Categories: ಉಡುಪಿ

ಕಾರ್ಕಳ: ಗ್ರಾಹಕರಿಗೆ ವಂಚನೆ ಜ್ಯವೆಲ್ಲಸ್೯ ಮಾಲಕನಿಗೆ ಶಿಕ್ಷೆ

ಕಾರ್ಕಳ: ನಗರದ ಮಾರ್ಕೆಟ್ ರಸ್ತೆಯಲ್ಲಿ ಶ್ರೀದುರ್ಗ ಜುವೆಲ್ಲರ್ಸ್ ವ್ಯವಹಾರ ನಡೆಸುತ್ತಾ ಗ್ರಾಹಕರಿಗೆ ವಂಚನೆಗೈದ ಆರೋಪಿ ರವೀಂದ್ರ ಆಚಾರ್ಯ ಯಾನೆ ರವೀಂದ್ರ ಎಂಬಾತನಿಗೆ ಕಾರ್ಕಳ ಪ್ರಧಾನ ಸಿವಿಲ್ ಮತ್ತು ಜೆ.ಎಂ.ಎಫ್.ಸಿ ನ್ಯಾಯಾಧೀಶೆ ಚೇತನಾ ಎಸ್.ಎಫ್. ಅವರು ಶಿಕ್ಷೆ ವಿಧಿಸಿ ಮಹತ್ವದ ತೀರ್ಪು ನೀಡಿದ್ದಾರೆ.

ಲೀಲಾವತಿ ಪೂಜಾರ್ತಿ ಇವರಿಂದ ೨೦೧೦ ನವಂಬರ್ ೦೪ರಂದು ೨೭.೫೦೦ ಗ್ರಾಂ ತೂಕದ ರೂ. ೫೫,೦೦೦ ಮೌಲ್ಯದ ಹಳೆಯ ಚಿನ್ನದ ಕರಿಮಣಿ ಸರವನ್ನು ಪಡೆದುಕೊಂಡು ಇದರಿಂದ ಹೊಸ ತಾಗಿ ಚಿನ್ನದ ಎರಡಿ ಎಳೆ ನೇಯ್ಗಿ ಪೀಸ್ ಗುಂಡು ಕರಿಮಣಿ ಸರವನ್ನು ಮಾಡಿಕೊಡುವುದಾಗಿ ಆರೋಪಿ ನಂಬಿಸಿದನು.

ಮೇರಿ ಡಿ’ಸೋಜಾ ಇವರಿಂದ ೨೦೧೦ ನವಂಬರ್ ೨೦ರಂದು ೧೧ ಗ್ರಾಂ ತೂಕದ ರೂ. ೨೨,೦೦೦ ರೂಪಾಯಿ ಮೌಲ್ಯದ ಹಳೆ ಒಂದು ಜೊತೆ ಚಿನ್ನದ ಜೆಡೆ ಮುತ್ತು ಬೆಂಡೋಲೆ ಚಿನ್ನದ ಆಭರಣವನ್ನು ಪಡೆದುಕೊಂಡು ಇದರಿಂದ ಹೊಸತಾಗಿ ಒಂದು ಜೊತೆ ಚಿನ್ನದ ಜೆಡೆ ಮುತ್ತು ಬೆಂಡೋಲೆ ಮತ್ತು ಚಿನ್ನದ ಉಂಗುರವನ್ನು ಮಾಡಿಕೊಡುವುದಾಗಿ ಇವರಲ್ಲೂ ಆರೋಪಿ ನಂಬಿಸಿದನು.
ಮೀನಾಕ್ಷಿ ಇವರಿಂದ ೨೦೧೧ ಫೆಬ್ರವರಿ ೦೫ರಂದು ೧೫.೭೫೦ ಗ್ರಾಂ ತೂಕದ ರೂ. ೩೧,೫೦೦ ಮೌಲ್ಯದ ಹಳೆಯ ಡಿಸ್ಕೋ ಚೈನನ್ನು ಪಡೆದುಕೊಂಡು ಅದರಿಂದ ಹೊಸ ಹೊಸ ಹವಳದ ಲಕ್ಷ್ಮೀ ಪೆಂಡೆಂಟ್ ಇರುವ ಕನಕ ಮಾಲೆಯನ್ನು ಮಾಡಿಕೊಡುವುದಾಗಿ ನಂಬಿಸಿದ ಆರೋಪಿಯೂ ಹಳೆ ಚಿನ್ನದ ಒಡವೆಗಳನ್ನು ಪಡೆದಿದ್ದನು.

ಗ್ರಾಹಕರಿಗೆ ಚಿನ್ನದ ಒಡವೆಗಳನ್ನು ಹಿಂದಿರುಗಿಸದೇ ಅವುಗಳನ್ನು ಆಪಾದಿತನು ಕರಗಿಸಿ ಬೇರೆಯವರಿಗೆ ಮಾರಾಟ ಮಾಡಿ ಪಡೆದ ಹಣವನ್ನು ತನ್ನ ಸ್ವಂತಕ್ಕೆ ಉಪಯೋಗಿಸಿಕೊಂಡು ಒಟ್ಟು ರೂ. ೧,೦೮,೫೦೦ ವಂಚಿಸಿ ನಂಬಿಕೆ ದ್ರೋಹವೆಸಗಿರುತ್ತಾನೆ.

ಈ ಬಗ್ಗೆ ಆರೋಪಿಯ ವಿರುದ್ದ ಭಾ.ದಂ.ಸA. ಕಲಂ.೪೦೯,೪೨೦ರ ರೀತ್ಯಾ ಶಿಕ್ಷಿಸಲ್ಪಡುವ ಅಪರಾಧಗಳಿಗೆ ಸಂಬಂಧಿಸಿ ಕಾರ್ಕಳ ನಗರ ಠಾಣೆಯ ಪೋಲೀಸ್ ಮುಖ್ಯ ಪೇದೆಯಾಗಿದ್ದ ಯಶವಂತ ಎಂ..ವಿ. ಪ್ರಥಮ ವರ್ತಮಾನ ತಯಾರಿಸಿ, ಪೊಲೀಸ್ ಉಪನಿರಕ್ಷಕರಾದಪ್ರಮೋದ್ ಕುಮಾರ್ ಪಿ. ಕಬ್ಬಾಳ್ ರಾಜ್ ಹೆಚ್.ಡಿ ಇವರು ಪ್ರಕರಣದ ತನಿಖೆ ನಡೆಸಿದ್ದರು.ಪೊಲೀಸ್ ಉಪನಿರೀಕ್ಷಕ ಇಮ್ರಾನ್ ತನಿಖೆ ನಡೆಸಿ ದೋಷಾರೋಪಣಾ ಪಟ್ಟಿಯನ್ನು ಆರೋಪಿಯ ವಿರುದ್ಧ ದಾಖಲಿಸಿದ್ದರು.

ಪ್ರಕರಣದ ವಿಚಾರಣೆಯನ್ನು ಕೈಗೊಂಡ ಕಾರ್ಕಳ ಪ್ರಧಾನ ಸಿವಿಲ್ ಮತ್ತು ಜೆ.ಎಂ.ಎಫ್.ಸಿ ನ್ಯಾಯಾಧೀಶೆ ಚೇತನಾ ಎಸ್.ಎಫ್. ಇವರು ಆರೋಪಿಯ ವಿರುದ್ಧದ ಪ್ರಕರಣವು ಸಾಭೀತು ಆಗಿದೆ ಎಂದು ಅಭಿಪ್ರಾಯಪಟ್ಟರು.

ಆರೋಪಿ ರವೀಂದ್ರ ಆಚಾರ್ಯ ಯಾನೆ ರವೀಂದ್ರ ಇವನನ್ನು ಅಪರಾಧಿ ಎಂದು ಘೋಷಿಸಿ ಕಲಂ.೪೦೯ ಭಾರತೀಯ ದಂಡ ಸಂಹಿತೆ ಅಡಿಯ ಅಪರಾಧಕ್ಕೆ ೩ವರ್ಷಗಳ  ಸಾದಾ ಸಜೆ ಮತ್ತು ರೂ.೫,೦೦೦ ದಂಡ, ದಂಡ ತೆರಲು ತಪ್ಪಿದ್ದಲ್ಲಿ ೧ ತಿಂಗಳ ಸಾದಾ ಸಜೆ. ಕಲಂ.೪೨೦ ಭಾರತೀಯ ದಂಡ ಸಂಹಿತೆ ಅಡಿಯ ಅಪರಾಧಕ್ಕೆ ಸಾದಾ ಸಜೆ ಮತ್ತು ರೂ.೫,೦೦೦ ದಂಡ, ದಂಡ ತೆರಲು ತಪ್ಪಿದ್ದಲ್ಲಿ ೧ ತಿಂಗಳ ಸಾದಾ ಶಿಕ್ಷೆಯನ್ನು ಅನುಭವಿಸುವಂತೆ ತೀರ್ಪು ನೀಡಿ ಆದೇಶ ಹೊರಡಿಸಿದ್ದಾರೆ.

ಪ್ರಕರಣದಲ್ಲಿ ಸರಕಾರದ ಪರ ಸಹಾಯಕ ಸರಕಾರಿ ಅಭಿಯೋಜಕಿ ಶೋಭಾ ಮಹಾದೇವ ನಾಯ್ಕ ಪ್ರಕರಣದ ಸಾಕ್ಷಿದಾರರ ವಿಚಾರಣೆ ನಡೆಸಿ, ವಾದ ಮಂಡಿಸಿರುತ್ತಾರೆ.

Sneha Gowda

Recent Posts

ದ.ಕ ಬರ ಪರಿಸ್ಥಿತಿ ಹಿನ್ನಲೆ ನೀರು ಪೂರೈಕೆಗೆ ಜಿಲ್ಲಾಡಳಿತ ಮುಂಜಾಗೃತ ಕ್ರಮ

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬರ ಪರಿಸ್ಥಿತಿ ಹಿನ್ನಲೆಯಲ್ಲಿ ಸಾರ್ವಜನಿಕರಿಗರ ಕುಡಿಯುವ ನೀರನ್ನು ಪೂರೈಸಲು ಜಿಲ್ಲಾಡಳಿತದಿಂದ ಈಗಾಗಲೇ ಸಾಕಷ್ಟು ಕ್ರಮ ಕೈಗೊಳ್ಳಲಾಗುತ್ತಿದೆ.…

45 seconds ago

ಕಲ್ಲಡ್ಕದಲ್ಲಿ ಪ್ರಥಮ ಮಳೆಗೆ ಹದಗೆಟ್ಟ ರಾಷ್ಟ್ರೀಯ ಹೆದ್ದಾರಿ : ಸಂಚಾರ ಅಸ್ತವ್ಯಸ್ತ

ನಿನ್ನೆ ಸುರಿದ ಪ್ರಥಮ ಮಳೆಗೆ ಕಲ್ಲಡ್ಕದಲ್ಲಿ ರಾಷ್ಟ್ರೀಯ ಹೆದ್ದಾರಿ ಸಂಪೂರ್ಣ ಹದಗೆಟ್ಟಿದ್ದು ವಾಹನ ಸಂಚಾರಕ್ಕೆ ತೊಡುಕುಂಟಾಗಿದೆ.

6 mins ago

ಡಾಲರ್‌ ಮೌಲ್ಯದ ಚಿನ್ನ ದರೋಡೆ ಪ್ರಕರಣ: ಭಾರತೀಯ ಮೂಲದ ವ್ಯಕ್ತಿ ಬಂಧನ

ಕೆನಡಾದಲ್ಲಿ ಬಹುಕೋಟಿ ಡಾಲರ್‌ ಮೌಲ್ಯದ ಚಿನ್ನ ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಭಾರತೀಯ ಮೂಲದ ವ್ಯಕ್ತಿಯನ್ನು ಟೊರೊಂಟೋ ವಿಮಾನ ನಿಲ್ದಾಣದಲ್ಲಿ ಅರೆಸ್ಟ್‌…

19 mins ago

ಸಿಬಿಎಸ್‌ಇ 12ನೇ ತರಗತಿ ಫಲಿತಾಂಶ ಪ್ರಕಟ : ಆನ್‌ಲೈನ್‌ನಲ್ಲಿ ಹೀಗೆ ನೋಡಿ

ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್ (ಸಿಬಿಎಸ್‌ಇ) 12ನೇ ತರಗತಿ ಫಲಿತಾಂಶ ಇಂದು ಪ್ರಕಟವಾಗಿದೆ. ಈ ವರ್ಷದ ತೇರ್ಗಡೆ ಪ್ರಮಾಣ…

28 mins ago

ಪತ್ರಿಕಾ ವಿತರಕ ರೈಲಿಗೆ ಸಿಲುಕಿ ಆತ್ಮಹತ್ಯೆ

ರೈಲಿಗೆ ಸಿಲುಕಿ ಯುವಕ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಂಜನಗೂಡು ತಾಲೂಕಿನ ಬಸವನಪುರ ಗ್ರಾಮದ ಬಳಿ ನಡೆದಿದೆ.

42 mins ago

ಮಲೆ ಮಾದಪ್ಪನಿಗೆ ಬೆಳ್ಳಿ ಆರತಿ ತಟ್ಟೆ ನೀಡಿದ ದಾನಿ : ಹೇಗಿದೆ ಗೊತ್ತಾ?

ಚಾಮರಾಜನಗರ ಜಿಲ್ಲೆ ಹನೂರು ತಾಲೂಕಿನಲ್ಲಿರುವ ಪವಾಡ ಪುರುಷ ಶ್ರೀ ಮಲೆ ಮಹದೇಶ್ವರನಿಗೆ ಬೆಂಗಳೂರಿನ ನಾಗಮಣಿ.ಎಂ ಮತ್ತು ಕುಟುಂಬ 01 ಕೆಜಿ…

51 mins ago