Categories: ಉಡುಪಿ

ಕಾರ್ಕಳ: ಉಮಿಕಲ್ ಬೆಟ್ಟಾದ ಮೇಲೆ 33 ಅಡಿ ಎತ್ತರದ ಪರಶುರಾಮನ ಕಂಚಿನ ಪುತ್ಥಳಿ ಅನಾವರಣ

ಕಾರ್ಕಳ: ಪರಶುರಾಮ ಸೃಷ್ಟಿಯ ಮೂಲಕ ಸಾರ್ಥಕತೆ ಇದೆ. ಇಲ್ಲಿ ಭಾಗವಹಿಸಿದ ನಾವು ಭಾಗ್ಯವಂತರು ಎಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಹೇಳಿದರು. ಅವರು ಕಾರ್ಕಳ ತಾಲೂಕಿನ ಬೈಲೂರಿನಲ್ಲಿ ಉಮಿಕಲ್ ಬೆಟ್ಟಾದ ಮೇಲೆ 33 ಅಡಿ ಎತ್ತರದ ಕಂಚಿನ ಪ್ರತಿಮೆಯನ್ನು ಅನಾವರಣಗೊಳಿಸಿ‌ ಮಾತನಾಡಿದರು .

ಪರಶುರಾಮನ ಪುತ್ಥಳಿ ನಿರ್ಮಾಣ ಮೂಲಕ ಪುರಾಣಕ್ಕೆ ಹೊಸದೊಂದು ಕುರುಹು ಸಿಕ್ಕಿದೆ ಅಮೂಲಕ ಐತಿಹಾಸಿಕ ದಿನವಾಗಿ ಮೂಡಿಬಂದಿದೆ ಎಂದು ಸಿ ಎಂ ಬೊಮ್ಮಾಯಿ ಬಣ್ಣಿಸಿದರು . ಸಿಕ್ಕ ಅವಕಾಶವನ್ನು ಬಳಸಿಕೊಂಡು ಸಾಧಿಸುವುದೆ ಸಾಧಕನ ಕೆಲಸ ಎಂದು ಸಚಿವ ಸುನೀಲ್ ಕುಮಾರ್ ಅವರನ್ನು ಪರಶುರಾಮನ ಪ್ರತಿಮೆಗೆ ಮೆಚ್ಚುಗೆ ವ್ಯಕ್ತಪಡಿಸಿದರು .

ನಾನು ಪರಶುರಾಮನ ಭಕ್ತನಾಗಿ ಬಂದಿದ್ದೇನೆ : ನಾನು ಉದ್ಘಾಟನೆ ಗೆ ಬಂದಿಲ್ಲ ಪರಶುರಾಮ ನ ಭಕ್ತನಾಗಿ ಬಂದಿದ್ದೇನೆ . ನನ್ನ ಮನೆಯ ಅರಾದ್ಯ ದೇವಿ ಎಲ್ಲಮ್ಮ ದೇವಿಯ ಆರಾಧಕ ನಾನು , ಸವದತ್ತಿ ಯಲ್ಲಿ ಪರಸುರಾಮ ದೇವಾಲಯವಿದೆ ಅಲ್ಲಿಯ ಭಕ್ತನು ನಾನು ಈಗಾಗಲೇ ಜೀರ್ಣೋದ್ಧಾರ ಮಾಡಲು ಶಿಲಾನ್ಯಾಸ ಮಾಡಿ ಬಂದಿದ್ದೇನೆ . ಪ್ರತಿಮೆಯನ್ನು ಗಮನಿಸಿ ಪರಶುರಾಮ ಇಲ್ಲಿಂದಲೆ ಕೊಡಲಿ ಬಿಸಾಡಿದ್ದೆನೊ ಎಂದು ಭಾಸವಾಗುತ್ತಿದೆ ಎಂದು ಮುಖ್ಯಮಂತ್ರಿ ಹೇಳಿದರು.

ಪ್ರವಾಸೋದ್ಯಮಕ್ಕೆ ಉತ್ತೇಜನ : ಪರಶುರಾಮ ಥೀಮ್ ಪಾರ್ಕ್ ನಿರ್ಮಾಣದಿಂದ ಪ್ರವಾಸೋದ್ಯಮಕ್ಕೆ ಹೆಚ್ಚಿನ ಒತ್ತು ಸಿಗಲಿದೆ ಅ‌ಮೂಲಕ ಸ್ಥಳಿಯ ವಾಗಿ ಅರ್ಥಿಕ ಬಲವರ್ಧನೆಗೆ ಸಾಕ್ಷಿಯಾಗಲಿದೆ ಎಂದು ಹೇಳಿದರು.

ಕರಾವಳಿ ಭಾಗದಲ್ಲಿ ಪ್ರವಾಸೋದ್ಯಮ ಕ್ಕೆ ವಿಫುಲ ಅವಕಾಶಗಳಿವೆ . ಅದಕ್ಕಾಗಿ ಹಲವಾರು ಯೋಜನೆಗಳನ್ನು ರೂಪಿಸಲಾಗುತ್ತಿದೆ . ಯಾತ್ರಿಕರಿಗೆ ಅನುಕೂಲ ಕಲ್ಪಿಸಲು ದೇವಾಲಯಗಳ ಮೂಲಕ ಪ್ರವಾಸೋದ್ಯಮ, ಕರಾವಳಿಯ ಪ್ರವಾಸೋದ್ಯಮ , ಸಾಂಸ್ಕೃತಿಕ ಪ್ರವಾಸೋದ್ಯಮಕ್ಕೆ ಮಾಸ್ಟರ್ ಪ್ಲಾನ್ ಮಾಡುವ ಮೂಲಕ ಆರ್ಥಿಕವಾಗಿ ಬಲಪಡಿಸಲು ಸರಕಾರ ಶಕ್ತವಾಗಿದೆ ಎಂದರು.

ತುಳುನಾಡಿನ ಜನರು ಪರಿಶ್ರಮಿಗಳು , ಕೃಷಿ ಮೀನುಗಾರಿಕೆ ,ಸಣ್ಣ ಪುಟ್ಟ ವ್ಯವಹಾರಗಳಲ್ಲಿ ತೊಡಗಿಕೊಳ್ಳುತಿದ್ದಾರೆ . ಅರ್ಥಿಕತೆ ಹೆಚ್ಚಿಸಬೇಕಾದರೆ ಕೈಗಾರಿಕರಣದ ಹಾಗೂ ಅದಕ್ಕೆ ರೈಲು ,ವಿಮಾನ ನಿಲ್ದಾಣಗಳು , ಬಹುಮುಖ್ಯ ರಸ್ತೆಗಳು‌, ಮೂಲ ಸೌಕರ್ಯಗಳು ಬಹುಮುಖ್ಯ ಪಾತ್ರವಹಿಸುತ್ತವೆ ಎಂದರು .

ಕರಾವಳಿ ಹೂಡಿಕೆಗೆ ಒಂದು ಲಕ್ಷ ಕೋಟಿ ಅನುದಾನ : ಕರಾವಳಿಯಲ್ಲಿ ನವೀಕರಿಸಬಹುದಾದ ಇಂಧನವಲಯದಲ್ಲಿ ಹಾಗು ಹೂಡಿಕೆಗಾಗಿ‌ ಒಂದು ವರೆ ಲಕ್ಷಕೋಟಿ ರೂಪಾಯಿ ಬಂಡವಾಳ ಹರಿದು ಬರುತ್ತಿದೆ ಅದನ್ನು ಸಂಪೂರ್ಣ ವಾಗಿ ವಿನಿಯೋಗಿಸುವ ಮೂಲಕ ಕರಾವಳಿಯಲ್ಲಿ ಆರ್ಥಿಕವಾಗಿ ಬಲಪಡಿಸಬಹುದಾಗಿದೆ ಎಂದು ಬೊಮ್ಮಾಯಿ ಹೇಳಿದರು.

ಸಚಿವ ಇಂಧನ ಹಾಗೂ ಕನ್ನಡ ಸಂಸ್ಕೃತಿ ಸಚಿವ ಸುನೀಲ್ ಕುಮಾರ್ ಪ್ರಸ್ತಾವಿಕ ಮಾತನಾಡಿದರು. ಕೇಂದ್ರ ಸಚಿವೆ ಶೋಭ ಕರಂದ್ಲಾಜೆ, ಸಚಿವ ಇಂಧನ ಹಾಗೂ ಕನ್ನಡ ಸಂಸ್ಕೃತಿ ಸಚಿವ ಸುನೀಲ್ ಕುಮಾರ್ , ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ಅಂಗಾರ, ಗೇರು ನಿಗಮ ಅದ್ಯಕ್ಷ ಮಣಿರಾಜ್ ಶೆಟ್ಟಿ , ಎಂಎಲ್‌ಸಿ ರವಿ ಕುಮಾರ್, ಉದಯ್ ಕುಮಾರ್ ಶೆಟ್ಟಿ, ಶಾಸಕ ಲಾಲಜಿ ಮೆಂಡನ್ ,ಕಾಂತಾರ ರಿಷಬ್ ಶೆಟ್ಟಿ , ಶಾಸಕರಾದ ರಘುಪತಿ ಭಟ್, ಕರಾವಳಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಮಟ್ಟಾರು ರತ್ನಾಕರ್ ಹೆಗ್ಡೆ , ಕರಾವಳಿ ಪ್ರಾಧಿಕಾರದ ಅಧ್ಯಕ್ಷ ಚೆನ್ನಪ್ಪ ಶೆಟ್ಟಿ , ಜಿಪಂ ಕಾರ್ಯನಿರ್ವಾಹಕ ಅಧಿಕಾರಿ ಪ್ರಸನ್ನ, ಉಡುಪಿ ಜಿಲ್ಲಾಧಿಕಾರಿ ಕೂರ್ಮಾರಾವ್ , ಎಸ್ ಪಿ ಅಕ್ಷಯ್ ಹಾಕೆ ಮಚಿಂದ್ರ ಉಪಸ್ಥಿತರಿದ್ದರು. ಇದೆ ಸಂದರ್ಭದಲ್ಲಿ ಮುಖ್ಯಮಂತ್ರಿಗಳಿಗೆ ಜಿಲ್ಲಾಡಳಿತ ವತಿಯಿಂದ ಸನ್ಮಾನಿಸಲಾಯಿತು. ಪ್ರಾಂಶುಪಾಲ ಮಂಜುನಾಥ್ ಕೋಟ್ಯಾನ್ ಕಾರ್ಯಕ್ರಮ ನಿರೂಪಿಸಿದರು. ಜಿಲ್ಲಾಧಿಕಾರಿ ಕೂರ್ಮಾರಾವ್ ದನ್ಯವಾದವಿತ್ತರು.

Sneha Gowda

Recent Posts

ಹೆಚ್ಚಿನ ಫೀಸ್ ತೆಗೆದುಕೊಂಡರೆ ಖಾಸಗಿ ಶಾಲೆಗಳ ವಿರುದ್ಧ ಕ್ರಮ : ಬಂಗಾರಪ್ಪ

ರಾಜ್ಯದಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಫಲಿತಾಂಶ ಪ್ರಕಟವಾಗಿದ್ದು ಪೋಷಕರು ತಮ್ಮ ಮಕ್ಕಳಿಗೆ ಮುಂದಿನ ವಿದ್ಯಾಭ್ಯಸದ ಬಗ್ಗೆ ಈಗಾಗಲೇ ಯೋಚಿಸುತ್ತಿದ್ದಾರೆ

1 min ago

ವಿದ್ಯಾರ್ಥಿನಿಯ ಹತ್ಯೆ ಪ್ರಕರಣ: ಮರದ ಮೇಲೆ ಬಾಲಕಿಯ ರುಂಡ ಪತ್ತೆ

ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿನಿಯ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೊನೆಗೂ ಬಾಲಕಿ ರುಂಡ ಪತ್ತೆಯಾಗಿದೆ

7 mins ago

ಸೆಕೆಂಡ್ ​ಹ್ಯಾಂಡ್ ಕಾರು ವ್ಯಾಪಾರಿ ಮೇಲೆ ಹಲ್ಲೆ: ಆರೋಪಿಗಳ ಬಂಧನ

ಹಣಕ್ಕೆ ಬೇಡಿಕೆ ಇಟ್ಟು ನಗರದ ಹಾಗರಗಾ ಕ್ರಾಸ್ ಬಳಿಯ ಮನೆಯೊಂದರಲ್ಲಿ  ಸೆಕೆಂಡ್​ ಹ್ಯಾಂಡ್ ಕಾರು ವ್ಯಾಪಾರಿಯನ್ನು ಬೆತ್ತಲೆ ಮಾಡಿ ಹಲ್ಲೆ…

24 mins ago

ಹೈಕೋರ್ಟ್ ಅಡ್ವೋಕೇಟ್ ಚೈತ್ರಾ ಬಿ.ಗೌಡ ನೇಣು ಬಿಗಿದ ಸ್ಥಿತಿಯಲ್ಲಿ ಮೃತದೇಹ ಪತ್ತೆ

ಹೈಕೋರ್ಟ್ ಅಡ್ವೋಕೇಟ್ ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ಸಂಜಯನಗರ‌ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

24 mins ago

ಘಟ್ಟದ ಮೇಲಿನ ಶಾಸಕರನ್ನ ಅವಮಾನಿಸಿದ ಕರಾವಳಿಯ ಶಾಸಕ

ಘಟ್ಟದ ಕಡೆಗಳಲ್ಲಿ ರಸ್ತೆಗಳಿಗೆ ಎರಡು ಹಂಪ್ ಗಳನ್ನ ಹಾಕಿದ್ರೆ ಅಚೀವ್ ಮೆಂಟ್ ಅಂತೆ' ಘಟ್ಟದ ಮೇಲೆ‌ ಶಾಸಕರ ಅಚೀವ್ ಮೆಂಟ್…

34 mins ago

ಮೋದಿ ಪ್ರಧಾನ ಮಂತ್ರಿ ಅಲ್ಲ, ರಾಜ ಎಂದ ರಾಹುಲ್

ನಾನು ನಿಜವನ್ನೇ ಹೇಳುತ್ತಿದ್ದೇನೆ ನರೇಂದ್ರ ಮೋದಿಯವರು ಪ್ರಧಾನ ಮಂತ್ರಿ ಅಲ್ಲ ಬದಲಾಗಿ ಅವರು ರಾಜರು ಎಂದು ರಾಹುಲ್‌ ಗಾಂಧಿ ಹೇಳಿದರು.

38 mins ago