ ಜೆಟ್ಟಿ ಕಾಮಗಾರಿ ಕೆಲಸ ಆಗಿದೆವೋ ಇಲ್ಲವೋ ಎನ್ನುವುದರ ಬಗ್ಗೆ ಉನ್ನತ ಮಟ್ಟದ ಸಂಸ್ಥೆಯಿಂದ ತನಿಖೆಯನ್ನು ಮಾಡಲಾಗುವುದು ಕಾಮಗಾರಿ ಕೆಲಸದಲ್ಲಿ ಅವ್ಯವಹಾರ ಆಗಿದ್ದಲ್ಲಿ ಸೂಕ್ತವಾದ ತನಿಖೆಯನ್ನು ನಡೆಸಿ ತಪ್ಪಿಸ್ಥರ ವಿರುದ್ಧ ಕಾನೂನು ಕ್ರಮವನ್ನು ಜರುಗಿಸಲಾಗುವುದು. ಸರಕಾರಿ ಕಾಮಗಾರಿ ಕೆಲಸವನ್ನು ಮಾಡುವ ಗುತ್ತಿಗೆದಾರ ಕಂಪೆನಿ ಗುಣಮಟ್ಟವನ್ನು ಕಾಯ್ದುಕೊಳ್ಳಬೇಕು ಕಾಮಗಾರಿಯ ಗುಣ ಮಟ್ಟದ ಬಗ್ಗೆ ಅವರು ಕೂಡ ಗಮನವನ್ನು ಹರಿಸಬೇಕು ಕೆಲಸಲದಲ್ಲಿ ನಿರ್ಲಕ್ಷ್ಯ ತೋರುವ ಗುತ್ತಿಗೆದಾರ ಕಂಪೆನಿಯನ್ನು ಬ್ಲಾಕ್ ಲಿಸ್ಟ್ಗೆ ಹಾಕಲಾಗುವುದು ಎಂದು ಬಂದರು ಮತ್ತು ಮೀನುಗಾರಿಕಾ ಸಚಿವ ಎಸ್ ಅಂಗಾರ ಹೇಳಿದರು.

ಕುಂದಾಪುರ ತಾಲೂಕಿನ ಗಂಗೊಳ್ಳಿ ಬಂದರಿನಲ್ಲಿ ಕುಸಿತಗೊಂಡಿದ್ದ ಜೆಟ್ಟಿ ಕಾಮಗಾರಿ ಸ್ಥಳಕ್ಕೆ ಗರುವಾರ ಭೇಟಿ ನೀಡಿ ಸ್ಥಳ ಪರೀಶಿಲನೆ ನಡೆಸಿ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.

ಸಿಐಡಿಇಎಫ್ ಸಂಸ್ಥೆಯವರು ನೀಲಿ ನಕಾಶೆಯನ್ನು ತಯಾರಿಸಿ ಗಂಗೊಳ್ಳಿ ಬಂದರಿನಲ್ಲಿ ಕೆಲಸವನ್ನು ನಿರ್ವಹಿಸುವ ಕಂಪೆನಿಗೆ ಒದಗಿಸಿಕೊಟ್ಟಿದ್ದಾರೆ ಆವೊಂದು ಪ್ರಕ್ರಿಯೆಯಲ್ಲಿ ಗುತ್ತಿಗೆದಾರ ಕಂಪೆನಿ ಕೆಲಸವನ್ನು ನಿರ್ವಹಿಸಿದೆಯೊ ಇಲ್ಲವೊ ಎನ್ನುವದರ ಬಗ್ಗೆ ಮಾಹಿತಿಯನ್ನು ಕಲೆ ಹಾಕಲಾಗುವುದು ಪ್ಲ್ಯಾನಿಂಗ್ ನಂತೆ ಸಂಸ್ಥೆ ಕೆಲಸವನ್ನು ನಿರ್ವಹಿಸಿದ್ದರೆ ಈ ರೀತಿ ಅನಾಹುತ ಯಾಕೆ ಆಗಿದೆ ಎನ್ನುವುದರ ಬಗ್ಗೆಯೂ ಮಾಹಿತಿಯನ್ನು ಪಡೆಯಲಾಗುವುದು ಸ್ಥಳೀಯ ಮಿನುಗಾರರ ಅಭಿಪ್ರಾಯ ಪಡೆದುಕೊಂಡು ಮತ್ತೆ ಗಂಗೊಳ್ಳಿ ಬಂದರಿನಲ್ಲಿ ಕೆಲಸವನ್ನು ಮುಂದುವರೆಸಲಾಗುತ್ತದೆ ಎಂದರು.

ಗಂಗೊಳ್ಳಿ ಬಂದರಿನಲ್ಲಿ ನಡೆದ ಜಟ್ಟಿ ಕುಸಿತದ ವಿಡಿಯೊ ಒಂದನ್ನು ಟ್ಚಿಟರ್‌ನಲ್ಲಿ ಹಂಚಿಕೊಂಡಿದ್ದ ಮಾಜಿ ಮುಖ್ಯಮಂತ್ರಿ ಸಿದ್ದರಾಮ್ಯ ನವರು 40% ಕಮಿಷನ್ ಸರಕಾರದ ಪರಮಾವಧಿ ಕೆಲಸ ವೆಂದು ಆರೋಪ ಮಾಡಿದ ಬಗ್ಗೆ ಪರ್ತಕರ್ತರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು ಇದೊಂದು ಭಾಲಿಶವಾದ ಹೇಳಿಕೆ ಭ್ರಷ್ಟಚಾರ ಜನ್ಮತಾಳಿದ್ದೆ ಕಾಂಗ್ರೆಸ್‌ನಿಂದ ರಾಜಕೀಯವಾಗಿ ಯಾರು ಎನ್ನನ್ನು ಬೇಕಾದರು ಆರೋಪ ಮಾಡಬಹುದು ಎಂದು ಭ್ರಷ್ಟಾರದ ಆರೋಪವನ್ನು ತಳ್ಳಿ ಹಾಕಿದರು. ಗಂಗೊಳ್ಳಿ ಬಂದರಿನ ಕೆಲಸದಲ್ಲಿ ಭ್ರಷ್ಟಚಾರ ನಡೆದಿದ್ದರೆ ತನಿಖೆಯನ್ನು ಕೈಗೊಳ್ಳಲಾಗುತ್ತದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಬೈಂದೂರು ಕ್ಷೇತ್ರದ ಶಾಸಕ ಬಿ.ಎಂ.ಸುಕುಮಾರ ಶೆಟ್ಟಿ, ಜಿಲ್ಲಾಧಿಕಾರಿ ಕೂರ್ಮರಾವ್, ಬಂದರು ಅಧಿಕಾರಿ ಉದಯ ಕುಮಾರ್, ಮೀನುಗಾರರ ಮುಖಂಡರುಗಳು ಮತ್ತಿತರರು ಉಪಸ್ಥಿತರಿದ್ದರು.

Gayathri SG

Recent Posts

ಉಳುಮೆ ಮಾಡುತ್ತಿದ್ದ ವೇಳೆ ಟ್ರ್ಯಾಕ್ಟರ್ ರೋಟರಿಗೆ ಸಿಲುಕಿ ಬಾಲಕ ಸಾವು

ಉಳುಮೆ ಮಾಡುತ್ತಿದ್ದ ವೇಳೆ ಟ್ರ್ಯಾಕ್ಟರ್ ರೋಟರಿಗೆ ಬಾಲಕ ಸಿಲುಕಿ ಸ್ಥಳದಲ್ಲಿಯೇ ಸಾವನ್ನಪ್ಪಿರುವ ಘಟನೆ ನಂಜನಗೂಡು ತಾಲ್ಲೂಕಿನ ದೇವರಸನಹಳ್ಳಿ ಗ್ರಾಮದಲ್ಲಿ ನಡೆದಿದೆ.

9 mins ago

ಹುಬ್ಬಳ್ಳಿ-ಧಾರವಾಡ ಕಮಿಷನರೇಟ್‌ಗೆ ಎನ್‌ ಶಶಿಕುಮಾ‌ರ್ ನೇಮಕ ಸಾಧ್ಯತೆ

ಅವಳಿ ನಗರದಲ್ಲಿ ಹೆಚ್ಚುತ್ತಿರುವ ಕ್ರೈಂ ರೇಟ್ ಕಡಿವಾಣ ಹಾಕುವಲ್ಲಿ ಹುಬ್ಬಳ್ಳಿ-ಧಾರವಾಡ ಪೊಲೀಸ್‌ ಕಮಿಷನ‌ರ್ ರೇಣುಕಾಸುಕುಮಾರ ಅವರನ್ನು ಬದಲಾವಣೆ ಮಾಡಬೇಕು ಅಂತ…

27 mins ago

ಜರ್ಮಿನಿಯಿಂದ ಲಂಡನ್‌ಗೆ ಹಾರಿದ ಪ್ರಜ್ವಲ್​ ರೇವಣ್ಣ

ಅಶ್ಲೀಲ ವಿಡಿಯೋ, ಲೈಂಗಿಕ ದೌರ್ಜನ್ಯ ಆರೋಪ ಹೊತ್ತಿರುವ ಹಾಸನ ಸಂಸದ ಪ್ರಜ್ವಲ್ ರೇವಣ್ಣ ದೇಶಕ್ಕೆ ಹೋಗಿದ್ದು, ಇಲ್ಲಿಯವರೆಗು ಜರ್ಮನಿಯಲ್ಲಿದ್ದಾರೆ ಎಂದು…

47 mins ago

ನ್ಯಾಚುರಲ್ ಐಸ್ ಕ್ರೀಂ ಸಂಸ್ಥಾಪಕ ರಘುನಂದನ್ ಕಾಮತ್ ನಿಧನ

ಮುಂಬಯಿಯ ನ್ಯಾಚುರಲ್ ಐಸ್ ಕ್ರೀಂ ಸಂಸ್ಥಾಪಕ ರಘುನಂದನ್ ಕಾಮತ್ (75) ಅಲ್ಪಕಾಲದ ಅಸೌಖ್ಯದಿಂದ ಶುಕ್ರವಾರ ರಾತ್ರಿ ನಿಧನರಾದರು.

1 hour ago

ಚಲಿಸುತ್ತಿದ್ದ ಬಸ್‌ನಲ್ಲಿ ಬೆಂಕಿ: 10 ಮಂದಿ ಸಜೀವ ದಹನ

ಬಸ್‌ಗೆ ಬೆಂಕಿ ಹತ್ತಿಕೊಂಡು 10 ಮಂದಿ ಮೃತಪಟ್ಟು, 10ಕ್ಕೂ ಹೆಚ್ಚು ಮಂದಿ ಗಾಯಗೊಂಡ ಘಟನೆ  ಹರಿಯಾಣದ ಕುಂಡಲಿ-ಮನೇಸರ್-ಪಲ್ವಾಲ್ ಎಕ್ಸ್‌ಪ್ರೆಸ್‌ ವೇಯಲ್ಲಿ…

1 hour ago

11 ತಿಂಗಳಿನಲ್ಲಿ ಬರೋಬ್ಬರಿ 5.38 ಕೋಟಿ ದಂಡ ವಸೂಲಿ ಮಾಡಿದ ಬಿಎಂಆರ್‌ಸಿಎಲ್‌

ನಮ್ಮ ಮೆಟ್ರೋದಲ್ಲಿ ಸುರಕ್ಷತೆ, ಭದ್ರತೆ ದೃಷ್ಟಿಯಿಂದ ಹಲವಾರು ನೀತಿ ನಿಯಮಗಳನ್ನು ಬಿಎಂಆರ್‌ಸಿಎಲ್‌ ಜಾರಿ ಮಾಡಿದೆ. ಬರೀ ನಿಯಮ ಮಾಡಿದ್ದು ಮಾತ್ರವಲ್ಲದೇ…

2 hours ago