News Karnataka Kannada
Thursday, April 25 2024
Cricket
ಉಡುಪಿ

ಕುಂದಾಪುರ: ಧರೆಗುರುಳಿದ ಹೆಮ್ಮಾಡಿ ಸರಕಾರಿ ಶಾಲೆ ಕಟ್ಟಡ

Hemmadi government school building collapses
Photo Credit : News Kannada

ಕುಂದಾಪುರ: ಸರಕಾರಿ ಹಿರಿಯ ಪ್ರಾಥಮಿಕ ಹೆಮ್ಮಾಡಿ ಶಾಲೆಯಲ್ಲಿ ಶಿಥಿಲಾವಸ್ಥೆಯಲ್ಲಿದ್ದ ಕಟ್ಟಡ ಬಾರಿ ಮಳೆಗೆ ಶನಿವಾರ ರಾತ್ರಿ ಧರೆಗುರುಳಿದೆ. ಶಾಲೆ ರಜಾ ದಿನವಾದ್ದರಿಂದ ಬಾರಿ ಅನಾಹುತ ತಪ್ಪಿದ್ದು ಮಕ್ಕಳ ಪೋಷಕರು ನಿಟ್ಟುಸಿರು ಬಿಟ್ಟಿದ್ದಾರೆ.

ಶತಮಾನದ ಇತಿಹಾಸವನ್ನು ಹೊಂದಿರುವ ಸರಕಾರಿ ಹಿರಿಯ ಪ್ರಾಥಮಿಕ ಹೆಮ್ಮಾಡಿ ಶಾಲೆಯ ಕಟ್ಟಡ ದುರ್ಬಲವಾಗಿದ್ದು ಕಟ್ಟಡವನ್ನು ತೆರವುಗೊಳಿಸುವಂತೆ ವರ್ಷದ ಹಿಂದೆ ಶಿಕ್ಷಣ ಇಲಾಖೆಗೆ ಮನವಿಯನ್ನು ಸಲ್ಲಿಸಲಾಗಿತ್ತು. ಮನವಿಗೆ ಸ್ಪಂದನೆ ಮಾಡದ ಶಿಕ್ಷಣ ಇಲಾಖೆ ಶಿಥಿಲಾವಸ್ಥೆಯಲ್ಲಿದ್ದ ಕಟ್ಟಡವನ್ನು ತೆರವುಗೊಳಿಸುವ ಗೋಜಿಗೆ ಹೋಗಿರಲಿಲ್ಲ.

ಏಳು ಕೋಣೆಗಳನ್ನು ಹೊಂದಿರುವ ಉದ್ದನೆಯ ಶಾಲಾ ಕಟ್ಟಡದ ಮೂರು ಕೋಣೆಗಳು ಶಿಥಿಲಗೊಂಡಿದ್ದವು. ಮಳೆಯ ಹೊಡೆತಕ್ಕೆ ಶಿಥಿಲಗೊಂಡಿದ್ದ ಎರಡು ಕೋಣೆಗಳು ಧರೆಗೆ ಉರುಳಿ ಬಿದ್ದಿದೆ. ಇನ್ನೊಂದು ಕೋಣೆ ಬೀಳುವ ಹಂತದಲ್ಲಿದೆ. ಶಿಥಿಲಗೊಂಡಿದ್ದ ಪಕ್ಕದ ಕೋಣೆಯಲ್ಲಿ ವಿದ್ಯಾರ್ಥಿಗಳಿಗೆ ಪ್ರತಿ ದಿನ ಪಾಠ ಪ್ರವಚನವನ್ನು ಮಾಡಲಾಗುತ್ತಿತ್ತು.

ಶಿಥಿಲಾವಸ್ಥೆಯಲ್ಲಿದ್ದ ಕಟ್ಟಡ ಧರೆಗೆ ಉರುಳಿ ಬಿದ್ದಿರುವುದು ಭಾನುವಾರ ಬೆಳಿಗ್ಗೆ ಗೋಚರಕ್ಕೆ ಬಂದಿದೆ. ರಜಾ ದಿನದಲ್ಲಿ ಕಟ್ಟಡ ಬಿದ್ದಿರುವುದರಿಂದ ಮಕ್ಕಳ ಪೋಷಕರು ನಿಟ್ಟುಸಿರು ಬಿಟ್ಟಿದ್ದಾರೆ.

ಶಾಲೆಯ ಕಟ್ಟಡದ ಮೂರು ಕೋಣೆಗಳು ಶಿಥಿಲಗೊಂಡಿದ್ದು ದುರ್ಬಲ ಕಟ್ಟಡವನ್ನು ತೆರವು ಮಾಡುವಂತೆ ಗ್ರಾಮಸ್ಥರು ಶಿಕ್ಷಣ ಇಲಾಖೆಗೆ ಮನವಿಯನ್ನು ನೀಡಿದ್ದರು. ಸಾರ್ವಜನಿಕರ ಮನವಿಗೆ ಶಿಕ್ಷಣ ಇಲಾಖೆ ಯಾವುದೇ ರೀತಿ ಸ್ಪಂದನೆ ತೊರದೆ ನಿರುತ್ಸಾಹದ ಧೋರಣೆ ತಾಳಿದೆ ಎಂದು ಗ್ರಾಮಸ್ಥರು ದೂರಿದ್ದಾರೆ.ಶಿಕ್ಷಣ ಇಲಾಖೆ ಬೇಜವಾಬ್ದಾರಿ ತನದಿಂದ ಕಟ್ಟಡ ನೆಲಕ್ಕೆ ಉರುಳಿ ಬಿದ್ದಿದೆ ರಜಾ ದಿನವಾದ್ದರಿಂದ ಅದೃಷ್ಟವಶಾತ್ ಮಕ್ಕಳು ಪಾರಾಗಿದ್ದರೆ ಎಂದು ಮಕ್ಕಳ ಪೋಷಕರು ಹೇಳುತ್ತಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು