News Karnataka Kannada
Friday, April 19 2024
Cricket
ಉಡುಪಿ

ಇನ್ನಾ ಕಾಪಿ ನಾಲ್ ಬಾಜಿಲ್ತಾರ್ ಕೆರೆಗೆ ಬೇಕಿದೆ ಕಾಯಕಲ್ಪ

ಕೆರೆಗಳು ಜನ ಜೀವನದ ಜೀವನಾಡಿ. ಒಂದು ಊರು ಬೆಳೆದು,ಸಮೃದ್ಧಿ ಯಾಗಬೇಕಾದರೆ ಕೆರೆಗಳು ಬೇಕು. ಕೆರೆಗಳು ಮುಖ್ಯವಾಗಿ ಕೃಷಿ ,ನೀರಾವರಿ, ಕುಡಿಯುವ ನೀರು ಅಂತರ್ಜಲ ಮಟ್ಟ ಕಾಪಾಡುವಿಕೆ, ಮೀನುಗಾರಿಕೆಗೆ ಹಲವು ರೀತಿಯಲ್ಲಿ ಉಪಯುಕ್ತವಾಗಿದೆ.
Photo Credit : NewsKarnataka

ಕಾರ್ಕಳ: ಕೆರೆಗಳು ಜನ ಜೀವನದ ಜೀವನಾಡಿ. ಒಂದು ಊರು ಬೆಳೆದು, ಸಮೃದ್ಧಿ ಯಾಗಬೇಕಾದರೆ ಕೆರೆಗಳು ಬೇಕು. ಕೆರೆಗಳು ಮುಖ್ಯವಾಗಿ ಕೃಷಿ, ನೀರಾವರಿ, ಕುಡಿಯುವ ನೀರು ಅಂತರ್ಜಲ ಮಟ್ಟ ಕಾಪಾಡುವಿಕೆ, ಮೀನುಗಾರಿಕೆಗೆ ಹಲವು ರೀತಿಯಲ್ಲಿ ಉಪಯುಕ್ತವಾಗಿದೆ.

ಇಂದು ಪ್ರತಿಯೊಂದು ಗ್ರಾಮಗಳ ಕೆರೆಗಳ ಸ್ಥಿತಿ ಚಿಂತಾ ಜನಕವಾಗಿದ್ದು ಒತ್ತುವರಿ ಮತ್ತು ಹೂಳು ತುಂಬಿರುವಿಕೆಯಿಂದ ಕೆರೆಗಳ ನೀರು ಶೇಖರಣ ಸಾಮರ್ಥ್ಯ ಕುಂಠಿತಗೊಂಡಿದೆ .

ಕಾರ್ಕಳ ತಾಲೂಕಿನ ಇನ್ನಾ ಗ್ರಾಮ ಪಂಚಾಯತ್ ವ್ಯಾಪ್ತಿಯ ಶಾಂಭವಿ ನದಿಯ ಪಕ್ಕದಲ್ಲಿರುವ ಕಾಫಿನಾಲ್ ಬಾಜಿಲ್ತಾರ್ ಕೆರೆ ಹೂಳು ತುಂಬಿಕೊಂಡು ನಿರ್ವಹಣೆ ಇಲ್ಲದೆ ಕೆರೆ ಮುಚ್ಚಿ ಹೋಗುವ ಪರಿಸ್ಥಿತಿಯಲ್ಲಿದೆ. ಸುಮಾರು 2. 73 ಎಕ್ರೆ ವಿಶಾಲ ಜಾಗದಲ್ಲಿ ಕೆರೆಯಿದ್ದು ಕೆರೆ ಸಂಪೂರ್ಣ ಅಭಿವೃದ್ಧಿ ಮಾಡಿದರೆ ಇನ್ನಾ ಗ್ರಾಮಕ್ಕೆ ನೀರು ಪೂರೈಸುವಷ್ಟು  ಸಾಮರ್ಥ್ಯವನ್ನು ಹೊಂದಿದೆ. ನೀರಿನ ಅಂತರ್ಜಲ ಮಟ್ಟ ಹೆಚ್ಚಾಗಿ ಈ ಭಾಗದ ರೈತರಿಗೆ ಇದರಿಂದ ಬಹಳಷ್ಟು ಪ್ರಯೋಜನ ಇದೆ. ಪ್ರವಾಸೋದ್ಯಮ ಇಲಾಖೆಯಿಂದ ಅನುದಾನ ದೊರೆತಲ್ಲಿ ಸುಂದರ ಪ್ರೇಕ್ಷಣೀಯ ಪ್ರವಾಸೋದ್ಯಮ ತಾಣನ್ನಾಗಿಸಲು ವಿಪುಲ ಅವಕಾಶವಿದೆ.

ಪ್ರತಿ ಗ್ರಾಮದ ಜನರಿಗೆ ನೀರು ಪೂರೈಕೆ ಮಾಡುವ ಜಲಜೀವನ್ ಮಿಷನ್ ಯೋಜನೆಯಡಿ ವಾರಹಿಯಿಂದ ನೀರು ಪೂರೈಕೆ ಯಾಗಲು ಪೈಪ್ ಲೈನ್ ಗೆ ಕಾಮಗಾರಿಗಳು ನಡೆಯುತ್ತಿದ್ದು ಮಳೆಯ ಅಭಾವದಿಂದ ವಾರಾಹಿಯಲ್ಲಿ ನೀರಿನ ಪ್ರಮಾಣ ಕಡಿಮೆಯಾಗಿದ್ದು ಪ್ರತಿ ಗ್ರಾಮಗಳಿಗೆ ಬೇಸಿಗೆ ಸಮಯದಲ್ಲಿ ನೀರು ಪೂರೈಕೆ ಮಾಡಲು ಕಷ್ಟ ಸಾಧ್ಯ. ಆದುದರಿಂದ ಶಾಂಭವಿ ನದಿಯ ಪಕ್ಕದಲ್ಲಿರುವ ಇರುವ ಕಾಫಿನಾಲು ಬಾಜಿಲ್ತಾರ್ ಕೆರೆಯನ್ನು ಸಂಬಂಧಪಟ್ಟ ಇಲಾಖೆ ಅಭಿವೃದ್ಧಿಪಡಿಸಿ ಇಡೀ ಇನ್ನಾ ಗ್ರಾಮಕ್ಕೆ ಕೆರೆಯಿಂದ ನೀರು ಪೂರೈಕೆ ಮಾಡುವಂತಹ ಯೋಜನೆ ಹಮ್ಮಿಕೊಂಡರೆ ಗ್ರಾಮದ ನೀರಿನ ಸಮಸ್ಯೆಯನ್ನು ಬಗೆಹರಿಸಬಹುದು. ಹಾಗೂ ಈ ಭಾಗದ ರೈತರಿಗೆ ಬಹಳಷ್ಟು ಪ್ರಯೋಜನವಾಗಲಿದೆ.

ಶಾಂಭವಿ ನದಿಯ ಪಕ್ಕದಲ್ಲಿರುವ ಪುರಾತನ ಕೆರೆಯಾದ ಕಾಫಿನಾಲು ಕೆರೆ ಹೂಳು ತುಂಬಿಕೊಂಡು ನೀರು ಕಲುಷಿತಗೊಂಡಿದೆ. ಈ ಕೆರೆಯನ್ನು ಅಭಿವೃದ್ಧಿಪಡಿಸಿದರೆ ಇನ್ನಾ ಗ್ರಾಮಕ್ಕೆ ಕುಡಿಯುವ ನೀರಿನ ಪೂರೈಕೆ ಮಾಡಲು ಸಾಧ್ಯವಿದೆ.

ಕೆರೆ ಸುತ್ತಮುತ್ತ ಬಂಡೆಯಿದ್ದು ಪ್ರವಾಸೋದ್ಯಮ ಇಲಾಖೆಯಿಂದ ಅಭಿವೃದ್ಧಿಪಡಿಸಿದರೆ ಸುಂದರ ಪ್ರೇಕ್ಷಣೀಯ ಸ್ಥಳವನ್ನಾಗಿಸಬಹುದು ಎಂದು ಕುಶ ಆರ್ ಮೂಲ್ಯ ನಿಕಟ ಪೂರ್ವ ಗ್ರಾಮ ಪಂಚಾಯತ್ ಅಧ್ಯಕ್ಷರು ತಿಳಿಸಿದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು