News Karnataka Kannada
Wednesday, April 24 2024
Cricket
ಉಡುಪಿ

ಕಾರ್ಕಳ: ರಸ್ತೆಗೆ ಬಾಗಿ ನಿಂತ ಅಪಾಯಕಾರಿ ಮರಗಳ ಕೊಂಬೆಗಳು

Branches of dangerous trees bent over the road
Photo Credit : News Kannada

ಕಾರ್ಕಳ: ನಗರದ ವಿವಿಧೆಡೆಗಳಲ್ಲಿ ಅಪಾಯಕಾರಿ ಮರಗಳ ಕೊಂಬೆಗಳು ರಸ್ತೆಗೆ ಬಾಗಿ ನಿಂತು ಮಾನವ ಬಲಿಗಾಗಿ ಕಾಯುವಂತಿದೆ. ಹೌದು ಕಾರ್ಕಳ ಪುರಸಭಾ ವ್ಯಾಪ್ತಿಯಲ ಪ್ರಮುಖ ಹಾಗೂ ಒಳ ರಸ್ತೆಗಳಲ್ಲಿ ಕಾಣಸಿಗುವ ದೃಶ್ಯಾವಳಿಯಾಗಿದೆ.

ನಗರದ ಪ್ರಮುಖ ಸ್ಥಳಗಳಲ್ಲಿ ಒಂದಾಗಿರುವ ಬಂಡೀಮಠ ಪರಿಸರದಲ್ಲಿ ಕಾಣ ಸಿಗುವ ದೃಶ್ಯಾವಳಿ ಇದಾಗಿದೆ. ರಸ್ತೆಯ ಇಕ್ಕೆಲೆಗಳಲ್ಲಿ ಗಿಡಗಳನ್ನು ನೆಟ್ಟು ಅಥವಾ ಪ್ರಾಕೃತಿಕ ವಾಗಿ ಬೆಳೆದಿರುವ ಮರಗಳ ಬಹುತೇಕ ಕೊಂಬೆಗಳು ರಸ್ತೆಗೆ ವಾಲಿಕೊಂಡಿವೆ. ವರ್ಷದ ಸರ್ವ ಋತುಗಳ ಕಾಲಗಳಲ್ಲಿ ಇದರಿಂದ ಅಷ್ಟೊಂದು ಅಪಾಯ ಎದುರಾಗದಿದ್ದರೂ, ಮಳೆಗಾಲದಲ್ಲಿ ಇದು ಅಪಾಯವನ್ನೇ‌ ಎದುರಿಗಿಡುತ್ತದೆ.

ಸುರಿತುತ್ತಿರುವ ಮಳೆಯ ನೀರು ಮರದ ಕೊಂಬೆ, ಎಲೆಗಳಲ್ಲಿ ಶೇಖರಣೆಗೊಳ್ಳುತ್ತಿರುವುದು ಒಂದೆಡೆಯಾದರೆ, ಮತ್ತೊಂದೆಡೆಯಲ್ಲಿ ಮರಗಳ ತಳ ಭಾಗದ ಮಣ್ಣು ಮೃದು ವಿನಿಂದ ಕೂಡಿಕೊಂಡಿರುವುದರಿಂದ ಬೀರುಗಳಿಗೆ ಹಿಡಿತವಿರುವುದಿಲ್ಲ.

ಬೀಸುವ ಗಾಳಿ ಹಾಗೂ ಎಲೆಗಳಲ್ಲಿ ಮಳೆ ನೀರು ಹೆಚ್ಚಾಗಿ ಶೇಖಣೆಗೊಳ್ಳುವುದರಿಂದ ಕೊಂಬೆ ಭಾರವಾಗಿ ಒಂದೋ ಕೊಂಬೆಗಳು ಧರೆಶಾಹಿಯಾದರೆ, ಮತ್ತೊಂದೆಡೆಯಲ್ಲಿ ಮರವೇ ಧರೆಶಾಹಿಯಾಗಿರುವ ನಿದರ್ಶನಗಳು ರಾಜ್ಯದ ವಿವಿದೆಗಳಲ್ಲಿ ಸಂಭವಿಸಿದ್ದು, ಹಲವು ಮುಗ್ಧ ಮಾನವ ಜೀವಗಳು ಬಲಿಯಾಗಿವೆ.

ಅದರಲ್ಲೂ ಕಳೆದ ಕೆಲದಿನಗಳ ಹಿಂದೆ ಬೆಳ್ಮಣ್ ಪರಿಸರದಲ್ಲಿ ರಸ್ತೆಗೆ ಮರವೊಂದರ ಕೊಂಬೆ ಮುರಿದು ಬಿದ್ದು ಯುವಕನೊಬ್ಬ ಪ್ರಾಣತೆತ್ತಿರುವ ಕಹಿ‌ಘಟನೆ ಸಂಭವಿಸಿದೆ.‌

ಗ್ರಾಮೀಣ ಪ್ರದೇಶವೂ ಹೊರತಲ್ಲ!
ಮದ್ರಾಡಿ ಜರ್ವತ್ ಎಂಬಲ್ಲಿ ಕಂಡು ಬರುವ ದೃಶಾವಳಿ ಇದಾಗಿದೆ. ಕಳೆದ ಒಂದುವರೆ ತಿಂಗಳ ಹಿಂದೆ ರಸ್ತೆ ವಿಸ್ತರಣೆಯ ನೆಪದಲ್ಲಿ ಮುದ್ರಾಡಿಯ ಜರ್ವತ್ ಪರಿಸರದಲ್ಲಿ ರಸ್ತೆಯ ಇಕ್ಕೆಲೆಗಳಲ್ಲಿರು ಗುಡ್ಡೆಗಳನ್ನು ಅಗೆಯಲಾಗಿದೆ. ನಂತರದ ದಿನಗಳಲ್ಲಿ ಯಾವುದೇ ಅಭಿವೃದ್ಧಿ ಕಾಮಗಾರಿಗಳು ನಡೆಯದೇ ಯಥಾಸ್ಥಿತಿ ಇದೆ.

ರಸ್ತೆ ವಿಸ್ತರಣೆಗಾಗಿ ಗುಡ್ಡೆಯನ್ನು ಅಗೆದು ಹಾಕಿ ಮಣ್ಣನ್ನು ಮಾತ್ರ ಅಲ್ಲಿಂದ ತೆರವುಗೊಳಿಸಿದರೂ, ಅಪಾಯಕಾರಿ ಮರಗಳಿಗೆ ಮುಕ್ತಿ ನೀಡಲಿಲ್ಲ. ಪರಿಣಾಮವಾಗಿ ಗುಡ್ಡೆ ಬದಿಯ ಮರಗಳು ರಸ್ತೆಗೆ ವಾಲಿಕೊಂಡಿದೆ.

ಹೆಬ್ರಿ- ಕಾರ್ಕಳ ಸಂಪರ್ಕಿಸುವ ರಸ್ತೆಯಾಗಿದ್ದು ಮುದ್ರಾಡಿಯ ಜರ್ವತ್ ಪ್ರದೇಶದ ಮೂಲಕವಾಗಿ ಹಾದೂ ಹೋಗುವ ವಾಹನ ಸವಾರರು, ಚಾಲಕರು, ಪಾದಚಾರಿಗಳು ಎಚ್ಚರಿಕೆಯಿಂದ ಪ್ರಯಾಣ ಮುಂದುವರಿಸಲೇ ಬೇಕಾಗಿದೆ ಎಂದು ಸ್ಥಳೀಯರ ಕೋರಿಕೆಯಾಗಿದೆ.

ಜಿಲ್ಲಾಡಳಿತ, ಸ್ಥಳೀಯಾಡಳಿತ ಹಾಗೂ ಅರಣ್ಯ ಇಲಾಖೆ‌ ಈ ಕುರಿತು ಗಮನ ಹರಿಸಿ ಅಪಾಯಕಾರಿ ಮರಗಳ ಕೊಂಬೆಗಳನ್ನು ತೆರವುಗೊಳಿಸಬೇಕೆಂಬುವುದು ನಾಗರಿಕರ ಆಗ್ರಹವಾಗಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12792
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು