Categories: ಉಡುಪಿ

ಕಾರ್ಕಳ: ಕ್ಷೇತ್ರದ ಅಭಿವೃದ್ಧಿ ರಿಪೋರ್ಟ್‌ ಒದಗಿಸುವುದು ಜವಾಬ್ದಾರಿ, ಸಚಿವ ಸುನೀಲ್‌‌

ಕಾರ್ಕಳ: ಜನಪ್ರತಿನಿಧಿಯಾಗಿ ಕ್ಷೇತ್ರದ ಅಭಿವೃದ್ದಿಯ ರಿಪೋರ್ಟ್ ಕಾರ್ಡ್ ನೀಡುವುದು ನನ್ನ ಜವಾಬ್ದಾರಿ ಯಾಗಿದೆ. ಅಭಿವೃದ್ಧಿಗೆ ಹೊಸ ಸ್ಪರ್ಷ ನೀಡಿ ಸ್ವರ್ಣ ಕಾರ್ಕಳ ಪರಿಕಲ್ಪಯು ಈಡೇರುತ್ತಿದೆ ಎಂದು ಇಂಧನ ಹಾಗೂ ಕನ್ನಡ ಸಂಸ್ಕೃತಿ ಖಾತೆ ಸಚಿವ ವಿ ಸುನೀಲ್ ಕುಮಾರ್ ಹೇಳಿದರು.

ಕಾರ್ಕಳ ಕುಕ್ಕುಂದೂರು ಗ್ರಾಮ ಪಂಚಾಯಿತಿ ಮೈದಾನದಲ್ಲಿ ನಡೆದ ಕ್ಷೇತ್ರದ ಸಾಧನೆಯ ರಿಪೋರ್ಟ್ ಕಾರ್ಡ್ ಅನಾವರಣ ಗೊಳಿಸಿ ಮಾತನಾಡಿದರು.

ಮೂಲಭೂತ ಸೌಕರ್ಯಗಳ ಜೊತೆ ಬೃಹತ್ ಪ್ರಮಾಣದ ಪ್ರಾಜೆಕ್ಟ್‌ ಗಳನ್ನು ತರುವ ಮೂಲಕ ಅವಿರತ ಶ್ರಮಿಸಿದ್ದು ,.ಡೀಮ್ಡ್ ಫಾರೆಸ್ಟ್‌ ಸಮಸ್ಯೆ ಪರಿಹರಿಸಿ ಹಕ್ಕುಪತ್ರ ವಿತರಿಸುವ ಮೂಲಕ ಜನರಿಗೆ ಪ್ರಾಮಾಣಿಕ ಪ್ರಯತ್ನ ಮಾಡಲಾಗಿದೆ.

ಉದ್ಯೋಗ ವಂಚಿತ ಯುವಕರಿಗೆ ಉದ್ಯೋಗ ಸೃಷ್ಟಿ ಸುವ ಸಲುವಾಗಿ 3000 ಕೋಟಿ ವೆಚ್ಚದ ಬೃಹತ್ ಅಪ್ಟಿಕಲ್ ಫೈಬರ್ ಕೆಬಲ್ ಅಧಾರಿತ ಪ್ರಾಜೆಕ್ಟ್ ನಿರ್ಮಾಣಕ್ಕೆ ಈಗಾಗಲೇ ಸ್ಥಳ ಪರಿಶೀಲನೆ ನಡೆಸಿದ್ದು ಮುಂದಿನ ದಿನಗಳಲ್ಲಿ ನಿರುದ್ಯೋಗದ ಸಮಸ್ಯೆ ಬಗೆಹರಿಯಲಿದೆ ಎಂದರು.

ಹತ್ತು ಸಾವಿರ ಅಕ್ಸಿಮೀಟರ್ ,ಕಿಟ್ ವಿತರಣೆ , ಅಕ್ಸಿಜನ್ ಘಟಕ ನಿರ್ಮಾಣ ಮಾಡಿ ಕೊರೋನ ಸಂದಿಗ್ಧ ಪರಿಸ್ಥಿತಿಯಲ್ಲಿ ಮೂರನೇ ಅಲೆಯನ್ನು ಯಶಸ್ವಿಯಾಗಿ ಎದುರಿಸಲಾಗಿದೆ. ಕಾರ್ಕಳ ವಿಧಾನಸಭಾ ಕ್ಷೇತ್ರದಲ್ಲಿ ಶಾಶ್ವತ ಕುಡಿಯುವ ನೀರಿಗಾಗಿ 46000 ಕುಟುಂಬಗಳಿಗೆ ಶಾಶ್ವತ ಕುಡಿಯುವ ನೀರನ್ನು ಕಲ್ಪಿಸಲು ಟೆಂಡರ್ ಪ್ರಕ್ರಿಯೆ ಪೂರ್ಣ ಗೊಳಿಸಿ ಕೆಲವೆ ದಿನಗಳಲ್ಲಿ ಶಂಕುಸ್ಥಾಪನೆ ಮಾಡಲಾಗುತ್ತಿದೆ ಎಂದು ಸಚಿವ ಸುನೀಲ್ ಕುಮಾರ್ ತಿಳಿಸಿದರು

ಅಭಿವೃದ್ಧಿಯ ಚರ್ಚೆಗೆ ನಾನು ಸಿದ್ಧ: ಚುನಾವಣೆ ಯಲ್ಲಿ ಟೀಕೆಗಳು ಸರ್ವೆ ಸಾಮಾನ್ಯ. ಆದರೆ ಅಭಿವೃದ್ಧಿಯ ವಿಚಾರದಲ್ಲಿ ನಾನು ಚರ್ಚೆಗೆ ಸಿದ್ಧ. ಐದು ವರ್ಷಗಳ ಅವಧಿಯಲ್ಲಿ ನನ್ನ ಪ್ರಯತ್ನ ಪ್ರಮಾಣಿಕವಾಗಿ ಮಾಡಲಾಗಿದೆ ಮುಂದಿನ ನಲವತ್ತು ದಿನಗಳಲ್ಲಿ ನಾನು ಹೆಚ್ಚು ಮಾತನಾಡುವುದಿಲ್ಲ . ‌ಅಭಿವೃದ್ದಿಯೆ ಮಾತನಾಡಬೇಕು ಅ ಮೂಲಕ ಜನರ ಮನಗೆಲ್ಲಬೇಕು .ಜನತೆ ಆಶಿರ್ವಾದಿಸಬೇಕು ಎಂದರು.

ಜನರ ಕ್ಷಮೆ ಕೇಳಿದ ಸಚಿವ ಸುನೀಲ್ : ಎರಡೆರಡು ಇಲಾಖೆಗಳು , ಪಕ್ಷದ ಸಭೆಗಳು ಎಲ್ಲಾ ಸವಾಲುಗಳ ನಡುವೆ ಕಾರ್ಯಕರ್ತರ ಜೊತೆ ಇರಲು ಸಾಧ್ಯವಾಗಲಿಲ್ಲ ಅದಕ್ಕೆ ಕ್ಷಮೆ ಕೋರುವೆ
ನನ್ನ ಸ್ವರ್ಣ ಕಾರ್ಕಳ ಪರಿಕಲ್ಪನೆ ಇನ್ನೂ ಮುಗಿದಿಲ್ಲ ಮತ್ತೆ ಪ್ರಯತ್ನ ಮುಂದುವರೆಯಲಿದೆ ಅದಕ್ಕಾಗಿ ಮತ್ತೆ ನಿಮ್ಮ ಮನೆಬಾಗಿಲಿಗೆ ಬರಲಿದ್ದೇನೆ ಎಂದು ಸಚಿವ ಸುನೀಲ್ ಕುಮಾರ್ ಹೇಳಿದರು.

ಆಳ್ವಾಸ್ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಮೋಹನ್ ಆಳ್ವ ಮಾತನಾಡಿ ಕಾರ್ಕಳದ ಜನರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕಾರ್ಕಳ ಉತ್ಸವ , ಥೀಮ್ ಪಾರ್ಕ್, ಮೂಲಕ ಜನರ ಮನ್ನಣೆಗೆ ಪಾತ್ರವಾಗಿದೆ . ಕೋಟಿ ಕಂಠ ಗಾಯನದ ಮೂಲಕ ಜನ ಸಚಿವ ಸುನೀಲ್ ಕುಮಾರ್ ಕರ್ನಾಟಕದ ಮೂಲೆಮೂಲೆಗಳಲ್ಲಿ ಜನಜನಿತರಾಗಿದ್ದಾರೆ . ಅವರ ಸ್ವದೇಶಿ ಚಿಂತನೆ ಸ್ಥಳೀಯ ಉತ್ಪನ್ನಕ್ಕೆ ಕಾರ್ಕಳವನ್ನು ಬ್ರಾಂಡ್ ಮಾಡುವ ಮನಸ್ಸು ಮಾಡಿರುವುದು ಸಂತಸ ತಂದಿದೆ ಎಂದರು

ಯುವ ಅಭಿವೃದ್ಧಿ ಯ ನೇತಾರ: ಸಚಿವ ಸುನೀಲ್ ಕುಮಾರ್ ಅಭಿವೃದ್ಧಿಯ ನೇತಾರರಾಗಿ ಗುರುತಿಸಿಕೊಂಡಿದ್ದಾರೆ. ದೂರದರ್ಶಿತ್ವದ ನ್ಯಾಯಕತ್ವವೇ ಕಾರ್ಕಳದ ಬೆಳವಣಿಗೆ ಅಭಿವೃದ್ಧಿಗೆ ದಾರಿ ದೀಪವಾಗಿದೆ . ಸಂಸ್ಕೃತಿ ಇಲಾಖೆಗೆ ಪ್ರೀತಿಯ ಸ್ಪರ್ಶ ನೀಡಿದ್ದಾರೆ , ಯಕ್ಷಗಾನ ಸಮ್ಮೇಳನ, ಯಕ್ಷರಂಗಾಯಣ, ಪರಶುರಾಮ ಥೀಮ್ ಪಾರ್ಕ್, ಕೋಟಿ ಚೆನ್ನಯ್ಯ ಥೀಮ್ ಪಾರ್ಕ್ ನಿರ್ಮಾಣ ಮೂಲಕ ಪ್ರೀತಿಯ ಸ್ಪರ್ಶ ನೀಡಿದ್ದಾರೆ ಅದಕ್ಕೆ ಸಾಕ್ಷಿಯೆ ಯುವ ನ್ಯಾಯಕತ್ವದ ಚಿಂತನೆ ಮೂಲಾಧಾರವಾಗಿದೆ ಎಂದರು. ಸಾಮಾಜಿಕ ಜಾಲತಾಣಗಳಲ್ಲಿ ಅಪಪ್ರಚಾರಗಳನ್ನು ನಂಬದಂತೆ ಗಾಸಿಪ್ ಗಳನ್ನು ಅಪಸ್ವರಗಳನ್ನು ನಂಬದಿರಿ , ಅಭಿವೃದ್ಧಿ ಯನ್ನು ಗಮನಿಸಿ ,ಜಾಗೃತಿ ಮೂಡಿಸಿ ಅವರನ್ನು ದಾಖಲೆಯ ಮತದಾನದ ಮೂಲಕ ಗೆಲ್ಲಿಸಿ ಎಂದು ಮೋಹನ್ ಆಳ್ವಾ ಹೇಳಿದರು.

ಹಿರಿಯ ನ್ಯಾಯವಾದಿ ಎಂ.ಕೆ ವಿಜಯಕುಮಾರ್ ಮಾತನಾಡಿ ಸಚಿವ ಸುನೀಲ್‌ ಕಾರ್ಕಳ ಉತ್ಸವದಲ್ಲಿ ಪುರಸಭಾ ಕಾರ್ಮಿಕರನ್ನು ಹೆಲಿಕಾಪ್ಟರ್ ನಲ್ಲಿ ಸುತ್ತಿಸುವ ಮೂಲಕ ಕನಸ್ಸನ್ನು ಈಡೇರಿಸಿದವರು. ಬೆಳಕು ಯೋಜನೆ ಮೂಲಕ ರಾಜ್ಯದ ಬಡಜನರ ಮನಸ್ಸಿಗೆ ಹತ್ತಿರವಾದವರು .ರಾಜ್ಯದ 224 ವಿಧಾನಸಭಾ ಕ್ಷೇತ್ರಗಳಲ್ಲಿ ಕಾರ್ಕಳದ ಸುನೀಲ್ ಕುಮಾರ್ ಕ್ಷೇತ್ರವು ಅಭಿವೃದ್ಧಿಯ ಲ್ಲಿ ಭಿನ್ನವಾಗಿ ಮೂಡಿಬಂದಿದೆ ಎಂದರು. ಡಬಲ್ ಎಂಜಿನ್ ಸರಕಾರಕ್ಕೆ ಮತ್ತೆ ಹುರುಪು ತುಂಬಬೇಕು ಎಂದರು.

ಸಭೆಯಲ್ಲಿ ಬಿಜೆಪಿ ಹಿರಿಯ ಮುಖಂಡರಾದ ಬೋಳ ಪ್ರಭಾಕರ ಕಾಮತ್, , ಗೇರು ನಿಗಮದ ಅಧ್ಯಕ್ಷ ಮಣಿರಾಜ ಶೆಟ್ಟಿ , ಬಿಜೆಪಿ ಕ್ಷೇತ್ರ ಅಧ್ಯಕ್ಷ ಮಹಾವೀರ ಹೆಗ್ಡೆ , ಧಾರ್ಮಿಕ ಮುಖಂಡ ಭಾಸ್ಕರ್ ಜೋಯಿಸ್ , ಪುಂಡಲೀಕ ನಾಯಕ್ , ಉದಯ್ ಕುಲಾಲ್ , ರಾಮಚಂದ್ರ ಅಚಾರ್ಯ ,ಮಹಾಬಲ ಸುವರ್ಣ ಉಪಸ್ಥಿತರಿದ್ದರು .

ಇದೆ ಸಂದರ್ಭದಲ್ಲಿ ಗಾಯಕಿ ಸನ್ನಿದಿ ಚಂದ್ರಶೇಖರ್ ಕುಲಾಲ್ ಅವರನ್ನು ಸನ್ಮಾನಿಸಲಾಯಿತು .

ನ್ಯಾಯವಾದಿ ರವೀಂದ್ರ ಮೊಯಿಲಿ ಸ್ವಾಗತಿಸಿದರು .ಸಂಗೀತ ಕುಲಾಲ್ ಕಾರ್ಯಕ್ರಮ ನಿರೂಪಿಸಿದರು. ಈದು ಶ್ರೀಧರ ಗೌಡ ಧನ್ಯವಾದ ವಿತ್ತರು.

Umesha HS

Recent Posts

ಕೈ ತಪ್ಪಿದ ವಿಧಾನಪರಿಷತ್ ಟಿಕೆಟ್: ಮಾಜಿ ಶಾಸಕ ರಘುಪತಿ ಭಟ್ ಅಸಮಾಧಾ‌ನ

ವಿಧಾನಪರಿಷತ್ತಿನ ಪದವೀಧರ, ಶಿಕ್ಷಕರ ಕೇತ್ರಗಳಿಗೆ ಜೂ. 3ರಂದು ನಡೆಯಲಿರುವ ಚುನಾವಣೆಗೆ ಬಿಜೆಪಿ ತನ್ನ ಅಭ್ಯರ್ಥಿಗಳನ್ನು ಘೋಷಣೆ ಮಾಡಿದ ಬೆನ್ನಲ್ಲೇ ಉಡುಪಿ…

7 mins ago

ಇಂದು ದಾದಿಯರ ದಿನ; ದಣಿವರಿಯಿಲ್ಲದೆ ಕೆಲಸ ಮಾಡುವ ದಾದಿಯರಿಗೊಂದು ಸಲಾಂ

ಪ್ರಪಂಚದಾದ್ಯಂತ ಮೇ 12ರಂದು ಅಂತರಾಷ್ಟ್ರೀಯ ದಾದಿಯರ ದಿನ ವನ್ನಾಗಿ ಆಚರಿಸಲಾಗುತ್ತದೆ. ಫ್ಲಾರೆನ್ಸ್ ನೈಟಿಂಗೇಲ್ ಅವರ ಜನ್ಮದಿನದ ಗೌರವಾರ್ಥವಾಗಿ ವಿಶ್ವಾದ್ಯಂತ ಅಂತರರಾಷ್ಟ್ರೀಯ…

19 mins ago

ಜೈಲಿನಲ್ಲೇ ಹೃದಯಾಘಾತವಾಗಿ ಕೈದಿ ಮೃತ್ಯು

ವಿಚಾರಣಾಧೀನ ಕೈದಿಯೋರ್ವ ಜೈಲಿನಲ್ಲೇ ಹೃದಯಾಘಾತ ಸಂಭವಿಸಿ ಮೃತಪಟ್ಟ ಘಟನೆ ಉಡುಪಿ ಜಿಲ್ಲೆಯ ಹಿರಿಯಡಕ ಸಬ್ ಜೈಲಿನಲ್ಲಿ ನಡೆದಿದೆ.

23 mins ago

ಎಕ್ಸಾಂನಲ್ಲಿ ಫೇಲ್‌ : ಕೆರೆಗೆ ಹಾರಿ ಇಂಜಿನಿಯರಿಂಗ್ ವಿದ್ಯಾರ್ಥಿ ಆತ್ಮಹತ್ಯೆ

ಪರೀಕ್ಷೆಯಲ್ಲಿ ಫೇಲ್‌ ಆಗಿದ್ದೇನೆ ಎಂದು ಇಂಜಿನಿಯರಿಂಗ್ ವಿದ್ಯಾರ್ಥಿಯೋರ್ವ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. . ಫೇಲ್ ಆದ ವಿಚಾರ ಪೋಷಕರಿಗೆ…

48 mins ago

29ನೇ ಬಾರಿ ಮೌಂಟ್‌ ಎವರೆಸ್ಟ್‌ ಏರಿದ ಕಮಿ ರೀಟಾ ಶೆರ್ಪಾ

ಎವರೆಸ್ಟ್ ಮ್ಯಾನ್ ಎಂದೇ ಹೆಸರಾಗಿರುವ ನೇಪಾಳದ ಕಮಿ ರೀಟಾ ಶೆರ್ಪಾ 29ನೇ ಬಾರಿ ವಿಶ್ವದ ಅತಿ ಎತ್ತರದ ಪರ್ವತ ಮೌಂಟ್‌…

57 mins ago

ಭೀಕರ ಅಪಘಾತ : ಇಬ್ಬರು ಶಿಕ್ಷಕರು ಸ್ಥಳದಲ್ಲೇ ದುರ್ಮರಣ

ಮದುವೆಗೆ ಹೋಗಿ ತಡರಾತ್ರಿ ಮರಳಿ ಬರುತ್ತಿದ್ದ ಸಂದರ್ಭ ಕಾರು ಪಲ್ಟಿಯಾಗಿ ಇಬ್ಬರು ಶಿಕ್ಷಕರು ಸ್ಥಳದಲ್ಲೇ ಮೃತಪಟ್ಟ ಘಟನೆ ಪಾವಗಡ -ತುಮಕೂರು…

1 hour ago