Categories: ಉಡುಪಿ

ಕುಂದಾಪುರ: ಗುರುರಾಜ್ ಗಂಟಿಹೊಳೆ ಬೃಹತ್ ರೋಡ್ ಶೋ

ಕುಂದಾಪುರ: ಬೈಂದೂರು ವಿಧಾನಸಭೆ ಕ್ಷೇತ್ರದಿಂದ ಗೆದ್ದಿರುವ ಬಿಜೆಪಿ ಪಕ್ಷದ ಅಭ್ಯರ್ಥಿ ಗುರುರಾಜ್ ಗಂಟಿಹೊಳೆ ಅವರು ಶನಿವಾರ ಸಂಜೆ ತಲ್ಲೂರು ನಿಂದ ಶಿರೂರು ತನಕ ತೆರೆದ ವಾಹನದಲ್ಲಿ ಬೃಹತ್ ರೋಡ್ ಶೋ ನಡೆಸಿ ಕಾರ್ಯಕರ್ತರೊಡನೆ ವಿಜಯೋತ್ಸವ ಆಚರಿಸಿದರು‌.

ಗುರುರಾಜ್ ಗಂಟಿಹೊಳೆ ಅವರು ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿ ಇದು ಯಾರೋ ಒಬ್ಬರ ಗೆಲುವಲ್ಲ ಸಂಪೂರ್ಣ ಕಾರ್ಯಕರ್ತರ ಗೆಲುವು,ನಾವು ಕಾಣದೆ ಇರುವ ಎಷ್ಟೋ ಕಾರ್ಯಕರ್ತರು ಈ ಗೆಲುವಿಗಾಗಿ ಶ್ರಮಿಸಿದ್ದಾರೆ ಇದು ನನ್ನ ಗೆಲುವೆಲ್ಲ ನಮ್ಮೆಲ್ಲರ ಗೆಲುವು ಇದೇ ಭಾವ ಎಲ್ಲರಲ್ಲೂ ಇರಲಿ ಮುಂದಿನ ಐದು ವರ್ಷ ಕ್ಷೇತ್ರದ ಸಮಗ್ರ ಅಭಿವೃದ್ಧಿಗಾಗಿ ಎಲ್ಲರೂ ಒಟ್ಟಾಗಿ ಶ್ರಮಿಸೋಣ ಎಂದು ತಮ್ಮ ಅದ್ಭುತ ಪೂರ್ವ ಗೆಲುವಿಗೆ ಕಾರಣೀಭೂತರಾದ ಎಲ್ಲರಿಗೂ ಧನ್ಯವಾದ ಸಮರ್ಪಿಸಿದರು.

ರೋಡ್ ಶೋ ಕೊನೆಯಲ್ಲಿ ಇತಿಹಾಸ ಪ್ರಸಿದ್ಧ ಬೈಂದೂರು ಶ್ರೀ ಸೇನೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದರು.

ಈ ಸಂದರ್ಭದಲ್ಲಿ ಮಂಡಲ ಅಧ್ಯಕ್ಷ ದೀಪಕುಮಾರ್ ಶೆಟ್ಟಿ ಸುರೇಶ್ ಶೆಟ್ಟಿ ಉಪ್ಪುಂದ , ಜಿಲ್ಲಾ ಉಪಾಧ್ಯಕ್ಷ ಸದಾನಂದ ಉಪ್ಪಿನಕುದ್ರು,ಮಂಡಲ ಪ್ರಧಾನ ಕಾರ್ಯದರ್ಶಿ ಪ್ರಿಯದರ್ಶಿನಿ ದೇವಾಡಿಗ, ಮಾಜಿ ತಾಲೂಕು ಪಂಚಾಯತ್ ಅಧ್ಯಕ್ಷ ಮಹೇಂದ್ರ ಪೂಜಾರಿ, ಕರುಣ್ ಪೂಜಾರಿ,ಶ್ರೀಧರ್ ಬಿಜಾರು ಶರತ್ ಶೆಟ್ಟಿ ಉಪ್ಪುಂದ ಆಕಾಶ್ ಪೂಜಾರಿ, ಪಕ್ಷದ ಪ್ರಮುಖರು ಉಪಸ್ಥಿತರಿದ್ದರು.

Ashika S

Recent Posts

ಆಯೋಗದ ನಿಯಮ ಉಲ್ಲಂಘಿಸಿದಲ್ಲಿ ಪ್ರಜಾಪ್ರತಿನಿಧಿ ವಿರುದ್ಧ ಕ್ರಮ ಖಚಿತ : ಡಿಸಿ

ಚುನಾವಣಾ ಆಯೋಗವು ಮೇ. 5, 2024 ರ ಸಾಯಂಕಾಲ 6 ಗಂಟೆಯಿಂದ ಮತದಾನ ದಿನವಾದ ಮೇ. 07, 2024ರಂದು ಮತದಾನ…

13 mins ago

ಜೆಡಿಎಸ್‌ ನಾಯಕರ ಕುಟುಂಬದೊಳಗಿನ ಜಗಳದಿಂದ ಪ್ರಜ್ವಲ್‌ ಪ್ರಕರಣ ಹೊರಬಿದ್ದಿದೆ: ಡಿ.ಕೆ. ಶಿವಕುಮಾರ್‌

ಜೆಡಿಎಸ್‌ ನಾಯಕರ ಕುಟುಂಬದೊಳಗಿನ ಜಗಳದಿಂದ ಪ್ರಜ್ವಲ್‌ ಪ್ರಕರಣ ಹೊರಬಿದ್ದಿದೆ: ಡಿ.ಕೆ. ಶಿವಕುಮಾರ್‌

20 mins ago

ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಲು ನಿರಾಕರಿಸಿದ ಕಾಂಗ್ರೆಸ್‌ ಅಭ್ಯರ್ಥಿ

ಇದೀಗ ಕಾಂಗ್ರೆಸ್‌ ಪಕ್ಷಕ್ಕೆ ಮತ್ತೊಂದು ಹೊಡೆತ ಬಿದ್ದಿದೆ.   ಸೂರತ್, ಇಂದೋರ್ ಬಳಿಕ ಇದೀಗ ಒಡಿಶಾದ ಪುರಿ ಲೋಕಸಭಾ ಕ್ಷೇತ್ರದ ಕಾಂಗ್ರೆಸ್…

23 mins ago

ಫೇಕ್‌ ನ್ಯೂಸ್‌: ಕೋವಿಶೀಲ್ಡ್​ ಪಡೆದವರು ತಂಪುಪಾನಿಯ,ಐಸ್​ ಕ್ರೀಮ್ ಸೇವಿಸಬಾರದು

ಕೊರೊನಾ ಸಂದರ್ಭದಲಲಿ ಕೋವಿಶೀಲ್ಡ್‌ ಪಡೆದವರು ತಂಪುಪಾನಿಯ,ಐಸ್​ ಕ್ರೀಮ್ ಸೇವಿಸಬಾರದು ಎಂದು ಸುಳ್ಳು ಸುದ್ದಿ ಹಬ್ಬಿಸಲಾಗಿದೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ

38 mins ago

ಬಿಸಿಲಿನ ಶಾಖಕ್ಕೆ ರಾಯಚೂರಿನಲ್ಲಿ ಐವರು ಬಲಿ : ಹೊತ್ತಿ ಉರಿದ ಕಾರು

ಜಿಲ್ಲೆಯಲ್ಲಿ ಬಿಸಿಲು ಆವರಿಸಿಕೊಂಡಿದ್ದು, ಬಿಸಿಲಿನ ಸಾಖಕ್ಕೆ ಕಳೆದ 24 ಗಂಟೆಗಳ ಅವಧಿಯಲ್ಲಿ ಐವರು ಮೃತಪಟ್ಟಿದ್ದಾರೆ. ಹಾಗೂ ಶಕ್ತಿನಗರದಲ್ಲಿ ಕಾರಿಗೆ ಬೆಂಕಿ…

54 mins ago

ಇಂದು (ಮೇ 04) ಅಂತಾರಾಷ್ಟ್ರೀಯ ಅಗ್ನಿಶಾಮಕ ದಿನ

ಜನ ಸಮುದಾಯವನ್ನು ರಕ್ಷಿಸಲು ತಮ್ಮ ಪ್ರಾಣವನ್ನು ಪಣಕ್ಕಿಡುವ ಅಗ್ನಿ ಶಾಮಕದಳದ ವೀರರನ್ನು ಗೌರವಿಸಲು ಇಂದು ವಿಶ್ವದಾದ್ಯಂತ ಅಂತಾರಾಷ್ಟ್ರೀಯ ಅಗ್ನಿಶಾಮಕ ದಿನವನ್ನು…

55 mins ago