News Karnataka Kannada
Monday, April 22 2024
Cricket
ಉಡುಪಿ

ಹತ್ತು ಕೆಜಿ ಅಕ್ಕಿ ಕೊಡಲು ಆಗದಿದ್ದರೆ ರಾಜ್ಯದ ಜನರಲ್ಲಿ ಕ್ಷಮೆ ಕೇಳಿ: ಮಾಜಿ ಸಚಿವ ಕೋಟ ಟೀಕೆ

Kota appointed leader of opposition in Legislative Council, Bellad appointed deputy leader of opposition
Photo Credit : News Kannada

ಉಡುಪಿ: ಹತ್ತು ಕೆಜಿ ಅಕ್ಕಿ ಕೊಡಲು ಆಗದಿದ್ದರೆ ರಾಜ್ಯದ ಜನರ ಕ್ಷಮೆ ಕೇಳಿ. ಆಗ ನಿಮ್ಮನ್ನು ಜನತೆ ಕ್ಷಮಿಸಬಹುದು. ಆದರೆ ಕೇಂದ್ರದ ಅಕ್ಕಿಯನ್ನು ನಮ್ಮ ಅಕ್ಕಿ ಎಂದು ಹೇಳಿ ಅಪಹಾಸ್ಯಕ್ಕೆ ಒಳಗಾಗಬೇಡಿ. ರಾಜ್ಯದ ಆಡಳಿತ ಸೂತ್ರ ಹಿಡಿದವರಿಗೆ ಇದು ಗೌರವ ತರುವುದಿಲ್ಲ ಎಂದು ಮಾಜಿ ಸಚಿವ ಕೋಟ‌ ಶ್ರೀನಿವಾಸ ಪೂಜಾರಿ ಟೀಕಿಸಿದರು.

ಉಡುಪಿಯಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯ ಸರಕಾರ ಸತ್ಯಕ್ಕೆ ಅಪಚಾರ ಆಗದಂತೆ ನಡೆದುಕೊಳ್ಳಬೇಕು. ಆಹಾರ ಭದ್ರತಾ ಕಾಯಿದೆಯನ್ನು ಯುಪಿಎ ಸರ್ಕಾರ ಮಾಡಿದ್ದರೂ ಅದು ಅನುಷ್ಠಾನ ಆಗಿರಲಿಲ್ಲ. ಆಹಾರ ಭದ್ರತಾ ಕಾಯ್ದೆ ಮನಮೋಹನ್ ಸಿಂಗ್ ಕಾಲದ್ದು. ಇದು ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದ್ದಾಗ ಮಾಡಿದ ಕಾಯ್ದೆ ಎಂದು ಡಿಕೆಶಿ, ಲಾಡ್ ಹೇಳುತ್ತಾರೆ. ಇಂತಹ ಮಾತುಗಳನ್ನು ಡಿಸಿಎಂ ಬಾಯಿಯಿಂದ ನಾವು ನಿರೀಕ್ಷೆ ಮಾಡಿಲ್ಲ. ಅವರಿಬ್ಬರು ತಮ್ಮ ಹೇಳಿಕೆಯನ್ನ ಮತ್ತೆ ಪುನರ್ ಪರಿಶೀಲನೆ ಮಾಡಿಕೊಳ್ಳಬೇಕು ಎಂದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು