Categories: ಉಡುಪಿ

ಕಾರ್ಕಳ: ಉತ್ಸವಗಳ ಮೂಲಕ ಅರ್ಥಿಕ ಚಟುವಟಿಕೆಗಳನ್ನು ಹೆಚ್ಚಿಸಲು ಸಹಕಾರಿಯಾಗಿದೆ – ವಿ ಸುನೀಲ್ ಕುಮಾರ್

ಕಾರ್ಕಳ: ಪರಶುರಾಮ ಥೀಮ್ ಪಾರ್ಕ್ ನ ಸಮಾರೊರೋಪ ಹಾಗುಉಡುಪಿ ಜಿಲ್ಲಾ ರಜತಮಹೋತ್ಸವದ ಸಮಾರೋಪ ಏಕಕಾಲದಲ್ಲಿಯೆ ನಡೆಯುತ್ತಿರುವುದು ಖುಷಿಯ ವಿಚಾರವಾಗಿದೆ ಎಂದು ಇಂಧನ ಹಾಗೂ ಕನ್ನಡ ಸಂಸ್ಕೃತಿ ಖಾತೆ ಸಚಿವ ವಿ ಸುನೀಲ್ ಕುಮಾರ್ ಹೇಳಿದರು.

ಅವರು ಪರಶುರಾಮ ಥೀಂ ಪಾರ್ಕ್ ನ ಸಮಾರೋಪ ಸಮಾರಂಭ ಸಭೆಯಲ್ಲಿ ಅದ್ಯಕ್ಷತೆ ವಹಿಸಿ ಮಾತನಾಡಿದರು., ಉತ್ಸವಗಳ ಮೂಲಕ ಅರ್ಥಿಕ ಚಟುವಟಿಕೆಗಳನ್ನು ಹೆಚ್ಚಿಸಲು ಸಹಕಾರಿ ಯಾಗಿದೆ. ರಾಜ್ಯ ದಲ್ಲಿ ಕಾರ್ಕಳವೇ ಬ್ರಾಂಡ್ ನಿರ್ಮಾಣ ವಾಗಬೇಕು . ಕಾರ್ಕಳ ಉತ್ಸಾಹ ಮೂಲಕ ರಾಜ್ಯದಲ್ಲೆಲ್ಲ ಉತ್ಸಾಹ ವಾಗುವಂತೆ ಮಾಡಿದೆ ಎಂದರು.

ಕ್ಷೇತ್ರದ ಮೂಲ ಸೌಕರ್ಯಗಳನ್ನು ಒದಗಿಸುವ ಕೆಲಸಗಳನ್ನು ನಡೆಯುತ್ತಿದೆ. ವಾರಾಹಿ ಯೋಜನೆ ಮೂಲಕ 46000 ಮನೆಗಳಿಗೆ ಕುಡಿಯುವ ನೀರು ತರುವ ಯೋಜನೆ ಮುಂದಿನ‌ಎರಡು ವರ್ಷಗಳಲ್ಲಿ ಪೂರ್ಣಗೊಳ್ಳಲಿದೆ. ಕಾರ್ಕಳ ಸಾಂಸ್ಕೃತಿಕ ,ಧಾರ್ಮಿಕವಾಗಿ ,‌ಶೈಕ್ಷಣಿಕವಾಗಿ ಎಲ್ಲಾ ಕ್ಷೇತ್ರಗಳಲ್ಲಿ ಅಭಿವೃದ್ಧಿ ಹೊಂದಿದೆ . ಕಾರ್ಕಳ ತಾಲೂಕಿನ ಮಹಿಳ ಕಾರ್ಮಿಕರಿಗೆ ಅನುಕೂಲ ವಾಗುವಂತೆ ಜವಳಿ ಪಾರ್ಕ್ ನಿರ್ಮಾಣವಾಗುತ್ತಿದೆ. ಯಾವುದೇ ಟೀಕೆ ಗಳಿಗೆ ಒಳಪಡದೆ ರಾಜಕೀಯ ಮಾಡದೆ ಪ್ರವಾಸೋದ್ಯಮ ಕ್ಕೆ ಪ್ರೋತ್ಸಾಹ ನೀಡುತಿದ್ದೇವೆ ಎಂದರು.

ಎಂ ಎಲ್ ಸಿ ಮಂಜುನಾಥ್ ಭಂಢಾರಿ ಪರಶುರಾಮ ರಾಮನ ಸೃಷ್ಟಿ ಯೊಳಗೆ ಪರಶುರಾಮನ ಮೂರ್ತಿಯನ್ನು ಸೃಷ್ಟಿಸುವ ಮೂಲಕ ಇತಿಹಾಸ ನಿರ್ಮಿಸಿದ್ದಾರೆ ಎಂದರು.

ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಮಾತನಾಡಿ ಸುನೀಲ್ ಕುಮಾರ್ ಅವರನ್ನು ಅಧುನಿಕ ಪರಶುರಾಮ ಬಣ್ಣಿಸಿದರು. ಮುಂದಿನ ಚುನಾವಣೆಯಲ್ಲಿ ಸಚಿವ ಸುನೀಲ್ ಕುಮಾರ್ ಅವರನ್ನು ಗೆಲ್ಲಿಸಿ ಎಂದು ಸಾರ್ವಜನಿಕರಲ್ಲಿ ಮನವಿ ಮಾಡಿದರು.

ಗೆಸೆಟಿಯರ್ ಸಂಪಾದಕಿ ಎ ರಾಜಮ್ಮ ಚೌಡರೆಡ್ಡಿ ಗೆಸೆಟಿಯರ್ ಮಾಹಿತಿ ನೀಡಿದರು. ಉಡುಪಿ ಜಿಲ್ಲಾ ಧಿಕಾರಿ ಕೂರ್ಮಾರಾವ್, ಮುನಿಯಾಲು ಉದಯ ಕುಮಾರ್ ಶೆಟ್ಟಿ ಮಾತನಾಡಿದರು.

ಗೇರು ನಿಗಮದ ಅಧ್ಯಕ್ಷ ಮಣಿರಾಜ ಶೆಟ್ಟಿ ಜಿಲ್ಲಾ ಎಸ್ಪಿ ಅಕ್ಷಯ್ ಮಚೀಂದ್ರಾ , ಉದ್ಯಮಿಗಳಾದ ಎಸ್ ಹುರ್ಲಾಡಿ ರಘುವೀರಶೆಟ್ಟಿ, , ಸುಧೀರ್ ಹೆಗ್ಡೆ ಬೈಲೂರು , ತೆಳ್ಳಾರು ಗಿರೀಶ್ ಶೆಟ್ಟಿ ಉಪಸ್ಥಿತರಿದ್ದರು .

ಇದೆ ಸಂದರ್ಭದಲ್ಲಿ ನಿರ್ಮಿತಿ ಕೇಂದ್ರದ ಸುಪ್ರಿತ್ ರಾವ್ , ದೀಕ್ಷಿತ್, ಸಚಿನ್ ಕುಮಾರ್, ಗೌತಮ್, ಖ್ಯಾತ ವಿನ್ಯಾಸಕಾರ ಪುರುಷೋತ್ತಮ ಅಡ್ವೆ ,  ದೇವಾನಂದ , ಅನಿಲ್ , ಸದಾಶಿವ ಆಚಾರ್ , ಮೂರ್ತಿ ನಿಮಾರ್ತೃ ಕೃಷ್ಣ ನಾಯ್ಕ್ ತಂಡ ‌ಸೇರಿದಂತೆ ಹಲವರನ್ನು ಸನ್ಮಾನಿಸಲಾಯಿತು. ರಮ್ಯ ಸುಧೀಂದ್ರ ಪ್ರಾರ್ಥಿಸಿದರು, ನವೀನ್ ನಾಯಕ್ ಸ್ವಾಗತಿಸಿದರು ಸದಾನಂದ ಸಾಲಿಯಾನ್ ದನ್ಯವಾದ ವಿತ್ತರು.

Ashika S

Recent Posts

ರೇವಣ್ಣ ಲೈಂಗಿಕ ಹಗರಣ: ಮಹಿಳಾ ಕಾಂಗ್ರೆಸ್ ನಿಂದ ಪೊರಕೆ ಹಿಡಿದು ಪ್ರತಿಭಟನೆ

ಪ್ರಜ್ವಲ್ ರೇವಣ್ಣ ಲೈಂಗಿಕ ಹಗರಣ ಖಂಡಿಸಿ ಹಾಗೂ ಪ್ರಜ್ವಲ್ ರೇವಣ್ಣರನ್ನು ಕೂಡಲೇ ಬಂಧಿಸುವಂತೆ ಒತ್ತಾಯಿಸಿ ಉಡುಪಿ ಜಿಲ್ಲಾ ಮಹಿಳಾ ಕಾಂಗ್ರೆಸ್…

10 seconds ago

ಎಸ್ಎಸ್​ಎಲ್​ಸಿ ಫಲಿತಾಂಶ: ಉಡುಪಿ ಪ್ರಥಮ, ದಕ್ಷಿಣ ಕನ್ನಡ ದ್ವಿತೀಯ

ಇಂದು 2023-24 ನೇ ಸಾಲಿನ SSLC ಪರೀಕ್ಷೆ ಫಲಿತಾಂಶ ಹೊರಬಿದ್ದಿದೆ. ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ…

13 mins ago

ಸುಡುಮದ್ದು ತಯಾರಿಕಾ ಘಟಕದಲ್ಲಿ ಸ್ಫೋಟ : ಇಬ್ಬರು ಮಹಿಳೆಯರಿಗೆ ಗಾಯ

ಸುಡುಮದ್ದು ತಯಾರಿಕಾ ಘಟಕದಲ್ಲಿ ಸ್ಫೋಟಗೊಂಡ ಪರಿಣಾಮ ಇಬ್ಬರು ಮಹಿಳೆಯರು ಗಾಯಗೊಂಡ ಘಟನೆ ಕಾರ್ಕಳ ತಾಲೂಕಿನ ಕಸಬಾ ಗ್ರಾಮದ ಹಿಮ್ಮುಂಜೆ ಬಳಿಯ…

16 mins ago

ಮಕ್ಕಳನ್ನು ಕೊಂದು ಮಹಿಳೆ ಆತ್ಮಹತ್ಯೆ : ಡೆತ್‌ನೋಟು ಪತ್ತೆ

ತನ್ನ ಮಕ್ಕಳಿಬ್ಬರನ್ನು ಕೊಂದು ತಾನು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.ಸಾವಿಗೆ ಮುನ್ನ ವಿಡಿಯೊ ಮೆಸೇಜ್‌ ಮಾಡಿರುವ ಮಹಿಳೆ, ಪತಿಯ ಕಿರುಕುಳದಿಂದ…

27 mins ago

ಎಸ್​ಎಸ್​ಎಲ್​ಸಿ ಪರೀಕ್ಷೆ ಫಲಿತಾಂಶ ಪ್ರಕಟ; ಇಲ್ಲಿ ಫಲಿತಾಂಶ ವೀಕ್ಷಿಸಿ

2023-24ನೇ ಸಾಲಿನ ಎಸ್​ಎಸ್​ಎಲ್​ಸಿ ಪರೀಕ್ಷೆ ಫಲಿತಾಂಶವು ಇಂದು ಪ್ರಕಟಗೊಂಡಿದೆ. ಕರ್ನಾಟಕದ ಒಟ್ಟು 2,750 ಪರೀಕ್ಷಾ ಕೇಂದ್ರಗಳಲ್ಲಿ ವಿದ್ಯಾರ್ಥಿಗಳು ಈ ಸಲದ…

34 mins ago

ಪ್ರಸಕ್ತ ಸಾಲಿನಿಂದ 3 ವರ್ಷ ಪದವಿ : ಉನ್ನತ ಶಿಕ್ಷಣ ಇಲಾಖೆ

ರಾಜ್ಯ ಶಿಕ್ಷಣ ಆಯೋಗದ ಮಧ್ಯಂತರ ವರದಿ ಅನುಷ್ಠಾನಕ್ಕೆ ಉನ್ನತ ಶಿಕ್ಷಣ ಇಲಾಖೆ ಆದೇಶ ಹೊರಡಿಸಿದ್ದು, ಆಯೋಗದ ಶಿಫಾರಿಸಿನಂತೆ 2024-25ನೇ ಸಾಲಿನ…

51 mins ago