Categories: ಉಡುಪಿ

ಕುಚ್ಚಲಕ್ಕಿ ನೀಡಲಾಗದ ಬಿಜೆಪಿ ಮುಖಂಡರಿಗೆ ಅಧಿಕಾರದ ಚಡಪಡಿಕೆ: ರಮೇಶ್ ಕಾಂಚನ್

ಉಡುಪಿ: ಕರಾವಳಿಗರಿಗೆ ಕುಚ್ಚಲು ಅಕ್ಕಿಯನ್ನು ವಿತರಣೆ ಮಾಡುವುದಾಗಿ ಜನರಿಗೆ ಟೋಪಿ ಹಾಕಿ ಈಗ ಕಾಂಗ್ರೆಸ್ ಗ್ಯಾರಂಟಿ ಬಗ್ಗೆ ದಿನನಿತ್ಯ ಮಾಧ್ಯಮಗಳಲ್ಲಿ ಹೇಳಿಕೆ ನೀಡಿ ಜನರಲ್ಲಿ ಗೊಂದಲ ಎಬ್ಬಿಸುತ್ತಿರುವ ಮಾಜಿ ಸಚಿವ ಹಾಗೂ ವಿಧಾನಪರಿಷತ್‌ ಸದಸ್ಯರಾದ ಕೋಟ ಶ್ರೀನಿವಾಸ್ ಪೂಜಾರಿಯವರ ಸ್ಥಿತಿ ನೋಡಿ ನಿಜಕ್ಕೂ ಮರುಕಪಡುವಂತಾಗಿದೆ ಎಂದು ಉಡುಪಿ ಕಾಂಗ್ರೆಸ್ ಸಮಿತಿ ಅಧ್ಯಕ್ಷ ರಮೇಶ್ ಕಾಂಚನ್ ಹೇಳಿದ್ದಾರೆ.

ಸಚಿವರು ತಮ್ಮ ಬಿಜೆಪಿ ಸರಕಾರ ಇದ್ದಾಗ ಪ್ರತಿನಿಧಿ’ ಎಂಬಂತೆ ಕರಾವಳಿಗರಿಗೆ ಕುಚ್ಚಲು ಅಕ್ಕಿ ಪಡಿತರ ಕೇಂದ್ರದಲ್ಲಿ ವಿತರಿಸುವುದಾಗಿ ಹೇಳಿಕೊಂಡು ಬಂದಿದ್ದು ಬಿಟ್ಟರೆ ಕೊನೆತನಕವೂ ಅದನ್ನು ಜಾರಿಮಾಡಲು ಅವರಿಂದ ಸಾಧ್ಯವಾಗಿಲ್ಲ. ಕೊನೆಗೆ ಅವರು ಸೂಕ್ತ ಪ್ರಮಾಣದಲ್ಲಿ ಕುಚ್ಚಿಲು ಅಕ್ಕಿ ಮಾರುಕಟ್ಟೆಯಲ್ಲಿ ಲಭ್ಯವಾಗದ ಕಾರಣ ನೀಡಲು ಸಾಧ್ಯವಾಗಿಲ್ಲ ಎಂದು ತೇಪೆ ಹಚ್ಚುವ ಕೆಲಸ ಮಾಡಿದ್ದಾರೆ ಎಂದರು.

ಕಾಂಗ್ರೆಸ್‌ ಪಕ್ಷ ಗ್ಯಾರೆಂಟಿ ಕಾರ್ಡ್‌ ನಲ್ಲಿ ನೀಡಿದ್ದ ಭರವಸೆಯನ್ನು ಈಡೇರಿಸಲು ಬದ್ಧವಾಗಿದೆ ಎಂದು ಮುಖ್ಯ ಮಂತ್ರಿ ಹಾಗೂ ಉಪಮುಖ್ಯಮಂತ್ರಿ ಈಗಾಗಲೇ ಸ್ಪಷ್ಟನೆ ನೀಡಿದ್ದರೂ ಸಹ ಪ್ರತಿನಿತ್ಯ ಬಿಜೆಪಿಗರು ತಮ್ಮ ಕುಹಕಗಳನ್ನು ಮುಂದುವರಿಸಿದ್ದಾರೆ. ಗ್ಯಾರಂಟಿ ಕಾರ್ಡ್‌ ನಲ್ಲಿ ಭರವಸೆಗಳಿಗೆ ಸೂಕ್ತವಾದ ಹಣಕಾಸು ವ್ಯವಸ್ಥೆಯ ಬಗ್ಗೆ ಪರಿಶೀಲನೆ ಮಾಡಿ ಅದಕ್ಕೆ ಅಗತ್ಯವಾದ ಮನದಂಡಗಳನ್ನು ರಚಿಸಿ ಅಧಿಕೃತವಾಗಿ ಎರಡು ದಿನಗಳಲ್ಲಿ ಮುಖ್ಯ ಮಂತ್ರಿಗಳು ಘೋಷಣೆ ಮಾಡಲಿದ್ದಾರೆ. ಅಲ್ಲಿಯ ತನಕ ಕಾಯುವ ಬದಲು ಬಿಜೆಪಿ ಪಕ್ಷದ ನಾಯಕರು ಜನರನ್ನು ಎತ್ತಿಕಟ್ಟುವ ಕೆಲಸ ಮಾಡುತ್ತಿರುವುದು ಅವರಿಗೆ ಅಧಿಕಾರ ಇಲ್ಲದೆ ಆಗುತ್ತಿರುವ ಚಡಪಡಿಕೆ ಎನ್ನುವುದು ಎದ್ದು ಕಾಣುತ್ತದೆ.

ಪ್ರಧಾನಿ ನರೇಂದ್ರ ಮೋದಿ ಅವರಿಗೆ ವಿದೇಶದಲ್ಲಿರುವ ಕಪ್ಪು ಹಣ ತರುವುದಕ್ಕೆ ಸಾಧ್ಯವಾಗಿಲ್ಲ. ಬೆಲೆಯೇರಿಕೆ ಒಂದೇ ಇವರ 9 ವರ್ಷಗಳ ಸಾಧನೆ ಎಂದರು. ಹೀಗಾಗಿ ಬಡ ಜನರಿಗಾಗಿ ಕಾಂಗ್ರೆಸ್ ತಂದಿರುವ 5 ಗ್ಯಾರಂಟಿಗಳು ಜಾರಿಯಾದರೆ ಮುಂದೆ ಬಿಜೆಪಿ ಪಕ್ಷಕ್ಕೆ ನಲೆ ಇಲ್ಲದಂತಾಗುತ್ತದೆ ಎಂಬುದು ಬಿಜೆಪಿ ನಾಯಕರ ಹೆಣಗಾಟವಾಗಿದೆ.

ಬಿಜೆಪಿ ನಾಯಕರ ಮೋಸ ಕಂಡು ಈ ಬಾರಿ ಕಾಂಗ್ರೆಸ್‌ ಗೆ ಜನ ಅಧಿಕಾರ ನೀಡಿದ್ದಾರೆ. ಎಷ್ಟೇ ಕಷ್ಟವಾದರೂ ಕಾಂಗ್ರೆಸ್‌ ಗ್ಯಾರಂಟಿ ಯೋಜನೆ ಗಳನ್ನು ಜಾರಿಗೊಳಿಸಲು ಬದ್ಧ ಎಂದು ರಮೇಶ್‌ ಕಾಂಚನ್‌ ಹೇಳಿದ್ದಾರೆ.

Gayathri SG

Recent Posts

ನಾಳೆ (ಏ. 29) ಬಾಗಲಕೋಟೆಗೆ ಪ್ರಧಾನಿ ಮೋದಿ ಆಗಮನ

ಲೋಕಸಭಾ ಚುನಾವಣೆ ಪ್ರಯುಕ್ತ ವಿಜಯಪುರ ಹಾಗೂ ಬಾಗಲಕೋಟೆ ಅವಳಿ ಜಿಲ್ಲೆ ಬಿಜೆಪಿ ಅಭ್ಯರ್ಥಿಗಳ ಪರ ಪ್ರಚಾರಾರ್ಥ ವಿಶ್ವನಾಯಕ, ದೇಶದ ನೆಚ್ಚಿನ…

43 mins ago

1.5 ಲಕ್ಷ ಮೌಲ್ಯದ ನಶೆ ಗುಳಿಗೆ ವಶಕ್ಕೆ ಪಡೆದ ಅಬಕಾರಿ ಇಲಾಖೆ

ಅಬಕಾರಿ ಅಧಿಕಾರಿಗಳ ಖಚಿತ ಮಾಹಿತಿ ಮೇರೆಗೆ ನಗರದ ಮಾಂಗರವಾಡಿ ಗಲ್ಲಿಯ ಮನೆಯೊಂದರ ಮೇಲೆ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಅಬಕಾರಿ ಇಲಾಖೆ…

60 mins ago

ಮೋದಿಯನ್ನು ಮತ್ತೊಮ್ಮೆ ಪ್ರಧಾನ ಮಂತ್ರಿ ಸ್ಥಾನಕ್ಕೇರಿಸಬೇಕು: ಅರವಿಂದ ಬೆಲ್ಲದ

ಹಲವಾರು ಅಭಿವೃದ್ಧಿ ಕಾರ್ಯಗಳನ್ನು ಅನುಷ್ಠಾನಗೊಳಿಸಿರುವ ನರೇಂದ್ರ ಮೋದಿ ಅವರನ್ನು ಬೆಂಬಲಿಸುವ ಮುಖಾಂತರ ಮತ್ತೊಮ್ಮೆ ಪ್ರಧಾನ ಮಂತ್ರಿ ಸ್ಥಾನಕ್ಕೇರಿಸಬೇಕು ಎಂದು ವಿಧಾನಸಭೆಯ…

1 hour ago

ವಾಕಿಂಗ್ ಗೆ ಹೋದ ಪೊಲೀಸ್‌ ಕಾನಸ್ಟೇಬಲ್‌ ನಾಪತ್ತೆ

ವಾಕಿಂಗ್ ಮಾಡಲು ಹೋಗಿದ್ದ ಪೊಲೀಸ್‌ ಕಾನಸ್ಟೇಬಲ್‌ ಒಬ್ಬರು ವಾಪಾಸ್ ಮನೆಗೆ ಬಾರದೇ ಕಾಣೆಯಾಗಿರುವ ಘಟನೆ ಏಪ್ರಿಲ್ 24 ರಂದು ನಡೆದಿದ್ದು,…

2 hours ago

ಸುನೀಲ್ ಬೋಸ್ 1 ಲಕ್ಷಕ್ಕೂ ಹೆಚ್ಚು ಮತಗಳಿಂದ ಜಯಗಳಿಸಲಿದ್ದಾರೆ : ಮಾಜಿ ಶಾಸಕ ಆರ್ ನರೇಂದ್ರ

ಮೀಸಲು ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಸುನೀಲ್ ಬೋಸ್ ರವರು ಒಂದು ಲಕ್ಷಕ್ಕೂ ಹೆಚ್ಚು ಮತಗಳಿಂದ ಜಯಗಳಿಸಲಿದ್ದಾರೆ ಎಂದು…

2 hours ago

ಸೈಕಲ್​ ಗೆ ಪಿಕಪ್ ಡಿಕ್ಕಿ ಹೊಡೆದು 2 ಕಿಲೋ ಮೀಟರ್​ವರೆಗೆ ಎಳೆದೊಯ್ದ ಡ್ರೈವರ್

ಸೈಕಲ್​ನಲ್ಲಿ ಹೋಗುತ್ತಿದ್ದ ವ್ಯಕ್ತಿಗೆ ಪಿಕಪ್​ ವಾಹನವೊಂದು ಡಿಕ್ಕಿ ಹೊಡೆದು 2 ಕಿಲೋ ಮೀಟರ್​ವರೆಗೆ ಎಳೆದುಕೊಂಡು ಹೋಗಿರುವ ಘಟನೆ ಹರಿಯಾಣದ ಸಿರ್ಸಾದ…

2 hours ago