Categories: ಉಡುಪಿ

ಕಾಪು: ಕೈಲಾಗದ ಶತ್ರು, ಅವರ ಕೊನೆಯ ಅಸ್ತ್ರವೇ ಅಪಪ್ರಚಾರ- ಕಿರಣ್ ಅಳ್ವ

ಕಾಪು: ಕರ್ನಾಟಕ ವಿಧಾನಸಭಾ ಚುನಾವಣೆಗೆ ಕಾಪು ಕ್ಷೇತ್ರ ಬಿಜೆಪಿ ಅಭ್ಯರ್ಥಿ ಗುರ್ಮೆ ಸುರೇಶ್ ಶೆಟ್ಟಿಯವರು ಸೋಮವಾರ ನಾಮಪತ್ರ ಸಲ್ಲಿಸಿದ್ದು, ಸಾವಿರಾರು ಸಂಖ್ಯೆಯಲ್ಲಿ ಹರಿದು ಬಂದ ಜನಸ್ತೋಮವನ್ನು ಕಂಡು ಬೆಚ್ಚಿ ಬಿದ್ದ ಕಾಂಗ್ರೆಸ್ ಅಭ್ಯರ್ಥಿ ವಿನಯ್ ಕುಮಾರ್ ಸೊರಕೆ, ಚುನಾವಣೆಗೂ ಮುನ್ನವೇ ಅಪಪ್ರಚಾರದ ಮೂಲಕ ಕೀಳುಮಟ್ಟದ ರಾಜಕಾರಣ ಮಾಡುತ್ತಿದ್ದಾರೆ ಎಂದು ಕಾಪು ಬಿಜೆಪಿ ಮಾಧ್ಯಮ ವಿಭಾಗದ ಪ್ರಮುಖ್ ಕಿರಣ್ ಅಳ್ವ ವ್ಯಂಗ್ಯವಾಡಿದ್ದಾರೆ.

ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ ಅಣ್ಣಾಮಲೈಯವರು ಹೆಲಿಕ್ಯಾಫ್ಟರ್ ನಲ್ಲಿ ಹಣ ತೆಗೆದುಕೊಂಡು ಬಂದು ಪ್ರಚಾರ ಮಾಡುತ್ತಿದ್ದಾರೆ ಎಂಬ ಸೊರಕೆಯವರ ವಾದ ಸತ್ಯಕ್ಕೆ ದೂರವಾದುದು. ಇಂತಹ ಹಸಿ ಹಸಿ ಸುಳ್ಳುಗಳನ್ನೇ ಸತ್ಯ ಎನ್ನುವಂತೆ ಬಿಂಬಿಸುತ್ತಾ ಬಂದಿರುವ ಕಾಂಗ್ರೆಸ್ ಇಂದು ಅವಸಾನದ ಅಂಚಿಗೆ ಬಂದು ತಲುಪಿದೆ. ಇನ್ನಾದರು ಕಾಂಗ್ರೆಸಿಗರು ಪಾಠ ಕಲಿಯಬೇಕು, ಇಲ್ಲದಿದ್ದರೆ ಜನರೇ ಇವರಿಗೆ ತಕ್ಕ ಪಾಠ ಕಲಿಸುತ್ತಾರೆ.

ಕಾಪು ವಿಧಾನಸಭಾ ಕ್ಷೇತ್ರದಲ್ಲಿ 3 ಬಾರಿ ಶಾಸಕರಾಗಿ ಅನೇಕ ಅಭಿವೃದ್ಧಿ ಕೆಲಸಗಳನ್ನು ಮಾಡಿರುವ ಶಾಸಕ ಲಾಲಾಜಿ ಮೆಂಡನ್ ರವರು, ಈ ಬಾರಿ ಬರೋಬ್ಬರಿ 3,000 ಕೋ.ರೂಪಾಯಿಗೂ ಮಿಕ್ಕಿ ಅನುದಾನವನ್ನು ತಂದು ಸರ್ವಾಂಗೀಣ ಅಭಿವೃದ್ಧಿ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಅವರ ಅಭಿವೃದ್ಧಿ ಕಾರ್ಯಗಳು ಗುರ್ಮೆ ಸುರೇಶ್ ಶೆಟ್ಟರ ಗೆಲುವಿಗೆ ಶ್ರೀರಕ್ಷೆಯಾಗಲಿದೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Gayathri SG

Recent Posts

ನಾಡ ಜನರ ಬದುಕು ನಂದಾದೀಪವಾಗಲು ನಂದಿ ಬಸವೇಶ್ವರ ತೊಟ್ಟಿಲು ತೂಗಿದ ಗಡಿನಾಡ ನಾರಿಯರು

ಕರ್ನಾಟಕದ ಕಟ್ಟಕಡೆಯ ಗ್ರಾಮವಾದ ಗಡಿನಾಡ ಗ್ರಾಮ ಬಳೂರ್ಗಿ ಗ್ರಾಮ ದೇವ ನಂದಿ ಬಸವೇಶ್ವರರ ತೊಟ್ಟಿಲು ತೂಗುವ ಕಾರ್ಯಕ್ರಮ ಅದ್ದೂರಿಯಾಗಿ ನಡೆಯಿತು.…

17 mins ago

ದುಷ್ಕರ್ಮಿಗಳಿಂದ ಮಾರಕಾಸ್ತ್ರಗಳಿಂದ ಕೊಚ್ಚಿ ಯುವಕನ ಹತ್ಯೆ

ಯುವಕನೊಬ್ಬನಿಗೆ ಮಾರಕಾಸ್ತ್ರಗಳಿಂದ ಕೊಚ್ಚಿ ಹತ್ಯೆ ಮಾಡಿರುವ ಘಟನೆ ತಾಲೂಕಿನ ಮಣ್ಣೂರ್ ಗ್ರಾಮದ ಹೊರವಲಯದಲ್ಲಿ ನಡೆದಿದೆ.

35 mins ago

ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿ ಮೀನಾಳ ಕೊಲೆ ಖಂಡಿಸಿ ಧಾರವಾಡದಲ್ಲಿ ಬೃಹತ್ ಪ್ರತಿಭಟನೆ

ಇತ್ತೀಚೆಗೆ ಕೊಡಗು ಜಿಲ್ಲೆಯ ಸೋಮವಾರಪೇಟೆಯ ಸೂರ್ಲಬ್ಬಿಯಲ್ಲಿ ನಡೆದ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿ ಕು. ಮೀನಾಳ ಕೊಲೆಯನ್ನು ಖಂಡಿಸಿ ಧಾರವಾಡ ಜಿಲ್ಲಾ ಅಹಿಂದ…

49 mins ago

ಜೀವಂತವಾಗಿರುವ ಮಹಿಳೆ ಸತ್ತಿರೋದಾಗಿ ಘೋಷಿಸಿರುವ ಆಹಾರ ಇಲಾಖೆ

ವಿಜಯನಗರ ಜಿಲ್ಲೆ ಕೂಡ್ಲಿಗಿ ಪಟ್ಟಣದ ಅಂಜಿನಮ್ಮ ಎನ್ನುವ ಮಹಿಳೆಯೋರ್ವರು, ಆಹಾರ ಇಲಾಖೆಯ ಯಡವಟ್ಟಿನಿಂದ ಅವರು ಸೌಕರ್ಯಗಳಿಂದ ವಂಚಿಯರಾಗಿದ್ದಾರೆ.

50 mins ago

ಡಿಮ್ಹಾನ್ಸ್ ಸಂಸ್ಥೆಯಲ್ಲಿ ಶ್ರೀ ಜಗಜ್ಯೋತಿ ಬಸವೇಶ್ವರ ಜಯಂತಿ ಆಚರಣೆ

ಶ್ರೀ ಜಗಜ್ಯೋತಿ ಬಸವಣ್ಣನವರು 12ನೇ ಶತಮಾನದಲ್ಲಿ ಎಲ್ಲರಿಗೂ ಸಮಾನತೆ ಇರಬೇಕೆಂಬ ಒಳ್ಳೆಯ ಆಲೋಚನೆಯನ್ನು ಇಟ್ಟುಕೊಂಡು ಜಾತಿ ಪದ್ದತಿ ನಿರ್ಮೂಲನೆ ಮಾಡಲು,…

1 hour ago

ಹುಬ್ಬಳ್ಳಿ: ಕ್ಷುಲ್ಲಕ ವಿಚಾರಕ್ಕೆ ಯುವಕನೊರ್ವನ ಮೇಲೆ ಹಲ್ಲೆ

ಕ್ಷುಲ್ಲಕ ವಿಚಾರಕ್ಕೆ ಯುವಕನೊರ್ವನ ಮೇಲೆ ಗುಂಪೊಂದು ಜಾತಿ ನಿಂದನೆ ಮಾಡಿ, ಹಲ್ಲೇ ಮಾಡಿರುವ ಘಟನೆ ಗೋಪ್ಪನಕೊಪ್ಪದ ಗೊಲ್ಲರ ಓಣಿಯಲ್ಲಿ ನಡೆದಿದೆ.

2 hours ago